Home » ದೌರ್ಜನ್ಯಕ್ಕೊಳಗಾದ ಹಿಂದೂ‌ ಕಾರ್ಯಕರ್ತರ ಭೇಟಿಗೆ ಆಗಮಿಸಿದ ಯತ್ನಾಳ್ : ಬಿಜೆಪಿ ಮುಖಂಡನನ್ನು ಒಳ ಬಿಡದ ಪುತ್ತಿಲ ಪರ ಬೆಂಬಲಿಗರು

ದೌರ್ಜನ್ಯಕ್ಕೊಳಗಾದ ಹಿಂದೂ‌ ಕಾರ್ಯಕರ್ತರ ಭೇಟಿಗೆ ಆಗಮಿಸಿದ ಯತ್ನಾಳ್ : ಬಿಜೆಪಿ ಮುಖಂಡನನ್ನು ಒಳ ಬಿಡದ ಪುತ್ತಿಲ ಪರ ಬೆಂಬಲಿಗರು

by Praveen Chennavara
0 comments
Hindu activist

ಪುತ್ತೂರು: ಬ್ಯಾನರ್ ವಿಚಾರದಲ್ಲಿ ಪೋಲೀಸ್ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಭೇಟಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಮೇ 19 ರಂದು ಪುತ್ತೂರಿಗೆ ಆಗಮಿಸಿದ್ದರು.

ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಸ್ಥಳೀಯ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಆಗಮಿಸಿದ ಯತ್ನಾಳ್ ಸಮ್ಮುಖವೇ ಬಿಜೆಪಿ ನಾಯಕರು ಹಾಗು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ನೂಕಾಟ-ತಳ್ಳಾಟ ನಡೆದಿದೆ.

ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಒಳಗೆ ಕೇವಲ ಬಸನಗೌಡ ಪಾಟೀಲ್ ಅವರನ್ನು ಮಾತ್ರ ಬಿಟ್ಟ ಪುತ್ತಿಲ ಪರ ಬೆಂಬಲಿಗರು ಅವರ ಜೊತೆ ಬಂದ ಬಿಜೆಪಿ ಹಾಗು ಬಿಜೆಪಿ ಪರ ಇರುವ ಹಿಂದೂ ಸಂಘಟನೆಯ ಮುಖಂಡರನ್ನು ಬಾಗಿಲಿನಿಂದಲೇ ತಳ್ಳಿ ಹೊರದಬ್ಬಿದ್ದಾರೆ ಈ ವೀಡಿಯೋ ವೈರಲ್ ಆಗಿದೆ.

ಈ ಸಂದರ್ಭ ಎರಡೂ ತಂಡಗಳ ಮಧ್ಯೆ‌ ತಳ್ಳಾಟ- ನೂಕಾಟ ನಡೆದಿದ್ದು, ಸಂಧಾನಕ್ಲಾಗಿ ಆಗಮಿಸಿದ ಯತ್ನಾಳ್ ಸಮ್ಮುಖವೇ ಈ ಘಟನೆ ನಡೆದಿದ್ದು, ಪುತ್ತೂರಿನ ಈ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣವಿಲ್ಲ ಎನ್ನುವಂತಾಗಿದೆ.

ಆದಾಗ್ಯೂ ಶಾಸಕ ಯತ್ನಾಳ್ ಅವರು 15 ದಿನಗಳೊಳಗೆ ಗೊಂದಲ ಪರಿಹರಿಸುವ ಭರವಸೆ ನೀಡಿದ್ದಾರೆ.

You may also like

Leave a Comment