Home » siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಖುಷಿಯಲ್ಲಿ ಮೈ ಮೇಲೆಲ್ಲಾ ಹುಲಿಯಾ ಎಂದು ಬರೆಸಿಕೊಂಡ ಅಭಿಮಾನಿ

siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಖುಷಿಯಲ್ಲಿ ಮೈ ಮೇಲೆಲ್ಲಾ ಹುಲಿಯಾ ಎಂದು ಬರೆಸಿಕೊಂಡ ಅಭಿಮಾನಿ

0 comments
Siddaramaiha oath

siddaramaiah oath: ಈಗಾಗಲೇ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ (siddaramaiah oath) ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಅವರಿಗೆ ವಿಶೇಷವಾಗಿ ಶುಭ ಕೋರುವ ಸಲುವಾಗಿ ಕೊಳ್ಳೇಗಾಲದ ಬಸ್ತಿಪುರ ಗ್ರಾಮದ ಮಲ್ಲೇಶ್ ಎಂಬವರು ಬಣ್ಣಗಳ‌ ಮೊರೆ ಹೋಗಿದ್ದಾರೆ.

ಚಾಮರಾಜನಗರ ಜಿಲ್ಲೆಯಿಂದಲೂ ಸಾವಿರಾರು ಮಂದಿ ಅಭಿಮಾನಿಗಳು ಪ್ರಮಾಣವಚನ ಕಾರ್ಯಕ್ರಮ‌ ನೋಡಲು ರಾಜಧಾನಿಗೆ ಬಂದಿದ್ದಲ್ಲದೆ, ಚಾಮರಾಜನಗರದ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ಸಿದ್ದುಗೆ ಗಡಿಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

ಹೌದು, ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ದಿನವಾದ ಇಂದು ತನ್ನ ಮೈಮೇಲೆಲ್ಲಾ ಹುಲಿಯಾ, ಸಿಎಂ ಸಿದ್ದರಾಮಯ್ಯ, ಸಿಎಂ‌ ಸಿದ್ದು ಎಂದು ಬರೆಸಿಕೊಂಡು ಅಭಿಮಾ‌ನ ವ್ಯಕ್ತ ಪಡಿಸಿದ್ದಾರೆ.‌

You may also like

Leave a Comment