D K Shivkumar: ಕರ್ನಾಟಕದಲ್ಲಿ(Karnataka) ಕಾಂಗ್ರೆಸ್(Congress) ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಸಿಎಂ(CM) ಯಾರು ಎಂಬ ವಿಚಾರ ಇದೂವರೆಗೂ ಕಗ್ಗಂಟಾಗಿಯೇ ಉಳಿದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್(D K Shivkumar) ಇಬ್ಬರೂ ಮೇರು ನಾಯಕರು ತಮಗೇ ಸಿಎಂ ಪಟ್ಟ ಬೇಕೆಂದು ಪಟ್ಟು ಹಿಡಿದು ಕೂತಿದ್ದರು. ಆದರೆ ಇಂದು ಬೆಳಿಗ್ಗೆ ಅಚ್ಚರಿ ಎನ್ನುವಂತೆ ಸಿದ್ದರಾಮಯ್ಯ ಕರ್ನಾಟಕದ ಸಿಎಂ ಎಂದು ಘೋಷಣೆ ಆಗಿದೆ. ಅಲ್ಲದೆ ಕನಕಪುರದ ಬಂಡೆ ಡಿಕೆಶಿ ಕೂಡ ಇದಕ್ಕೆ ಒಪ್ಪಿದ್ದಾರೆ. ಆದ್ರೆ ಆ ಒಂದೇ ಒಂದು ಕರೆ ಡಿ ಕೆ ಶಿವಕುಮಾರ್ ಅವರ ಮನಸ್ಸನ್ನು ಬದಲಾಯಿಸಿತು ಎಂದು ಹೇಳಲಾಗುತ್ತಿದೆ.
ಹೌದು, ಮುಖ್ಯಮಂತ್ರಿ ಹುದ್ದೆ ತನಗೆ ಸಿಗಬೇಕೆಂದು ಪಟ್ಟು ಹಿಡಿದು ಸಿದ್ದರಾಮಯ್ಯಗೆ (Siddaramaiah) ಚೆಕ್ಮೇಟ್ ಕೊಟ್ಟಿದ್ದ ʼಕನಕಪುರದ ಬಂಡೆʼ ಒಂದು ಕರೆಯಿಂದ ಕರಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಾಗಿದ್ದರೆ ಯಾರಿಂದ ಬಂತು ಗೊತ್ತಾ ಆ ಕರೆ? ಅಲ್ಲದೆ ಬುಧವಾರ ತಡ ರಾತ್ರಿ ಏನಾಯ್ತು ಗೊತ್ತಾ?
ಬುಧವಾರ ತಡರಾತ್ರಿ ಏನಾಯ್ತು?
ಒಂದು ಕಡೆ ಸಿದ್ದರಾಮಯ್ಯ ತಂಡ ಇನ್ನೊಂದು ಕಡೆ ಡಿಕೆಶಿ ತಂಡ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಆದೇಶಕ್ಕೆ ಕಾಯುತ್ತಿತ್ತು. ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನಿವಾಸದಲ್ಲಿ ನಡೆದ ಹೈಕಮಾಂಡ್ ಸಭೆಗೆ ಮೊದಲು ಸಿದ್ದರಾಮಯ್ಯ ಆಗಮಿಸಿದರು. ಸಭೆ ನಡೆಯುತ್ತಿದ್ದಾಗಲೇ ಡಿಕೆಶಿ ವೇಣುಗೋಪಾಲ್ ಮನೆಗೆ ಆಗಮಿಸಿದ್ದರೂ ಒಳ ಪ್ರವೇಶ ಮಾಡದೇ ಪಕ್ಕದ ರಸ್ತೆಯಲ್ಲಿ ಕಾದು ಕುಳಿತ್ತಿದ್ದರು. ರಾತ್ರಿ 11 ಗಂಟೆಯ ವೇಳೆಗೆ ಸಿದ್ದರಾಮಯ್ಯ ಕಾರಿನಲ್ಲಿ ನಿರ್ಗಮಿಸುತ್ತಿದ್ದಂತೆ ಡಿಕೆಶಿ ವೇಣುಗೋಪಾಲ್ ಮನೆಯನ್ನು ಪ್ರವೇಶಿಸಿದರು.
ಫೋನಿನಲ್ಲಿ ಮಾತಾಡಿದ್ದು ಯಾರು? ಡಿಕೆಶಿಗೆ ಏನಂದ್ರು?
ಹೌದು ಒಂದೇ ಒಂದು ಕರೆ ಡಿಕೆ ಶಿವಕುಮಾರ್ ಅವರ ಮನಸ್ಸನ್ನು ಬದಲಾಯಿಸಿತು. ಅಂದಹಾಗೆ ಫೋನು ಮಾಡಿದ್ದು ಮತ್ಯಾರು ಅಲ್ಲ. ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು. ಯಸ್, ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಹೋಗಿದ್ದ ಸೋನಿಯಾ ಗಾಂಧಿ (Sonia Gandhi) ಬುಧವಾರ ದೆಹಲಿಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ದೂರವಾಣಿ ಮೂಲಕವೇ ಡಿಕೆಶಿ ಜೊತೆ ತಡರಾತ್ರಿಯೇ ಸೋನಿಯಾ ಮಾತುಕತೆ ನಡೆಸಿದರು.
“2 ವರ್ಷ ಆಗುತಿದ್ದಂತೆ ಸಿದ್ದರಾಮಯ್ಯ ಅವರಾಗಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಮುಖ್ಯಮಂತ್ರಿಯಾಗಿ ಇದ್ದುಕೊಂಡೇ ಗೌರವದ ವಿದಾಯ ಹೇಳಬೇಕು ಎಂದು ಅವರು ಬಯಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದುಕೊಂಡೇ ರಾಜಕೀಯ ನಿವೃತ್ತಿ ಪಡೆಯಬೇಕು ಎಂದುಕೊಂಡಿದ್ದೇನೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. 2 ವರ್ಷದ ನಂತರ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿರುವ ಹಿನ್ನೆಲೆಯಲ್ಲಿ ಒಪ್ಪಿಕೊಳ್ಳಬೇಕು” ಎಂದು ತಿಳಿಸಿದರು.
ಇಷ್ಟೇ ಅಲ್ಲದೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಸೂತ್ರವನ್ನು ಮಾಡಿದ್ದೇವೆ. ಕೊನೆಯ 3 ವರ್ಷ ಕಳೆದ ನಂತರ ನಿಮ್ಮ ನೇತೃತ್ವದಲ್ಲೇ ಚುನಾವಣೆಗೆ ಕಾಂಗ್ರೆಸ್ ಹೋಗಲಿದೆ. ನಿಮಗೆ ಅವಕಾಶ ಒದಗಿ ಬರಲಿದೆ ಎಂದು ಮನವೊಲಿಕೆ ಮಾಡಿದರು. ಈ ಮಾತಿಗೆ ಕರಗಿದ ʼಕನಕಪುರದ ಬಂಡೆʼ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲು ಒಪ್ಪಿಗೆ ನೀಡಿದರು.
ಇದನ್ನು ಓದಿ: Fight for DCM seat: ಕಾಂಗ್ರೆಸ್ನಲ್ಲಿ ಡಿಸಿಎಂ ಪಟ್ಟಕ್ಕೆ ಜೋರಾಯ್ತು ಫೈಟ್ : ಹಿರಿಯ ನಾಯಕರಲ್ಲಿ ಭುಗಿಲೆದ್ದ ಅಸಮಾಧಾನ
