Latiesha Jones: ಒಬ್ಬರು ಎಂಜಲು ಮಾಡಿದ್ದನ್ನು, ಮತ್ತೊಬ್ಬರು ತಿನ್ನುವುದು ಬಿಡಿ ಮುಟ್ಟಲು ಸಹ ಹೇಸಿಗೆ ಪಟ್ಟುಕೊಳ್ಳುತ್ತಾರೆ. ಒಂದು ವೇಳೆ ತಿಂದರೂ ಕೂಡ ಅಲರ್ಜಿ, ಕಜ್ಜಿಗಳಾಗೋದು ಸಾಮಾನ್ಯ. ವಿಜ್ಞಾನ(Science) ಕೂಡ ಇದನ್ನು ಬೇಡ ಅನ್ನುತ್ತದೆ. ಆದರೆ ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ತನ್ನ ಎಂಜಲನ್ನು ಮಾರಿಯೇ ತಿಂಗಳಿಗೆ 41 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾಳೆ!!
ಕೆಲವೊಮ್ಮ ಹಳ್ಳಿಗಳಲ್ಲಿ ಮಾತನಾಡುವ ಬರದಲ್ಲಿ ‘ನನ್ನ ಎಂಜಲು ಎಲೆ ಎತ್ತೋಕು ಲಾಯಕ್ಕಿಲ್ಲ’ ಅನ್ನೋ ಮಾತನ್ನು ಕೇಳುತ್ತೇವೆ. ಆದರೆ, ವಿಪರ್ಯಾಸ ನೋಡಿ ಇಂಗ್ಲೆಂಡ್(England) ನಲ್ಲಿ ಮಹಿಳೆಯೊಬ್ಬಳು ತನ್ನ ಎಂಜಲು ಮಾರಿಯೇ ತಿಂಗಳಿಗೆ 41 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲದೆ ಬಂದ ಹಣದಿಂದ ತನ್ನ ಸಾಲವನ್ನೆಲ್ಲಾ ತೀರಿಸಿಕೊಂಡಿರುವ ಆಕೆ, ಇದೇ ಹಣದಲ್ಲಿ ಹೊಸ ಫ್ಲ್ಯಾಟ್(Flat) ಕೂಡ ಖರೀದಿಸಿದ್ದಾಳೆ.
ಹೌದು, ಇದು ವಿಚಿತ್ರ ಅನಿಸಿದರೂ ಸತ್ಯ. ಇಂಗ್ಲೆಂಡ್ ಮ್ಯಾಂಚೆಸ್ಟರ್'(Manchester) ನಲ್ಲಿ ನೆಲೆಗೊಂಡಿರುವ ಯುವತಿಯ ಹೆಸ್ರು ಲೆಟಿಶಾ ಜೋನ್ಸ್(Latisha Jones) ಅಂತಾ. ಈಕೆ ಬಯೋಕೆಮಿಕಲ್ ಸೈನ್ಸ್(Biochemical science) ಓದುತ್ತಿದ್ದು, ಅವಳು ಮ್ಯಾಂಚೆಸ್ಟರ್‌ನ ಟೆಸ್ಕೋ(Tesco) ದಲ್ಲಿ ಅರೆಕಾಲಿಕ ಕೆಲಸ(Part Time job) ಮಾಡುತ್ತಿದ್ದಾಳೆ. ಆದಾಗ್ಯೂ, ಕೆಲವು ವರ್ಷಗಳ ಹಿಂದೆ ಆಕೆ ಒನೆಟಿಫಾನ್ಸ್ ಎಂಬ ವಯಸ್ಕ ಸೈಟ್’ಗೆ ಸೇರಿಕೊಂಡಿದ್ದು, ತನ್ನ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಳು. ಹೀಗಾಗಿ ಆಕೆಗೆ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿದೆ.
