Karnataka CM: ಕಾಂಗ್ರೆಸ್ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ (Karnataka CM) ಆಯ್ಕೆಯ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವಂತಹಾ ಮುಖ್ಯಮಂತ್ರಿ ಆಯ್ಕೆಯನ್ನು ಅಂತಿಮಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ನಾಯಕರು ತಮ್ಮ ಪಟ್ಟು ಸಡಿಸುತ್ತಿಲ್ಲ. ಇದರಿಂದಾಗಿ ನಾಳೆ ದೆಹಲಿಯಲ್ಲಿ ಬೆಳಿಗ್ಗೆ 11ಕ್ಕೆ ಸಿಎಂ ಆಯ್ಕೆ ಬಗ್ಗೆ ಫೈನಲ್ ಮೀಟಿಂಗ್ ನಡೆಯಲಿದೆ. ಅದರ ನಂತರವೇ ಕರ್ನಾಟಕದ ಮುಂದಿನ ಸಿಎಂ ಹೆಸರು ಪ್ರಕಟವಾಗಲಿದೆ ಎನ್ನಲಾಗಿದೆ.
ಕರ್ನಾಟಕ ಸಿಎಂ ಆಯ್ಕೆ ಬಗ್ಗೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಸಲಾಯಿತು. ಮೊದಲು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕೆ.ಸಿ ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಎಐಸಿಸಿ ಅಧ್ಯಕ್ಷರು ಭಾಗಿಯಾಗಿ ಸಭೆಯಲ್ಲಿ ಚರ್ಚಿಸಿದರು. ಈ ಬಳಿಕ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ರೇಸ್ ನಲ್ಲಿರುವಂತಹಾ ಡಿಕೆಶಿ ಜತೆಗೆ ಏಕಾಂಗಿ ಮೀಟಿಂಗ್ ನಡೆಸಿದರು. ನಂತರ ಸಿದ್ಧರಾಮಯ್ಯ ಅವರ ಜತೆ ಖರ್ಗೆಯವರು ಓನ್ ಟು ಒನ್ ಮೀಟಿಂಗ್ ಮಾಡಿ ಚರ್ಚಿಸಿದರು.
ಖರ್ಗೆ ಭೇಟಿಯಾದಂತ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಕೂಡ ನನಗೆ ಮುಖ್ಯಮಂತ್ರಿ ಹುದ್ದೆಯೇ ಬೇಕು ಎಂಬುದಾಗಿ ಹೇಳಿದ್ದಾರೆ. ಇಬ್ಬರು ನಾಯಕರು ಸಿಎಂ ಹುದ್ದೆಗಾಗಿ ಪಟ್ಟು ಹಿಡಿದ ಕಾರಣ ಇಂದು ಕೂಡ ಸಿಎಂ ಆಯ್ಕೆಯನ್ನು ಅಂತಿಮಗೊಳಿಸಲು ಹೈಕಮಾಂಡ್ ಗೆ ಸಾಧ್ಯವಾಗಿಲ್ಲ.
ಹಾಗಾಗಿ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಆಯ್ಕೆ ನಡೆಸಲು ನಾಳೆ ಬೆಳಿಗ್ಗೆ 11ಕ್ಕೆ ಕೊನೆಯ ಸಭೆ ನಡೆಯಲಿದೆ. ಅಲ್ಲಿ ಒಟ್ಟಾರೆ ಚುನಾವಣಾ. ಕೌಂಟಿಂಗ್ ನಂತರದ ಸಿಎಂ ಆಯ್ಕೆಯ ಎಲ್ಲಾ ಪ್ರಕ್ರಿಯೆಗಳು, ಮುಖ್ಯಮಂತ್ರಿ ಆಯ್ಕೆಗೆ ಬಂದ ವೀಕ್ಷಕರ ವರದಿ, ಶಾಸಕರುಗಳ ವಿವಿಧ ಅಭಿಪ್ರಾಯ ಮತ್ತು ಈ ಇಬ್ಬರು ಆಕಾಂಕ್ಷಿಗಳ ಫೀಡ್ ಬ್ಯಾಕ್, ಮತ್ತಿತರ ಕರ್ನಾಟಕದ ಸೀನಿಯರ್ ನಾಯಕರುಗಳ ಮನದಿಂಗಿತ – ಎಲ್ಲವನ್ನೂ ನಾಳಿನ ಸಭೆಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗುವುದು.
ನಾಳಿನ ಈ ಮೀಟಿಂಗ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇರುವಾಗಲೇ ಒಟ್ಟಾಗಿ ಚರ್ಚಿಸಲಾಗುವುದು. ತದನಂತರ ಒಂದು ಎಲ್ಲರೂ ಒಪ್ಪುವ ಒಪ್ಪಿಗೆಯ ಸೂತ್ರ ನೇಯಲಾಗುವುದು ಎನ್ನಲಾಗಿದೆ. ಹಾಗಾಗಿ ನಾಳಿನ ನಡೆಯಲಿರುವಂತ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನು ಓದಿ: Commited suicide: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
