Home » Griha lakshmi Scheme: ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೆ ಸಿಗಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

Griha lakshmi Scheme: ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೆ ಸಿಗಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

by Mallika
0 comments
Griha lakshmi Scheme

Griha lakshmi Scheme: ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೆ ಸಿಗಲಿದೆ ಎಂದು ಬಹುದೊಡ್ಡ ಗೊಂದಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಸ್ವತ: ಆತ್ತೆಯಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಅತ್ತೆಯರ ಪರ ನಿಂತಿದ್ದಾರೆ. ಕಾಂಗ್ರೆಸ್ಸಿನ 2000 ನೀಡುವ ಗ್ರಹಲಕ್ಷ್ಮಿ ಯೋಜನೆಯ ದುಡ್ಡು ಯಾರ ಕೈಗೆ ನೀಡುವುದು ಎಂಬ ಜಿಜ್ಞಾಸೆಗೆ ಸಚಿವೆ ಲಕ್ಷ್ಮೀ ಉತ್ತರ ನೀಡಿದ್ದಾರೆ. ಅತ್ತೆ ಸೊಸೆ ಜಗಳದಲ್ಲಿ ಅತ್ತೆಯ ಕೈ ಮೇಲಾಗಿದೆ. ಸೊಸೆ ಮುಖ ಊದಿಸಿಕೊಂಡು ಬೆಡ್ ರೂಮ್ ಸೇರಿದ್ದಾಳೆ !!!

ಕರ್ನಾಟಕ ವಿಧಾನ ಸಭೆಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರದ ಪಟ್ಟವನ್ನುಅಲಂಕಾರಿಸಿದ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಮುಖ್ಯಮಂತ್ರಿ ಗೃಹಲಕ್ಷ್ಮೀ ಯೋಜನೆಯಡಿ (Griha lakshmi Scheme) ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ.
ಈ ನಿಟ್ಟಿನಲ್ಲಿ ವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ ಶುರುವಾಗಿದ್ದು, ಈ ಕಾರಣದಿಂದಾ 2000 ರೂಪಾಯಿ ಯಾರಿಗೆ ಸೇರಿದ್ದು ಅತ್ತೆಗಾ ಅಥವಾ ಸೊಸೆಗಾ ಅನ್ನೋದು ಗೊಂದಲ ಶುರುವಾಗಿದೆ.
ಅಲ್ಲದೇ ಬಹುತೇಕ ಕಡೆಗಳಲ್ಲಿ ಈ ವಿಚಾರವಾಗಿ ಅತ್ತೆ – ಸೊಸೆಗಳಿಬ್ಬರು ಕಿತ್ತಾಟ ವೂ ಸುದ್ದಿಯೂ ಕೇಳಿಬರುತ್ತಿದೆ. ಈ ಗೊಂದಲ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾಧ್ಯಮಗಳೊಂದಿಗೆ ಮಾತನಾಡಿ, ಕೊನೆಗೂ ತೆರೆ ಎಳೆದಿದ್ದು, ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಯೇ ಅರ್ಹ ವ್ಯಕ್ತಿ ಅವರಿಗೆ ಸಿಗಲಿದೆ, ಅತ್ತೆ ಪ್ರೀತಿಯಿಂದ ಬೇಕಾದರೆ ಸೊಸೆಗೆ ಯೋಜನೆಯ ಹಣ ನೀಡಲಿ ಎಂದಿದ್ದಾರೆ.

 

ಇದನ್ನು ಓದಿ: Chroming: ಬ್ಲೂ ವೇಲ್ ಚಾಲೆಂಜ್ ಥರಾನೇ ಹೊಸ ‘ಕ್ರೋಮಿಂಗ್ ‘ ಚಾಲೆಂಜ್ – 13 ರ ಬಾಲಕಿ ಬಲಿ, ಏನಿದು ಕ್ರೊಮಿಂಗ್ ?! 

You may also like

Leave a Comment