Priyanka chopra: ಬಾಲಿವುಡ್(Bollywood) ಲೋಕದಲ್ಲಿ ಹವಾ ಕ್ರಿಯೇಟ್ ಮಾಡಿ ಸದ್ಯ ಹಾಲಿವುಡ್(Hollywood) ನಲ್ಲಿ ಕಮಾಲ್ ಮಾಡುತ್ತಿರೋ ಪ್ರಿಯಾಂಕ ಚೋಪ್ರಾ(Priyanka chopra) ಅವರು ಸದಾ ಬೋಲ್ಡ್ ಆಗಿಯೇ ಮಾತನಾಡುತ್ತಾರೆ. ಅಂತೆಯೇ ಇದೀಗ ಪ್ರಿಯಾಂಕಾ ಅವರು ತಮ್ಮ ಲೈಂಗಿಕತೆಯ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಮಾತನಾಡಿದ್ದಾರೆ.
ಇತ್ತೀಚೆಗಷ್ಟೆ ಪ್ರಿಯಾಂಕಾ ಚೋಪ್ರಾ ಅವರು ಡೇಟಿಂಗ್(Dating) ವಿಚಾರವಾಗಿ ಮಾತನಾಡಿದ್ದರು. ಮದುವೆಗೂ ಮುನ್ನ ಅನೇಕರ ಜೊತೆ ಡೇಟ್ ಮಾಡಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ತಮ್ಮ ಬಾಯ್ಫ್ರೆಂಡ್ಸ್(Boy friends) ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಟಿ ಹೇಳಿದ್ದರು. ಅಲ್ಲದೆ ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂಬುದನ್ನು ಕೂಡ ಪ್ರಿಯಾಂಕಾ ಬಹಿರಂಗಪಡಿಸಿದ್ದರು. ಆದರೀಗ ಡೇಟ್ ನಲ್ಲಿ ನಡೆಯೋ ಲೈಂಗಿಕ ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದು ಎಲ್ಲೆಡೆ ಭಾರೀ ವೈರಲ್ ಆಗ್ತಿದೆ.
ಹೌದು, ಇತ್ತೀಚೆಗಷ್ಟೆ ಸಿಟಾಡೆಲ್(Citadel) ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟಿ ಪ್ರಿಯಾಂಕಾ ಚಾಟ್(Priyanka Chopra) ಶೋ ಒಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ವಾಚ್ ವಾಟ್ ಹ್ಯಾಪನ್ಸ್ ವಿತ್ ಆಂಡಿ ಕೋಹೆನ್(Watch What Happens With Andy Cohen) ನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಅನೇಕ ಪ್ರಶ್ನೆಗಳು ಎದುರಾಗಿದ್ದು, ಅವುಗಳೆಲ್ಲವಕ್ಕೂ ಅವರು ಯಾವುದೇ ಅಂಜಿಕೆಗಳಿಲ್ಲದೆ ಬೋಲ್ಡ್ ಆಗೇ ಉತ್ತರಿಸಿದ್ದಾರೆ. ಅದರಲ್ಲೂ ಸಂಭೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗಂತೂ ಮನಬಿಚ್ಚಿ ಮಾತನಾಡಿದ್ದಾರೆ.
ಅಂದಹಾಗೆ ಫಸ್ಟ್ ಡೇಟ್(First Date), ಅಲ್ಲಿ ಆಗೋ ಲೈಂಗಿಕ ಕ್ರಿಯೆ ಬಗ್ಗೆ ಮಾತನಾಡಿದ ಬಾಲಿವುಡ್ ಬ್ಯೂಟಿ ಫಸ್ಟ್ ಡೇಟ್‌ನಲ್ಲೇ ಸಂಭೋಗ ಓಕೆ ಎಂದು ಮುಚ್ಚು ಮರೆ ಇಲ್ಲದೆ ಹೇಳಿದ್ದಾರೆ. ಈ ಬಳಿಕ ಪ್ರಿಯಾಂಕಗೆ ಮತ್ತೊಂದು ಪ್ರಶ್ನೆ ಎದುರಾಯಿತು. ಅದನ್ನು ಕೇಳಿದ ಪ್ರಿಯಾಂಕಾ ಜೋರಾಗಿ ನಗಲು ಪ್ರಾರಂಭಿಸಿದರು. ಯಾಕಂದ್ರೆ ಓರಲ್ ಸಂಭೋಗ(Olar Sex) ಅಥವಾ ಚೀಸ್(Chees) ಎರಡರಲ್ಲಿ ಯಾವುದು ಓಕೆ ಎಂದು ಕೇಳಿದರು. ಇದಕ್ಕೆ ಪ್ರಿಯಾಂಕಾ, ‘ನನಗೆ ಓರಲ್ ಸಂಭೋಗದ ಜೊತೆಗೆ ಚೀಸ್ ಕೂಡ ಬೇಕು ‘ ಎಂದು ಹೇಳಿದ್ದಾರೆ. ಅಲ್ಲದೆ ಪಕ್ಕದಲ್ಲೇ ಇದ್ದ ಪ್ರಿಯಾಂಕಾ ಸಹ ನಟ ಸ್ಯಾಮ್ ಕೂಡ ಅದನ್ನೇ ಒಪ್ಪಿಕೊಂಡಿದ್ದಾರೆ.
ಸದ್ಯ ಇದೀಗ ಪ್ರಿಯಾಂಕಾ ಚೋಪ್ರಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸದಾ ಬೋಲ್ಡ್ ಆಗಿಯೇ ಮಾತನಾಡುವ ಪ್ರಿಯಾಂಕಾ ಲೈಂಗಿಕತೆ ಬಗ್ಗೆಯೂ ಯಾವುದೇ ಮುಚ್ಚು ಮರೆ ಇಲ್ಲದೆ ಮಾತನಾಡಿರೋದ್ರಲ್ಲಿ ಅಚ್ಚರಿ ಏನಿಲ್ಲಾ ಬಿಡಿ ಎಂದಿದ್ದಾರೆ.
