Home » Ashish vidyarthi: 60 ನೇ ವಯಸ್ಸಿಗೆ 2ನೇ ಮದುವೆಯಾದ ಈ ಖಾಯಂ ವಿದ್ಯಾರ್ಥಿ !

Ashish vidyarthi: 60 ನೇ ವಯಸ್ಸಿಗೆ 2ನೇ ಮದುವೆಯಾದ ಈ ಖಾಯಂ ವಿದ್ಯಾರ್ಥಿ !

0 comments
Ashish vidyarthi

Ashish vidyarthi: ಚಿತ್ರರಂಗದ ಫುಲ್ ಟೈಮ್ ಮತ್ತು ಖಾಯಂ ವಿದ್ಯಾರ್ಥಿ ಆಶಿಶ್ ವಿದ್ಯಾರ್ಥಿ (Ashish Vidyarthi). ಈಗ 60 ಆದರೂ ತಾನಿನ್ನೂ ವಿದ್ಯಾರ್ಥಿ, ಹುಡುಗ ಅಂದುಕೊಂಡು ಹೊಸ ಲವ್ವಿನಲ್ಲಿ ಬಿದ್ದಿದ್ದಾರೆ ಆಶಿಶ್ ವಿದ್ಯಾರ್ಥಿ. ಹೌದು, ಕನ್ನಡ ಮಾತ್ರವಲ್ಲದೇ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ತಮ್ಮ 60 ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಸಿನಿ ಜಗತ್ತಿಗೆ ಅಚ್ಚರಿ ಮೂಡಿಸಿದೆ. ಹೌದು, ವಿದ್ಯಾರ್ಥಿ ಮದುವೆ ಆಗಿದ್ದಾರೆ. ಅಚ್ಚರಿ ಏನಂದ್ರೆ ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಜೊತೆ ದಾಂಪತ್ಯ ಜೀವನಕ್ಕೆ ನಟ ಕಾಲಿಟ್ಟಿದ್ದಾರೆ ಆಶಿಶ್ ವಿದ್ಯಾರ್ಥಿ.

ಖಳ ನಟನಾಗಿ ಜನಮೆಚ್ಚುಗೆ ಪಡೆದು ನೂರಾರು ಚಿತ್ರಗಳಲ್ಲಿ ಪೋಷಕ ನಟನಾಗಿ ತಮ್ಮ ಖದರ್ ಮತ್ತು ಪ್ರತಿಭೆ ತೋರಿಸಿದ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿತ್ತು. ಆಶಿಶ್ ಹಲವಾರು ವರ್ಷಗಳಿಂದ ಥೇಟು ವಿದ್ಯಾರ್ಥಿಯಂತೆ ಜೀವನ ನಡೆಸುತ್ತಿದ್ದರು.

ಈಗ ವಿದ್ಯಾರ್ಥಿ ಜೀವನಕ್ಕೆ ಆಶಿಶ್ ರಾಜೀನಾಮೆ ನೀಡಿ ಆಶಿಕಿ ಗೆ ಬಿದ್ದಿದ್ದಾರೆ. ಉದ್ಯಮಿ ರೂಪಾಲಿ ಅವರನ್ನ ಇದೀಗ ನಟ ಆಶಿಶ್ 2ನೇ ಮದುವೆಯಾಗಿದ್ದಾರೆ. ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆದ ಈ ನಟ, ‘ ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು. ಅದೇ ರೀತಿ ಆಯಿತು. ಇಲ್ಲಿ ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ, ಪ್ರೀತಿ ಬಗ್ಗೆ ಎಲ್ಲವನ್ನೂ ಹೇಳುವೆ’ ಎಂದು ಆಶಿಶ್ ಹೇಳಿದ್ದಾರೆ. ಹೊಸ ಅಶಿಕಿ ಸ್ಟೋರಿ ರಿವೀಲ್ ಆಗಲಿದೆ. ನಿಮ್ಮಂತೆ ನಾವು ಕೂಡಾ ಕಾಯುತ್ತ ಇದ್ದೇವೆ.

‘ದ್ರೋಕಾಲ್’ ಎಂಬ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಆಶಿಶ್ ವಿದ್ಯಾರ್ಥಿ ಕೋವಿಡ್ ಬಳಿಕ ವ್ಲಾಗಿಂಗ್ ಸಹ ಆರಂಭಿಸಿದರು. ಈಗ ಅವರು ಹಲವು ನಗರಗಳಿಗೆ ತೆರಳಿ ಅಲ್ಲಿನ ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಫುಡ್ ವ್ಲಾಗಿಂಗ್ ಮಾಡುತ್ತಿದ್ದಾರೆ. ಈಗ ರೂಪಾಲಿ ಆತನನ್ನು ಸೇರಿಕೊಂಡಿದ್ದಾರೆ. ಅಡುಗೆ ಮನೆಯ ರುಚಿ ಹೆಚ್ಚಲಿದೆ.

ಇದನ್ನು ಓದಿ: Pavithra Lokesh – Naresh: ‘ಇಂತಹ ಸುಂದರ ಹುಡುಗೀನ ನೋಡಿದ್ರೆ ತನ್ನ ಬೆಡ್‌ರೂಮ್‌ನಲ್ಲಿ ಇದ್ದರೆ ಚೆನ್ನಾಗಿರುತ್ತೆ ಅನ್ಸತ್ತೆ…’ – ಪವಿತ್ರಾ ಲೋಕೇಶ್ ಲವ್ ಕೆಮಿಸ್ಟ್ರಿ ಬಗ್ಗೆ ನರೇಶ್ ಬಿಂದಾಸ್ ಮಾತು ! 

You may also like

Leave a Comment