Home » ನಾಗರಹಾವು ಕಚ್ಚಿ ಉರಗತಜ್ಞ ನರೇಶ್ ಮೃತ್ಯು | ಮನೆಯೊಳಗೆ ಪತ್ತೆಯಾಯಿತು ವಿಷಕಾರಿ ಹಾವುಗಳ ರಾಶಿ

ನಾಗರಹಾವು ಕಚ್ಚಿ ಉರಗತಜ್ಞ ನರೇಶ್ ಮೃತ್ಯು | ಮನೆಯೊಳಗೆ ಪತ್ತೆಯಾಯಿತು ವಿಷಕಾರಿ ಹಾವುಗಳ ರಾಶಿ

by Mallika
0 comments

Chikmagalur: ನಾಗರಹಾವು ಕಚ್ಚಿ  ಉರಗತಜ್ಞ ನರೇಶ್  (51 ವ.)ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು (Chikmagalur)ಜಿಲ್ಲೆಯಲ್ಲಿ ನಡೆದಿದೆ.

ನರೇಶ್ ಅವರು ಬುಧವಾರ ಒಂದು ಕಡೆಯಿಂದ ನಾಗರಹಾವು ಹಿಡಿದುಕೊಂಡು ಬಂದಿದ್ದರು,ಮಧ್ಯಾಹ್ನ ಇನ್ನೊಂದು ಹಾವು ಹಿಡಿಯಲು ನರೇಶ್ ಅವರಿಗೆ ಕರೆ ಬಂದಿದೆ.

ಈ ವೇಳೆ ಮೊದಲೇ ಹಿಡಿದು ಸ್ಕೂಟಿಯಲ್ಲಿಟ್ಟ ಹಾವಿನ ಚೀಲದ ಗಂಟು ಬಿಗಿ ಮಾಡಲು ಡಿಕ್ಕಿ ಓಪನ್ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ನಾಗರಹಾವು ಕಚ್ಚಿದೆ. ಪರಿಣಾಮ ಆಸ್ಪತ್ರೆಗೆ ನರೇಶ್ ಬರುವಷ್ಟರಲ್ಲಿ ಸಾವನ್ನಪ್ಪಿದಾರೆ.

ಮನೆಯಲ್ಲಿ ಪತ್ತೆಯಾಯಿತು ರಾಶಿ ರಾಶಿ

ಉರಗ ತಜ್ಞ ನರೇಶ್ ಅವರ ಮನೆಯಲ್ಲಿ ನೂರಾರು ವಿಷಕಾರಿ ಹಾವುಗಳು ಬುಧವಾರ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಸ್ನೇಕ್ ನರೇಶ್ ಮನೆಯಲ್ಲಿ ನಾಗರಹಾವುಗಳು, ಕೊಳಕುಮಂಡಲ ಹಾವುಗಳ ರಾಶಿ ಸೇರಿದಂತೆ ನೂರಾರು ಹಾವಿನ ಮರಿಗಳು ಪತ್ತೆಯಾಗಿವೆ.

ಮನೆಯಲ್ಲಿ ಹಾವುಗಳ ರಾಶಿ ಕಂಡು ಪೊಲೀಸರು ಹಾಗೂ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಇಲಾಖೆಯ ಸಿಬಂದಿ ಬ್ಯಾರಲ್‌, ಚೀಲಗಳಲ್ಲಿ ಸಂಗ್ರಹಿಸಿದ್ದ ನೂರಾರು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಮನೆ ಸೇರಿದಂತೆ ಕಾರು, ಸ್ಕೂಟಿ ಗಳಲ್ಲೂ ನಾಗರಹಾವುಗಳು ಪತ್ತೆಯಾಗಿವೆ. ನೂರಾರು ಹಾವುಗಳು ಪತ್ತೆ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಗೊಂಡಿದ್ದಾರೆ.

You may also like

Leave a Comment