Home » Actress Childhood photo: ಸ್ಟಾರ್ ನಟಿಯ ಬಾಲ್ಯದ ಫೋಟೋ ವೈರಲ್ ; ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಈ ಸ್ಟಾರ್ ಹಿರೋಯಿನ್ ಯಾರು ಹೇಳಿ?

Actress Childhood photo: ಸ್ಟಾರ್ ನಟಿಯ ಬಾಲ್ಯದ ಫೋಟೋ ವೈರಲ್ ; ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಈ ಸ್ಟಾರ್ ಹಿರೋಯಿನ್ ಯಾರು ಹೇಳಿ?

0 comments
Actress Childhood photo

Actress Childhood photo: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟ, ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ (Virat Kohli) ಬಾಲ್ಯದ ಫೋಟೋ (Virat Kohli childhood photo) ವೈರಲ್ ಆಗಿತ್ತು. ಹಾಗೆಯೇ ನಾಗಿಣಿ ಸೀರಿಯಲ್ ನಟಿ ನಮೃತಾ ಗೌಡ (Namratha Gowda) ಅವರ ಬಾಲ್ಯದ ಫೋಟೋ ವೈರಲ್ ಆಗಿತ್ತು. ಇದೀಗ ಖ್ಯಾತ ಸ್ಟಾರ್ ನಟಿಯ ಬಾಲ್ಯದ ಫೋಟೋ (Actress Childhood photo) ವೈರಲ್ ಆಗಿದೆ. ನಿಮಗೆ ಗೊತ್ತಾ? ಕನ್ನಡದ ಈ ಖ್ಯಾತ ನಟಿ (Serial Actress) ಯಾರು ಅಂತ? ಕಂಡುಹಿಡಿಯಿರಿ ನೋಡೋಣ!!.

ಅಮ್ಮನ ಮಡಿಲಲ್ಲಿರುವ ಈ ಪುಟ್ಟ ಹುಡುಗಿ ಈಗ ಸ್ಟಾರ್ ನಟರೊಡನೆ ಸಿನಿಮಾ ಮಾಡಿ ಸೈ ಎನಿಸಿಕೊಂಡು, ಜನಮನದಲ್ಲಿ ನೆಲೆಸಿದ್ದಾರೆ. ಈಕೆ ಕರಾವಳಿಯ ಚೆಲುವೆ. ತನ್ನ ಸೌಂದರ್ಯದ ಜೊತೆಗೆ ತನ್ನ ನಟನಾ ಪ್ರತಿಭೆಯನ್ನು ತೋರುವ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿ. ಯಾರು ಗೊತ್ತಾಯ್ತಾ?? ಅವರೇ ನಟಿ ಪೂಜಾ ಹೆಗ್ಡೆ (Pooja Hegde).

 

Src: nadunudi

ಉಡುಪಿ (Udupi) ಮೂಲದ ಪೂಜಾ ಹೆಗ್ಡೆ ತುಳು ಕುಟುಂಬಕ್ಕೆ ಸೇರಿದವರಾಗಿದ್ದು, ಇವರು ಹುಟ್ಟಿ ಬೆಳೆದದ್ದು ಮುಂಬೈನಲ್ಲಿ.
ನಾಗ ಚೈತನ್ಯ (Naga Chaitanya) ಅಭಿನಯದ ‘ಒಕಾ ಲೈಲಾ ಪಾರೋ’ (Oka Laila paro) ಚಿತ್ರದ ಮೂಲಕ ಟಾಲಿವುಡ್‌ಗೆ (Tollywood) ಎಂಟ್ರಿ ಕೊಟ್ಟ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ನಂತರ ವರುಣ್ ಅಭಿನಯದ ‘ಮುಕುಂದ’ (Mukunda) ಚಿತ್ರದ ಮೂಲಕ ಸದ್ದು ಮಾಡಿದರು.

ಆದರೆ, ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ನಟಿ ಪೂಜಾ ಹೆಗ್ಡೆ ಅವರಿಗೆ ನಿರೀಕ್ಷಿತ ಗೆಲುವು ಸಿಗುತ್ತಿಲ್ಲ. ಇತ್ತೀಚೆಗೆ ಅವರು ಮಾಡಿದ ಸಿನಿಮಾಗಳೆಲ್ಲವೂ ಸೋಲುತ್ತಿವೆ. ‘ರಾಧ್ಯೆ ಶ್ಯಾಮ್​’ ಸಿನಿಮಾ ಸೋತಿತು. ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ.
ಬ್ಯಾಕ್ ಟು ಬ್ಯಾಕ್ ಫ್ಲಾಪ್​ಗಳಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ (Pooja Hegde) ಅವರು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರೋ ಪೂಜಾ ಸದ್ಯ ಹೊಸ ನಿರ್ಧಾರವೊಂದನ್ನ ಕೈಗೊಂಡಿದ್ದು ಐಟಂ ಹಾಡಿಗೆ ಹೆಜ್ಜೆ ಹಾಕಲು ನಿರ್ಧಾರ ಮಾಡಿದ್ದಾರೆ.

 

ಇದನ್ನು ಓದಿ: Siddaramaiah: ‘ಎಐಸಿಸಿ’ ನಿರ್ಧಾರಕ್ಕೆ ನಾನು ಬದ್ಧ : ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ 

You may also like

Leave a Comment