Home » Pavitra Lokesh- Naresh: ನಾವು ಮಕ್ಕಳು ಮಾಡಲು ಈಗಲೂ ರೆಡಿ: ಪವಿತ್ರಾ ಲೋಕೇಶ್ – ನರೇಶ್ @ 43 – 63

Pavitra Lokesh- Naresh: ನಾವು ಮಕ್ಕಳು ಮಾಡಲು ಈಗಲೂ ರೆಡಿ: ಪವಿತ್ರಾ ಲೋಕೇಶ್ – ನರೇಶ್ @ 43 – 63

0 comments
Pavitra Lokesh- Naresh

Pavitra Lokesh- Naresh: ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ವಿಜಯ ಕೃಷ್ಣ (Naresh) ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್ (Pavitra Lokesh- Naresh) ತಮ್ಮ ಕೌಟುಂಬಿಕ ಕಲಹಗಳನ್ನು ಮೀರಿ, ಇಡೀ ಜಗತ್ತಿಗೆ ಮಾದರಿ ಎಂಬಂತೆ ತಮ್ಮದೇ ಲವ್‌ಸ್ಟೋರಿಯಲ್ಲಿ ‘ಮಳ್ಳಿ ಪೆಳ್ಳಿ’ ಸಿನಿಮಾದಲ್ಲಿ ತಮ್ಮ ತಮ್ಮ ಪಾತ್ರಗಳಲ್ಲಿ ತಾವೇ ಅಭಿನಯಿಸಿದ್ದಾರೆ.

ವಿವಾದವನ್ನೇ ಬಂಡವಾಳವಾಗಿಸಿಕೊಂಡು, ಆ ಏರಿಳಿತಗಳನ್ನೇ ಕಥೆಯನ್ನಾಗಿಸಿಕೊಂಡು ತೆಲುಗಿನಲ್ಲಿ ಮೂಡಿ ಬಂದ ಚಿತ್ರ ಮಳ್ಳಿ ಪೆಳ್ಳಿ. ಇದೀಗ ಮೇ 26ರಂದು ‘ಮಳ್ಳಿ ಪೆಳ್ಳಿ’ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುವಂತೆ ಮಾಡಿದ್ದು ಶ್ಲಾಘನೀಯ. ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿರುವ ಮಳ್ಳಿ ಪೆಳ್ಳಿ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಕಲೆಕ್ಷನ್‌ ವಿಚಾರದಲ್ಲಿ ಭೂರಿ ಭೋಜನವೇ ಸರಿ.

ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಮದುವೆಯಾಗಿಲ್ಲ. ಆದರೆ, ನಾವಿಬ್ಬರೂ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದೇವೆ ಎಂದು ಸ್ವತಃ ನಟ ನರೇಶ್‌ ಈ ಹಿಂದೆಯೇ ಹೇಳಿದ್ದಾರೆ. ಸದ್ಯ ‘ಮಳ್ಳಿ ಪೆಳ್ಳಿ’ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿರುವ 44 ವರ್ಷದ ಪವಿತ್ರಾ ಲೋಕೇಶ್ ಮತ್ತು 63 ವರ್ಷದ ನರೇಶ್‌, ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಸಂದರ್ಶನ ಸಂದರ್ಭದಲ್ಲಿ ಕೇಳಿದಾಗ , “ನಾವು ಮಕ್ಕಳು ಮಾಡಲು ಈಗಲೂ ರೆಡಿ” ಎಂದು ಹೇಳಿ ಅಭಿಮಾನಿಗಳನ್ನು ಬಾಯಲ್ಲಿ ಬೆರಳಿಡುವಂತೆ ಮಾಡಿದ್ದು ಸತ್ಯ.

ಹೌದು, ಸಂದರ್ಶನದಲ್ಲಿ ನಟ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ತಮಗೂ ಮಕ್ಕಳು ಮಾಡಿಕೊಳ್ಳಬೇಕು ಎಂಬ ಆಸೆ ಇದೆ, ನಮಗೂ ಮಕ್ಕಳೆಂದರೆ ಇಷ್ಟ ಎಂದಿದ್ದಾರೆ. ಮೊದಲಿಗೆ ಸಂದರ್ಶಕನ ಪ್ರಶ್ನೆಗೆ ಉತ್ತರ ನೀಡದ ಪವಿತ್ರಾ ಲೋಕೇಶ್‌, ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಎಂಬಂತೆ ಪೋಸ್ ಕೊಟ್ಟರು, ನಂತರ ಎಷ್ಟೋ ಮಕ್ಕಳಿಗೆ ಪೋಷಕರಿಲ್ಲ. ಈ ಸಂದರ್ಭದಲ್ಲಿ ನಮಗೆ ಮಕ್ಕಳನ್ನು ಮಾಡಿಕೊಳ್ಳುವ ಅನಿವಾರ್ಯ ಏನಿದೆ, ಆ ಮಕ್ಕಳನ್ನು ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ.

