Free Ration Distribution Scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ(Congress Government) 5 ಗ್ಯಾರಂಟಿಗಳಲ್ಲಿ(5 Guarantys) ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಗ್ಯಾರಂಟಿ ಭರವಸೆಗಳಲ್ಲಿ ಒಂದಾದ 10 ಕೆಜಿ ಉಚಿತ ಅಕ್ಕಿ (Free Rice for BPL) ಕೊಡುವ ಬಗ್ಗೆ ಆಹಾರ ಇಲಾಖೆ ಈಗ ತಲೆಕೆಡಿಸಿಕೊಂಡಿದೆ. ಇಂದು ಇಲಾಖೆ ಅಧಿಕಾರಿಗಳ ಜೊತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಸಭೆ ನಡೆಸಿ ಅನುದಾನ, ಅಕ್ಕಿ ಸಂಗ್ರಹ, ಖರೀದಿ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಹೌದು, ವಿಧಾನಸೌಧದಲ್ಲಿ(Vidhanasowdha) ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ಕೆಜಿ ಅಕ್ಕಿ ಉಚಿತ ನೀಡುವ ವಿಚಾರವಾಗಿ ಸಿಎಂ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದಾರೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಇಲಾಖೆಗೆ ಬರಲಿದೆ. ಇದನ್ನು ಹೇಗೆ ಸರಿದೂಗಿಸಬೇಕು ಎಂಬ ನಿಟ್ಟಿನಲ್ಲಿ ಸುದೀರ್ಘ ಚೆರ್ಚೆ ಮಾಡಿದ್ದೇವೆ. ನಾವು ಕೊಟ್ಟ ಭರವಸೆಯಂತೆ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ (Free Ration Distribution Scheme) ನೀಡುವುದು ಖಚಿತ. ಯಾವಾಗ ನೀಡಬೇಕು ಎಂಬುವುದನ್ನು ಸಿಎಂ ಸಿದ್ದರಾಮಯ್ಯ(CM Siddaramaiah)ಅವರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೆ ಹೆಚ್ಚುವರಿ ಆರ್ಥಿಕ ಹೊರೆ ಇಲಾಖೆಗೆ ಬರಲಿದೆ. ಇದನ್ನು ಹೇಗೆ ಸರಿದೂಗಿಸಬೇಕು ಎಂಬ ನಿಟ್ಟಿನಲ್ಲಿ ಸುದೀರ್ಘ ಚೆರ್ಚೆ ನಡೆಸಲಾಗಿದೆ. ಕೇಂದ್ರ ಸರಕಾರಕ್ಕೂ ಹೆಚ್ಚುವರಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ. ಒಂದು ವೇಳೆ ಕೇಂದ್ರ ನೀಡದೇ ಹೋದರೂ ನಾವು ಅಕ್ಕಿ ಕೊಡುವುದು ಖಚಿತವಾಗಿದ್ದು ಯಾವಾಗ ನೀಡಬೇಕು ಎಂಬುದನ್ನು ಸಿಎಂ ಅವರೇ ನಿರ್ಧಾರ ಮಾಡುತ್ತಾರೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಫಲಾನುಭವಿಗಳಿಗೆ ವಿತರಣೆ ಹೇಗೆ.?
ಅಂತ್ಯೋದಯ ಫಲಾನುಭವಿಗಳಿಗೆ ಕಾರ್ಡ್ ಲೆಕ್ಕದಲ್ಲಿ ಪಡಿತರ ವಿತರಣೆ ಮಾಡಲಾಗುತ್ತದೆ. ಪ್ರತಿ ಅಂತ್ಯೋದಯ ಕಾರ್ಡ್ಗೆ 35 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮನೆಯ ಪ್ರತಿ ಸದಸ್ಯನಿಗೆ 6 ಕೆಜಿ ಅಕ್ಕಿ ಕೊಡಲಾಗ್ತಿದೆ. ಇದರಲ್ಲಿ 5 ಕೆಜಿ ಅಕ್ಕಿ ಸಂಪೂರ್ಣ ಕೇಂದ್ರ ಸರ್ಕಾರವೇ ನೀಡಲಿದೆ. 1 ಕೆಜಿ ಅಕ್ಕಿ ಮಾತ್ರ ರಾಜ್ಯ ಸರ್ಕಾರ ಹೆಚ್ಚುವರಿ ವಿತರಣೆ ಮಾಡುತ್ತಿದೆ. ರಾಜ್ಯ ಸರ್ಕಾರದ ಆದ್ಯತೇತರ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ ನೀಡಲಾಗ್ತಿದೆ. 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಅಕ್ಕಿ ವಿತರಿಸಲಾಗ್ತಿದೆ. ರಾಜ್ಯ ಸರ್ಕಾರದ ಆದ್ಯತೇತರ BPL ಕಾರ್ಡ್ ಗೆ ಕೆಜಿಗೆ 15 ರೂಪಾಯಿ ಗೆ ವಿತರಿಸಲಾಗ್ತಿದೆ.
