Home » Ravindar- Mahalakshmi: ರವೀಂದರ್‌- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು? ಕೊನೆಗೂ ಮೌನ ಮುರಿದ ರವೀಂದರ್!!

Ravindar- Mahalakshmi: ರವೀಂದರ್‌- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು? ಕೊನೆಗೂ ಮೌನ ಮುರಿದ ರವೀಂದರ್!!

by ಹೊಸಕನ್ನಡ
0 comments
Ravindar- Mahalakshmi

ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindar chandrasekaran And Mahalakshmi) ಜೋಡಿ ಮದುವೆ ಆದ ಮೇಲಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆದರೀಗ ಈ ನಡುವೆಯೇ ಇದೀಗ ಪತ್ನಿ ಮಹಾಲಕ್ಷ್ಮೀಯ ಈ ವರ್ತನೆಗೆ ರವೀಂದ್ರ ಬೇಸರಗೊಂಡಿದ್ದಾರೆ.

ಹೌದು, ಸೋಷಿಯಲ್‌ ಮೀಡಿಯಾದಲ್ಲಿ ತಮಿಳು ಸಿನಿಮಾ(Tamil films) ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ ಮತ್ತು ಅವರ ಪತ್ನಿ ಮಹಾಲಕ್ಷ್ಮೀ ಸದಾ ಸಕ್ರಿಯರು. ಈ ಜೋಡಿಯನ್ನು ಮೆಚ್ಚುಗೆಗಿಂತ ಈ ಜೋಡಿಯನ್ನು ಟ್ರೋಲ್‌(Trolle)ಮಾಡಿದವರೇ ಹೆಚ್ಚು. ಅಂತಹ‌ ಕಾಮೆಂಟ್ ಗಳಿಗೆ , ಟ್ರೋಲ್ ಮಾಡುವವರಿಗೆ ರವೀಂದರ್‌ ಹಾಗೂ ಮಹಾಲಕ್ಷ್ಮಿ (Mahalakshmi-Ravindar) ತಾವು ಜೊತೆಯಾಗಿರುವ ಫೋಟೋ ಅಪ್ಲೋಡ್ ಮಾಡಿ, ಕೌಂಟರ್ ಕೊಡುತ್ತಿದ್ದರು.

ಹೀಗಿರುವಾಗಲೇ ಇದೀಗ ಮದುವೆಯಾಗಿ 8 ತಿಂಗಳು ಕಳೆಯುವಷ್ಟರಲ್ಲಿ ಪತ್ನಿ ಮಹಾಲಕ್ಷ್ಮೀಗೆ ಬೇಸರವಾದ್ರಾ ರವೀಂದ್ರ ಚಂದ್ರಶೇಖರನ್‌? ಹೀಗೊಂದು ಅನುಮಾನ ಇದೀಗ ಹರಿದಾಡುತ್ತಿದೆ. ಯಾಕೆಂದರೆ ಸೋಷಿಯಲ್‌ ಮೀಡಿಯಾದಲ್ಲಿ ಮಹಾಲಕ್ಷ್ಮೀ ಕೇವಲ ತಮ್ಮೊಬ್ಬರ ಫೋಟೋಗಳನ್ನು ಮಾತ್ರ ಶೇರ್‌ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಇತ್ತೀಚೆಗೆ ರವೀಂದರ್ ಕೂಡ ತಮ್ಮ ಫೋಟೋ ಮಾತ್ರ ಪೋಸ್ಟ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ರವೀಂದರ್ ಚಂದ್ರಶೇಖರನ್ ಅವರು ತಮ್ಮ ಫೇಸ್ ಬುಕ್(Face book) ಪುಟದಲ್ಲಿ ನಿಗೂಢ ಶೀರ್ಷಿಕೆಯೊಂದಿಗೆ ಒಬ್ಬಂಟಿಯಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಬದುಕಲು ಕಾರಣ ಪ್ರೀತಿಸುವುದೇ ಕಾರಣ, ಕಷ್ಟದ ಸಮಯದಲ್ಲಿ ನಗು. ಯಾಕೆಂದರೆ ಅವರು ನಿನ್ನ ದುಃಖದಿಂದ ಮಾತ್ರ ಸಂತೋಷಪಡುತ್ತಾರೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಗಂಡ ಹೆಂಡತಿಯರ ಈ ಹೊಸ ವರ್ತನೆಯಿಂದ ಸೋಷಿಯಲ್ಸ್ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ರವೀಂದರ್‌- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾ? ಎಂಬ ಪ್ರಶ್ನೆ ಮೂಡಿದೆ. ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಈ ಜೋಡಿಗೆ ನಿಮ್ಮದು ಡಿವೋರ್ಸ್‌(Divorce) ಆಯಿತಾ? ಇಬ್ಬರೂ ದೂರವಾದ್ರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಬೇಸತ್ತ ರವೀಂದ್ರ, ಪತ್ನಿಗೆ “ಡಿಯರ್‌ ನಿನಗೆ ಎಷ್ಟು ಸಲ ಹೇಳಲಿ, ನೀನೊಬ್ಬಳೇ ಇರುವ ಫೋಟೋಗಳನ್ನು ಯಾವತ್ತೂ ಶೇರ್‌ ಮಾಡಬೇಡ. ಹೀಗೆ ಒಬ್ಬಳೇ ಇರುವ ಫೋಟೋ ಹಂಚಿಕೊಂಡರೆ, ನೋಡಿದವರು ನೀವು ಬೇರೆ ಬೇರೆ ಆದ್ರಾ ಎಂದು ಪ್ರಶ್ನಿಸುತ್ತಾರೆ. ಈ ತಪ್ಪನ್ನು ಮತ್ತೆಂದೂ ಪುನರಾವರ್ತಿಸ ಬೇಡ. ಯೂಟ್ಯೂಬ್‌ನಲ್ಲಿ ಇದೇ ವಿಚಾರವೀಗ ಟ್ರೆಂಡ್‌, ಇದಕ್ಕಿಲ್ಲ ಎಂಡ್‌” ಎಂದು ಬರೆದುಕೊಂಡು ಕೊನೆಗೆ ನಾವಿಬ್ಬರೂ ತುಂಬ ಸಂತೋಷದಿಂದ ಇದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: Assam : ಶಿಸ್ತು ಕಲಿಸಲು ಶಾಲಾ ಮಕ್ಕಳ ಕೂದಲಿಗೇ ಕತ್ತರಿ ಹಾಕಿದ ಶಿಕ್ಷಕ! ಶಾಲೆಗೆ ಬರಲು ಮಕ್ಕಳ ಹಿಂದೇಟು!!

You may also like

Leave a Comment