ಹೊಸಗನ್ನಡ : ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಗ್ ಫೈಟ್ ನಡುವೆ ಪ್ರಮಾಣ ವಚನಕ್ಕೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ನಾಳೆ ಅಥವಾ ಶನಿವಾರ ಪ್ರಮಾಣ ವಚನ ನಡೆಯುವ ಬಗ್ಗೆ ಕೈ ಪಾಳಯದಲ್ಲಿ ಭಾರೀ ಚರ್ಚೆನಡೆಸಲಾಗುತ್ತಿದೆ. ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಸಮಯವನ್ನು ಕೇಳಿದ್ದು, ಮನವಿ ಮರೆಗೆ ಸೋನಿಯಾ ನಿವಾಸಕ್ಕೆ ಬರೋದಕ್ಕೆ ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ದೆಹಲಿಯ ಜನಪತ್ ನಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಸಿದ್ದರಾಮಯ್ಯ ತೆರಳಲಿದ್ದು, ಮಧ್ಯಾಹ್ನ 12 ಗಂಟೆಗೆ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿ ಭೇಟಿಯಾಗಿ ಸಿಎಂ ಹುದ್ದೆ ಸಂಬಂಧ ಮಹತ್ವದ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲುವಿನ ನಡುವೆ ಸಿಎಂ ಹುದ್ದೆಗಾಗಿ ಭಾರೀ ಸರ್ಕಸ್ ನಡೆಯುತ್ತಿದೆ. ಇಂದು ಅಂತಿಮ ಹಂತದ ಸಭೆ ನಡೆಸಿದ ಚರ್ಚೆ ನಡೆಯಲಿದೆ. ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವ ಮಾಹಿತಿ ಬಹಿರಂಗವಾಗಲಿದೆ..ರಾಜಕೀಯ ವಲಯದಲ್ಲಿ ನಡೆಯುತ್ತಿರೋ ಕೋಲಾಹಲಗಳನ್ನು ಕಾದು ನೋಡಬೇಕಾಗಿದೆ.