ಅಂದಹಾಗೆ ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿ ಒಟ್ಟು 1,31,70,600 ಪಡಿತರ ಚೀಟಿಯಿದೆ. ಒಟ್ಟು 4,36,97,568 ಫಲಾನುಭವಿಗಳಿದ್ದು ಈಗ ಒಟ್ಟು 2,18,487.84 ಮೆಟ್ರಿಕ್ ಟನ್ ಅಕ್ಕಿ ನೀಡಲಾಗುತ್ತಿದೆ.
ಸದ್ಯ ಈಗ ಅಂತ್ಯೋದಯ ಕಾರ್ಡ್ನಲ್ಲಿ ಗರಿಷ್ಠ 35 ಕೆಜಿ, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ವ್ಯಕ್ತಿಗೆ 6 ಕೆಜಿ,ಎಪಿಎಲ್ಗೆ ಗರಿಷ್ಠ 10 ಕೆಜಿ ನೀಡಲಾಗುತ್ತದೆ. ಉಚಿತ ಅಕ್ಕಿಗಾಗಿ ಒಟ್ಟು ತಿಂಗಳಿಗೆ 742.86 ಕೋಟಿ ರೂ. ವೆಚ್ಚವಾಗುತ್ತದೆ. 10 ಕೆಜಿ ಕೊಡಲು ಶುರು ಮಾಡಿದರೆ ವೆಚ್ಚ ಡಬಲ್ ಆಗುತ್ತದೆ.
ಹೆಚ್ಚುವರಿ ಅಕ್ಕಿ ಖರೀದಿ ಹೇಗೆ..? ಎಲ್ಲಿಂದ..? ಖರ್ಚು ಎಷ್ಟು..?
ಈಗ ರಾಜ್ಯ ಸರ್ಕಾರ ನೀಡುತ್ತಿರುವ 6 ಕೆಜಿ ಅಕ್ಕಿಯಲ್ಲಿ 5 ಕೆಜಿ ಸಂಪೂರ್ಣ ಕೇಂದ್ರ ಸರ್ಕಾರ ಉಚಿತವಾಗಿ ನೀಡಲಿದೆ. ಹೀಗಾಗಿ ಹೆಚ್ಚುವರಿ 1 ಕೆಜಿ ಅಕ್ಕಿಯನ್ನ ಖರೀದಿಸಿ ಫಲಾನುಭವಿಗಳಿಗೆ ನೀಡಲು ಆಗ್ತಿರುವ ಖರ್ಚು ವಾರ್ಷಿಕ 1500 ಕೋಟಿ ರೂ. ಆಗುತ್ತದೆ. ಈಗ ಹೆಚ್ಚುವರಿ ನಾಲ್ಕು ಕೆಜಿ ಅಕ್ಕಿ ಖರೀದಿಗೆ 8 ರಿಂದ 9 ಸಾವಿರ ಕೋಟಿ ವಾರ್ಷಿಕ ಬೇಕಾಗುತ್ತದೆ. ಈ ಹಣವನ್ನ ರಾಜ್ಯ ಸರ್ಕಾರವೇ ಆಹಾರ ಇಲಾಖೆಗೆ ಒದಗಿಸಬೇಕು. ಅಕ್ಕಿಯನ್ನು ಕೇಂದ್ರ ಸರ್ಕಾರ FCI (Food Corporation of India) ಇಂದ ಖರೀದಿ ಮಾಡಲಾಗ್ತಿದೆ. ಈಗ ಹೆಚ್ಚುವರಿ ಅಕ್ಕಿ ಖರೀದಿಸಲು FCI ಗೆ ಮೊರೆ ಹೋಗಬೇಕಿದೆ. ಅಲ್ಲಿ ಅಕ್ಕಿ ಲಭ್ಯತೆ ಇಲ್ಲದೇ ಇದ್ದರೆ ಟೆಂಡರ್ ಕರೆಯಬೇಕಾಗಿದೆ.
