5
Kadaba : ಕೆಲಸಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಇಚ್ಚಂಪಾಡಿಯ(Kadaba) ನಡುಮನೆ ಕ್ರಾಸ್ ಬಳಿ ಭಾನುವಾರದಂದು ನಡೆದಿದೆ.
ಇಚಿಲಂಪಾಡಿ ನಿವಾಸಿ ವಿಜುಕುಮಾರ್ ಎಂಬವರು ಭಾನುವಾರ ಮಧ್ಯಾಹ್ನ ವೇಳೆಗೆ ಕೆಲಸ ಬಿಟ್ಟು ತೆರಳುತ್ತಿದ್ದ ಸಮಯದಲ್ಲಿ ಕಾಡಾನೆಯು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ವಿಜುಕುಮಾರ್ ರನ್ನು ಕಡಬದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸರದಲ್ಲಿ 2 ಆನೆಗಳು ಇರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರೆತಿದ್ದು, ಸುಬ್ರಹ್ಮಣ್ಯ-ಧರ್ಮಸ್ಥಳ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಷ್ – ಅವಿವಾ ಮದುವೆ ಬೆಂಗಳೂರಿನಲ್ಲಿ ಜೂನ್ 7 ಕ್ಕೆ, ಮಂಡ್ಯದಲ್ಲಿ ಬೀಗರ ಊಟ !
