Siddaramaiah Cabinet: ಕರ್ನಾಟಕ ವಿಧಾನಸಭೆ ಚುನಾವಣೆ (Karnataka election) ಮೇ.10 ರಂದು ನಡೆಸಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಭಾರೀ ಬಹುಮತದಿಂದ ಕಾಂಗ್ರೆಸ್ ಗೆಲುವನ್ನು ಸಾಧಿಸಿದ ಬೆನ್ನಲ್ಲೆ ಸಿಎಂ ಹುದ್ದೆಗಾಗಿ ರಾಜ್ಯ ರಾಜಕಾರಣದಲ್ಲಿ ಪೈಪೋಟಿ ನಡೆದಿತ್ತು. ಇದೀಗ ಕುರ್ಚಿಗಾಗಿ ಫೈಟ್ ಅಂತ್ಯಗೊಂಡಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಘೋಷಣೆ ಮಾಡಿದ್ದಾರೆ.
ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ (Congress) ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಸಿಎಂ (CM) ಯಾರು ಎಂಬ ವಿಚಾರ ಇದೂವರೆಗೂ ಕಗ್ಗಂಟಾಗಿಯೇ ಉಳಿದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (D K Shivkumar) ಇಬ್ಬರೂ ಮೇರು ನಾಯಕರು ತಮಗೇ ಸಿಎಂ ಪಟ್ಟ ಬೇಕೆಂದು ಪಟ್ಟು ಹಿಡಿದು ಕೂತಿದ್ದರು. ಆದರೆ ಇಂದು ಬೆಳಿಗ್ಗೆ ಅಚ್ಚರಿ ಎನ್ನುವಂತೆ ಸಿದ್ದರಾಮಯ್ಯ ಕರ್ನಾಟಕದ ಸಿಎಂ ಎಂದು ಘೋಷಣೆ ಆಗಿದೆ. ಅಲ್ಲದೆ ಕನಕಪುರದ ಬಂಡೆ ಡಿಕೆಶಿ ಕೂಡ ಇದಕ್ಕೆ ಒಪ್ಪಿದ್ದಾರೆ. ಕೊನೆಗೂ ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.
2013 ರಿಂದ 2018 ರವರೆಗೆ ಸಂಪೂರ್ಣವಾಗಿ 5 ವರ್ಷಗಳ ಕಾಲ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ (Siddaramaiah) ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಹೈಕಮಾಂಡ್ (High Còmmand) ನೇಮಿಸಿದೆ. ಇನ್ನು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮೇ.20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ (Siddaramaiah Cabinet) ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬ ವಿಷಯ ಭಾರೀ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಸಿಗಲಿದೆ ಗೊತ್ತಾ? ಇಲ್ಲಿದೆ ಜಾತಿವಾರು ಸಂಭಾವ್ಯ ಸಚಿವರ ಪಟ್ಟಿ.
ಸಿದ್ದರಾಮಯ್ಯ ಕ್ಯಾಬಿನೆಟ್’ನಲ್ಲಿ ಮಂತ್ರಿಗಿರಿ ಸಿಗಲಿರುವ ಸಂಭಾವ್ಯ ಸಚಿವರ ಪಟ್ಟಿ:-
ಸಿದ್ದರಾಮಯ್ಯ( ಕುರುಬ) (ಮುಖ್ಯಮಂತ್ರಿ) , ಡಿಕೆ ಶಿವಕುಮಾರ್ ( ಒಕ್ಕಲಿಗ) (ಉಪಮುಖ್ಯಮಂತ್ರಿ), ಬಿ.ಕೆ ಹರಿಪ್ರಸಾದ್ ( ಬಿಲ್ಲವ), ಜಮೀರ್ ಅಹ್ಮದ್ ಖಾನ್ ( ಮುಸ್ಲಿಂ), ಯು.ಟಿ ಖಾದರ್ ( ಮುಸ್ಲಿಂ) , ದಿನೇಶ್ ಗುಂಡೂರಾವ್ ( ಬ್ರಾಹ್ಮಣ), ಕೆಜೆ ಜಾರ್ಜ್ ( ಕ್ರೈಸ್ತ), ಜಗದೀಶ್ ಶೆಟ್ಟರ್ ( ಲಿಂಗಾಯತ), ರಾಮಲಿಂಗಾ ರೆಡ್ಡಿ ( ಒಕ್ಕಲಿಗ ರೆಡ್ಡಿ) , ಎಂ.ಬಿ ಪಾಟೀಲ್ ( ಲಿಂಗಾಯತ), ಡಾ. ಜಿ ಪರಮೇಶ್ವರ ( ಎಸ್ ಸಿ) , ಕೃಷ್ಣ ಬೈರೇಗೌಡ ( ಒಕ್ಕಲಿಗ),ಪ್ರಿಯಾಂಕ್ ಖರ್ಗೆ ( ಎಸ್ ಸಿ) , ಲಕ್ಷ್ಮೀ ಹೆಬ್ಬಾಳ್ಕರ್ ( ಲಿಂಗಾಯತ), ತುಕರಾಮ್ ( ಎಸ್ ಟಿ) , ನಾಗೇಂದ್ರ ( ಎಸ್ ಟಿ), ಲಕ್ಷಣ ಸವದಿ ( ಲಿಂಗಾಯತ),ರಾಘವೇಂದ್ರ ಹಿಟ್ನಾಳ್ ( ಕುರುಬ), ಪುಟ್ಟರಂಗ ಶೆಟ್ಟಿ ( ಉಪ್ಪಾರ ), ಸಂತೋಷ್ ಲಾಡ್( ಮರಾಠಿ), ಎಚ್ ಕೆ ಪಾಟೀಲ್ ( ರೆಡ್ಡಿ ಲಿಂಗಾಯತ), ಶಿವಲಿಂಗೇಗೌಡ ( ಒಕ್ಕಲಿಗ), ಮಧು ಬಂಗಾರಪ್ಪ ( ಈಡಿಗ) , ಟಿ.ಬಿ ಜಯಚಂದ್ರ ( ಒಕ್ಕಲಿಗ), ರಾಮಲಿಂಗಾ ರೆಡ್ಡಿ ( ರೆಡ್ಡಿ) ,ಕೆ. ಎಚ್ ಮುನಿಯಪ್ಪ/ ರೂಪಾ ಶಶಿಧರ್ ( ಎಸ್ ಸಿ) , ಶಿವಾನಂದ ಪಾಟೀಲ್ ( ಲಿಂಗಾಯತ) ,ಈಶ್ವರ್ ಖಂಡ್ರೆ ( ಲಿಂಗಾಯತ), ಟಿಡಿ ರಾಜೇಗೌಡ ( ಒಕ್ಕಲಿಗ), ವಿನಯ್ ಕುಲಕರ್ಣಿ( ಲಿಂಗಾಯತ) , ಎಂ ಕೃಷ್ಣಪ್ಪ ( ಒಕ್ಕಲಿಗ), ಶಿವರಾಜ್ ತಂಗಡಗಿ ( ಭೋವಿ), ಅಜಯ್ ಧರ್ಮಸಿಂಗ್ ( ರಜಪೂತ) ಹಾಗೂ ಸತೀಶ್ ಜಾರಕಿಹೊಳಿ ( ಎಸ್ಟಿ).