ಇನ್ನು ನರೇಶ್ ಮಾತನಾಡಿ ” ಈಗ ಇರುವ ಮಕ್ಕಳೆಲ್ಲಾ ನಮ್ಮ ಮಕ್ಕಳೇ. ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಬಹಳ ದೊಡ್ಡದು. ನಮ್ಮ ತಂದೆ, ತಾಯಿ ಅಗಲಿಕೆ ನಂತರ ತುಂಬ ಭಯಪಟ್ಟಿದ್ದೆ. ನಮ್ಮ ತಾಯಿ ಹೇಳುತ್ತಿದ್ದರು, ನಾನು ನಿನಗೆ ಎಲ್ಲಾ ಕೊಟ್ಟೆ. ಆದರೆ ನನ್ನಂತ ಒಬ್ಬ ಮಡದಿಯನ್ನು, ಜೊತೆಗಾತಿಯನ್ನು ಕೊಡೊಕೆ ಸಾಧ್ಯವಾಗಲಿಲ್ಲ ಎನ್ನುತ್ತಿದ್ದರು. ಅಂತಹ ನಮ್ಮ ತಾಯಿ ಅವರಂತಹ ಮತ್ತೊಬ್ಬ ತಾಯಿಯನ್ನು ಪವಿತ್ರಾ ರೂಪದಲ್ಲಿ ಕೊಟ್ಟಿದ್ದಾರೆ.”

“ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ. ಈ ಮಾತುಗಳನ್ನು ಕೇಳಿ ಪವಿತ್ರಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. ಇನ್ನು “ಮಗು ಪಡೆಯಲು ನಾವು ದೈಹಿಕವಾಗಿ ಅರ್ಹರಾಗಿದ್ದೇವೆ” ಎಂದು ನರೇಶ್ ಹೇಳುತ್ತಿದ್ದಂತೆ ಪವಿತ್ರಾ ತಡೆದು ಮುಂದಿನ ಪ್ರಶ್ನೆ ಕೇಳಲು ಹೇಳಿದ್ದಾರೆ.

“ವೈದ್ಯಕೀಯವಾಗಿ ನಮ್ಮ ವಯಸ್ಸಿನಲ್ಲಿ ನಾವು ಮಕ್ಕಳನ್ನು ಪಡೆಯುವ ಸಾಮರ್ಥ್ಯ ಇದೆ. ಆದರೆ ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ಅದೆಲ್ಲಾ ದೈಹಿಕ ವಿಚಾರಗಳು. ಅದನ್ನು ಮೀರಿ ಹೋಗಬೇಕು” ಎಂದು ನರೇಶ್ ತಿಳಿಸಿದ್ದಾರೆ.

ಒಟ್ಟಿನಲ್ಲಿ “ನನಗೆ ಪವಿತ್ರಾ ದೇವತೆಯಂತೆ, ತಾಯಿಯಂತೆ, ಮಡದಿಯಂತೆ, ಮಗಳಂತೆ, ಸ್ನೇಹಿತೆಯಂತೆ ಕಾಣಿಸುತ್ತಾರೆ. ಆಕೆ ಬಂದ ಮೇಲೆ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ. ನಮ್ಮ ಆಸ್ತಿ ಪಾಸ್ತಿ ಬಗ್ಗೆ ಮಾತಾಡಲ್ಲ. ಆಕೆಗೆ ನನ್ನ ಬ್ಯಾಂಕ್ ಅಕೌಂಟ್ ನಂಬರ್ ಕೂಡ ಗೊತ್ತಿಲ್ಲ” ಎಂದು ನರೇಶ್ ಬಿಚ್ಚು ಮನಸ್ಸಿನಿಂದ ಹೇಳಿದ್ದಾರೆ.

ಇದನ್ನೂ ಓದಿ: Proactive Chicken Video: ಪಾಪ, ಬಾಣಸಿಗನಿಗೆ ಯಾಕೆ ಕಷ್ಟ ಕೊಡ್ಬೇಕು ಅಂತ ಸ್ವತಃ ತಾನೇ ಉರಿಯುವ ಸ್ಟವ್ ಮೇಲೆ ನಿಂತ ಕೋಳಿ…..!

You may also like

Leave a Comment