Basavaraj Bommai: ಬೆಂಗಳೂರು : ಕರ್ನಾಟಕದಲ್ಲಿ ಮುಂದಿನ ಸಿಎಂ ಹುದ್ದೆಗೆ ಭಾರೀ ಫೈಟ್ ನಡೆಯುತ್ತಿದ್ದು, ಕೈ ಪಾಳಯಕ್ಕೆ ಪೂರ್ಣ ಬಹುಮತ ಸಿಕ್ಕರೂ ಸಿಎಂ ಆಯ್ಕೆಗೆ ಕಗ್ಗಂಟಾಗಿದೆ ಎಂದು ಹಂಗಾಮಿ ಸಿಎಂ ಬೊಮ್ಮಾಯಿ (Basavaraj Bommai) ಕಿಡಿ ಕಾರಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ವಿಧಾನ ಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಗೆಲುವನ್ನು ಸಾಧಿಸಿದೆ. ಆದರೇ ಪೂರ್ಣ ಬಹುಮತ ಸಿಕ್ಕರೂ ಸಿಎಂ ಆಯ್ಕೆಗೆ ಕಗ್ಗಂಟಾಗಿದೆ. ಇದು ಕಾಂಗ್ರೆಸ್ ಆಂತರಿಕ ಪರಿಸ್ಥಿತಿಯನ್ನು ತೋರಿಸುತ್ತದೆ. ಸಿಎಂ ಆಯ್ಕೆ ಮಾಡೋದು ಪಕ್ಷದ ಆಂತರಿಕ ವಿಚಾರವಾಗಿದೆ. ಕಾಂಗ್ರೆಸ್‌ನವರು ಲಿಂಗಾಯತರನ್ನು ಓಲೈಕೆ ಮಾಡಿದ್ರು, ಲಿಂಗಾಯತ ಸಮುದಾಯಕ್ಕೆ ಸಿಎಂ ಕೊಡ್ತಾರೋ, ಡಿಸಿಎಂ ಹುದ್ದೆ ಕೊಡ್ಯಾರೋ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್ ಭಾರೀ ಬಹು ಮತದೊಂದಿಗೆ ಗೆಲುವನ್ನು ಸಾಧಿಸಿದೆ.ಈ ನಡುವೆ ಮುಂದಿನ ಸಿಎಂ ಹುದ್ದೆಗೆ ಭಾರೀ ಫೈಟ್ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇಂದು ಇಂದು ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಮಹತ್ವ ಚರ್ಚೆ ನಡೆಸಿದ್ದಾರೆ. ಈ ವೇಳೆ ಮುಂದಿನ ನೂತನ ಸಿಎಂ ಸಿದ್ದರಾಮಯ್ಯ ಎನ್ನಲಾಗಿದ್ದು, ಹೈಕಮಾಂಡ್ ಘೋಷಣೆಯೊಂದೆ ಬಾಕಿಯಿದೆ ಎಂದು ವರದಿಯಾಗಿದೆ. ಈಗಾಗಲೇ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದ್ದಂತೆ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ ಎಂದೆನ್ನಬಹುದು.
ಇದನ್ನೂ ಓದಿ:ಅಲ್‌ದಿ ಬೆಸ್ಟ್ ಸಿದ್ದರಾಮಯ್ಯ ಜಿ, ಮತ್ತೆ ಸಿಎಂ ಸ್ಥಾನ ಸೂಕ್ತವಾಗಿ ನಿಭಾಯಿಸಿ :ಶುಭಹಾರೈಸಿದ ರಾಹುಲ್ ಗಾಂಧಿ
