Dog Viral Video: ಸಿನಿಮಾ ನಟ, ನಟಿಯರು, ರಾಜಕಾರಣಿಗಳು, ದೊಡ್ಠ ಉದ್ಯಮಿಗಳ ಬಳಿ ಕೋಟಿ ಕೋಟಿ ಆಸ್ತಿ, ಐಶ್ವರ್ಯಗಳಿರುತ್ತದೆ. ಆದರೆ, ನಾಯಿ (dog) ಕೂಡ ಕೋಟಿ ಕೋಟಿ ಹಣ ಗಳಿಸುತ್ತೆ ಅಂದ್ರೆ ಆಶ್ಚರ್ಯವೇ ಸರಿ. ಇತ್ತೀಚೆಗೆ ನಾಯಿಗಳದ್ದೇ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿವೆ. ಈ ಮೂಲಕ ಹಣ ಗಳಿಕೆ ಆಗುತ್ತೆ. ಆದರೆ, ಗೋಲ್ಡನ್ ರಿಟ್ರೈವರ್ ನಾಯಿಯೊಂದು (Dog Viral video) ಗಳಿಸುವ ಹಣ ಎಷ್ಟು ಎಂದು ಗೊತ್ತಾದ್ರೆ ಶಾಕ್ ಆಗ್ತೀರಾ!!.
ಹೌದು, ಈ ಶ್ವಾನ ವರ್ಷಕ್ಕೆ ಡಾಲರ್ 1 ಮಿಲಿಯನ್ ಅಂದ್ರೆ ಅಂದಾಜು 8 ಕೋಟಿ ಗಳಿಸುತ್ತದೆ. ಮಿಲಿಯನೇರ್ ಆಗಿರುವ ಈ ಶ್ವಾನವು, ಎರಡು ವರ್ಷ ವಯಸ್ಸಿನಿಂದಲೂ ಜಾಹೀರಾತುಗಳಿಂದ ವಾರ್ಷಿಕವಾಗಿ ಡಾಲರ್ 1 ಮಿಲಿಯನ್ ನಷ್ಟು ಹಣ ಗಳಿಸುತ್ತದೆ.
ಜೂನ್ 2018 ರಲ್ಲಿ 8 ವಾರಗಳ ವಯಸ್ಸಿನಲ್ಲಿ ಟಕ್ಕರ್ ನ ಇನ್ಸ್ಟಾಗ್ರಾಮ್ ಪುಟವನ್ನು ತೆರೆಯಲಾಯಿತು. ಮುಂದಿನ ತಿಂಗಳಲ್ಲೇ, ಅದರ ಮೊದಲ ವಿಡಿಯೋ ವೈರಲ್ ಆಯಿತು. ಈ ಶ್ವಾನದ ಕೇವಲ ಆರು ತಿಂಗಳಲ್ಲೇ 60,000 ಫಾಲೋವರ್ಸ್ ಅನ್ನು ಹೊಂದಿತು.
ಸೋಷಿಯಲ್ ಮೀಡಿಯಾದಲ್ಲಿ ಶ್ವಾನ ಟಕರ್ ಬಡ್ಜಿನ್ ನಂ. 1 ಆಗಿದೆ. ಇದೀಗ ಟಕ್ಕರ್ ಟಿಕ್ಟಾಕ್ನಲ್ಲಿ 11.1 ಮಿಲಿಯನ್ , ಯೂಟ್ಯೂಬ್ನಲ್ಲಿ 5.1 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 4.3 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಯೂಟ್ಯೂಬ್ ನಿಂದ 30 ನಿಮಿಷದ ಪೋಸ್ಟ್ ಗೆ ಡಾಲರ್ 40,000 ರಿಂದ ಡಾಲರ್ 60,000 ವರೆಗೆ ಗಳಿಸುತ್ತದೆ. ಇನ್ನ್ಸ್ಟಾಗ್ರಾಮ್’ನಲ್ಲಿ ಡಾಲರ್ 20,000 ದಷ್ಟು ಹಣ ಗಳಿಸುತ್ತಿದೆ ಎಂದು ಅದರ ಮಾಲೀಕ ಹೇಳಿದ್ದಾರೆ.
ಸದ್ಯ ಈ ಶ್ವಾನದ ವಿಡಿಯೋ ವೈರಲ್ ಆಗಿದೆ. ಕಾಲಿಗೆ ಶೂ ಹಾಕಿಕೊಂಡು ಮುದ್ದಾದ ನಾಯಿ ಓಡಾಡುವ ವಿಡಿಯೋ ಸೆರೆ ಹಿಡಿದು ಅಪ್ಲೋಡ್ ಮಾಡಲಾಗಿದೆ. ಒಟ್ಟಾರೆ, ಇಂದಿನ ದಿನದಲ್ಲಿ ಮನುಷ್ಯನಿಗಿಂತ ಹೆಚ್ಚು ನಾಯಿಗಳೇ ದುಡಿಯುತ್ತಿದೆ.
