Shraddha-style murder in Hyderabad: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಭೀಭತ್ಸ ಹತ್ಯೆಯ ಮಾದರಿಯಲ್ಲೇ ಹೈದರಾಬಾದ್(Shraddha-style murder in Hyderabad) ನಲ್ಲಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿ ಪೀಸ್ ಪೀಸ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೈದರಾಬಾದಿನ ಬಿ ಚಂದ್ರಮೋಹನ್ (48) ಎಂದು ಗುರುತಿಸಲಾಗಿದೆ. ಚಂದ್ರ ಮೋಹನ್, ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಅನುರಾಧಾ ರೆಡ್ಡಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಲ್ಲದೆ ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡಲು ಹಲವು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ಮೇ 17 ರಂದು, ಹೈದರಾಬಾದಿನ ಅಫ್ಜಲ್ ನಗರದ ಸಮುದಾಯ ಭವನದ ಎದುರು, ಮೂಸಿ ನದಿಯ ಸಮೀಪ ಕಸ ಎಸೆಯುವ ಸ್ಥಳದಲ್ಲಿ ದೊಡ್ಡ ಕಪ್ಪುಕವರ್ ಒಂದು ಪ್ರತ್ಯಕ್ಷವಾಗಿತ್ತು. ತೀಗಲ್‌ಗುಡ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಆ ಕಪ್ಪು ಪ್ಲಾಸ್ಟಿಕ್ ಅನುಮಾನಾಸ್ಪದವಾಗಿದ್ದ ಕಾರಣ ಅದನ್ನು ಜನರ ಸಮ್ಮುಖದಲ್ಲಿ ತೆರೆಯಲಾಯಿತು. ಆಗ ಅದರಿಂದ ಅಪರಿಚಿತ ಮಹಿಳೆಯ ತಲೆ ಹೊರಬಂದಿತ್ತು. ಆಗ ಆ ಇರುವ ಮಾಹಿತಿಯನ್ನು ಪೌರ ಕಾರ್ಮಿಕರೊಬ್ಬರು ನಮಗೆ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಈ ಕುರಿತು ತನಿಖೆಗಾಗಿ ಒಟ್ಟು ಎಂಟು ತಂಡಗಳನ್ನು ರಚಿಸಿದ್ದು ಒಂದು ವಾರದಲ್ಲಿ ಒಬ್ಬ ಆರೋಪಿ ಪತ್ತೆಯಾಗಿದ್ದ. ಆರೋಪಿಯ ವಿಚಾರಣೆಯ ನಂತರ, ಮೃತ ಮಹಿಳೆಯ ಗುರುತು ಪತ್ತೆಯಾಗಿದೆ. 55 ವರ್ಷದ ವೈ ಅನುರಾಧಾ ರೆಡ್ಡಿ ಹೀಗೆ ಅಮಾನುಷವಾಗಿ ಕೊಲೆಯಾದ ಮಹಿಳೆ.
ಆರೋಪಿ ಚಂದ್ರಮೋಹನ್ ಹತ್ಯೆಯಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಅಲ್ಲದೆ ಆತ ತನ್ನ ಮನೆಯ ಒಂದು ಭಾಗವನ್ನು ಮಹಿಳೆಯ ವಾಸಕ್ಕೆ ನೀಡಿದ್ದನು. ಅಲ್ಲೇ ಆಕೆಗೆ ಮನೆ ಕೊಟ್ಟು ಆಕೆಯ ಜತೆ ಆರೋಪಿಯು 2018 ರಿಂದಲೆ ಸಂಬಂಧ ಹೊಂದಿದ್ದ. ಅವರಿಬ್ಬರ ನಡುವೆ ಸಂಬಂಧ ಚೆನ್ನಾಗಿರುವ ಕಾರಣ ಆಕೆಯಿಂದ ಸುಮಾರು 7 ಲಕ್ಷ ರೂ. ಸಾಲ ಪಡೆದಿದ್ದನು. ಈಗ ಕೊಟ್ಟ ಹಣ ವಾಪಸ್ ನೀಡುವಂತೆ ಮಹಿಳೆ ಮನವಿ ಮಾಡಿದರೂ ಹಣ ಆತ ಹಣ ಹಿಂದಿರುಗಿಸಲಿಲ್ಲ. ಮೃತ ಮಹಿಳೆ ಹಣಕ್ಕಾಗಿ ಆರೋಪಿಯ ಮೇಲೆ ಪದೇಪದೆ ಒತ್ತಡ ಹಾಕಿದ್ದಾಳೆ.
ಈಗ ಹೇಗಾದರೂ ದುಡ್ಡನ್ನು ವಾಪಸ್ ಪಡೆಯುವ ಹುನ್ನಾರದಲ್ಲಿದ್ದ ಮಹಿಳೆಯ ಮೇಲೆ ಕೋಪಗೊಂಡ ಆರೋಪಿ ಇತ್ತೀಚೆಗೆ ಆಕೆಯನ್ನು ಕೊಂದು ಹಾಕಿದ್ದ. ಹಾಗೆ ಮೇ 12 ರಂದು ಮಹಿಳೆಯನ್ನು ಹತ್ಯೆ ಮಾಡಿದ ನಂತರ ಶವವನ್ನು ತುಂಡರಿಸಿ ವಿಲೇವಾರಿ ಮಾಡಿದ್ದ. ಆದರೆ ಕಪ್ಪು ಕವಲಿನಲ್ಲಿ ಪ್ಯಾಕ್ ಮಾಡಲಾಗಿದ್ದ ಶವವನ್ನು ಅನುಮಾನದ ಆಧಾರದ ಮೇಲೆ ಹೊರ ತೆಗೆಯಲಾಗಿದೆ. ಆಗ ಕೊಲೆ ಪತ್ತೆಯಾಗಿದೆ.
ಇದನ್ನೂ ಓದಿ: Shocking news: ವಯಾಗ್ರ ಸೇವಿಸಿ 24 ಗಂಟೆ ನಿರಂತರ ಸಂಭೋಗ: 50ರ ವೃದ್ಧ ಸೀದಾ ಆಸ್ಪತ್ರೆಗೆ ; ಮುಂದೇನಾಯ್ತು ಗೊತ್ತಾ?