ಒಂದು ದಿನ ಅಭಿಮಾನಿಯೊಬ್ಬ ಯುವತಿಯ ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದು, ತನ್ನ ಎಂಜಲನ್ನು ಬಾಟಲಿಯಲ್ಲಿ ತುಂಬಿಸಿಕೊಡು ಎಂದು ಕೇಳಿ, ಅದಕ್ಕೆ ಹಣ ನೀಡುವುದಾಗಿಯೂ ಹೇಳಿದ್ದಾನೆ. ಮೊದಲಿಗೆ ಯುವತಿಯೂ ನಂಬಲಿಲ್ಲ. ನಂತ್ರ ಆಕೆ ಬಳಸಿದ ಬೆಡ್‌ಶೀಟ್‌ಗಳು(bedsheet) , ಜಿಮ್‌ನ ಬಟ್ಟೆಗಳು, ಟೂತ್‌ಬ್ರಷ್‌ಗಳು, ಟೂತ್‌ಪೇಸ್ಟ್, ಉಗುಳು ಮತ್ತು ನೀರನ್ನ ಕೇಳಲು ಪ್ರಾರಂಭಿಸಿದ್ದಾರೆ.
ಕಾಲೇಜು ಶುಲ್ಕ ಹಾಗೂ ಜೀವನೋಪಾಯಕ್ಕಾಗಿ ಮ್ಯಾಂಚೆಸ್ಟರ್‌ನ ಟೆಸ್ಕೋದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿರುವ ಲತೀಶಾ ಜೋನ್ಸ್ ಕೊನೆಗೂ ಇದಕ್ಕೆಒಪ್ಪಿದ್ದು ಈಗ ತನ್ನ ಎಂಜಲುಗಳನ್ನು ಬಾಟಲ್‌ಗಳಲ್ಲಿ ತುಂಬಿ ಮಾರುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ. ಮೊದಲೇ ಹೇಳಿದಂತೆ ಎಂಜಲು ಮಾರಿಯೇ ತಿಂಗಳಿಗೆ 41 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ. ಇದನ್ನು ಮಾರಿದ ಬಳಿಕ ಬಂದ ಹಣದಲ್ಲಿ ತನ್ನ ಸಾಲಗಳನ್ನೆಲ್ಲಾ ತೀರಿಸಿಕೊಂಡಿರುವ ಆಕೆ, ಇತ್ತೀಚೆಗೆ ಹೊಸ ಫ್ಲ್ಯಾಟ್‌ಅನ್ನೂ ಖರೀದಿ ಮಾಡಿದ್ದಾರೆ.
ಇನ್ನೂ ಅಚ್ಚರಿಯ ಸಂಗತಿಯನ್ನು ಬಹಿರಂಗ ಮಾಡಿರುವ 22 ವರ್ಷದ ಮಹಿಳೆ, ತನ್ನ ಎಂಜಲು ಮಾತ್ರವಲ್ಲ, ಕಾಲ್ಬೆರಳ ಉಗುರುಗಳು ಒಂದು ವಾರ ನಿರಂತರವಾಗಿ ಉಪಯೋಗಿಸಿದ ಬೆಡ್ ಶೀಟ್‌ಗಳಂಥ ವಿಚಿತ್ರ ಬೇಡಿಕೆಗಳನ್ನು ಪೂರೈಸಿದರೆ, ಜನರು 300 ಪೌಂಡ್‌ನಿಂದ (30 ಸಾವಿರ ರೂಪಾಯಿ) 1500 ಪೌಂಡ್ (1.5 ಲಕ್ಷ ರೂಪಾಯಿ) ಕೊಡಲು ತಯಾರಿದ್ದಾರೆ ಎಂದೂ ಹೇಳಿದ್ದಾರೆ.
ಸಧ್ಯ ಈ ಯುವತಿ ಪ್ರತಿ ಬಾಟಲ್ ಲಾಲಾರಸಕ್ಕೆ 30 ಸಾವಿರ ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ತಿಂಗಳಿಗೆ ಏನಿಲ್ಲವೆಂದ್ರು 41 ಲಕ್ಷ ರೂಪಾಯಿ ಸಂಪಾದಿಸ್ತಿದ್ದಾಳೆ. ಸಧ್ಯ ಆ ಹಣದಿಂದ ತನ್ನೆಲ್ಲಾ ಸಾಲವನ್ನ ತೀರಿಸಿದ್ದು, ಕೆಲಸ ಬಿಟ್ಟು ಲಾಲಾರಸ ಮಾರಕ್ಕೆ ತೊಡಗಿದ್ದಾಳೆ. ಈ ಕೆಲಸದಿಂದ ತಾನು ತುಂಬಾ ಖುಷಿಯಾಗಿದ್ದು, ಆರಾಮದಾಯಕ ಜೀವನ ಸಾಗಿಸುತ್ತಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ.
