Dinesh Bhandari: ಪುತ್ತೂರು: ಪುತ್ತೂರಿನ ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ ಭಂಡಾರಿ (Dinesh Bhandari) (43ವ) ಅವರು ಮೂಡಬಿದ್ರೆಯ ಮನೆಯಲ್ಲಿ ಮೇ 31ರ ತಡ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಬೇಕರಿ ಉದ್ಯಮದಲ್ಲಿ ಹೆಸರು ಪಡೆದ ದಿ.ಐತ್ತಪ್ಪ ಭಂಡಾರಿ ಅವರು ಪುತ್ತೂರು ಬಸ್ ನಿಲ್ದಾಣದ ಬಳಿ, ಬೊಳುವಾರು ಸಹಿತ ಒಟ್ಟು ಮೂರು ಕಡೆ ದಿನೇಶ್ ಬೇಕರಿ ಸಂಸ್ಥೆಯನ್ನು ಹೊಂದಿದ್ದರು ಅವರ ಆನಾರೋಗ್ಯದ ಸಂದರ್ಭದಲ್ಲಿ ಐತ್ತಪ್ಪ ಭಂಡಾರಿ ಅವರ ಪತ್ನಿ ಭಾರತಿ ಮತ್ತು ಪುತ್ರ ದಿನೇಶ್ ಅವರು ಬೇಕರಿ ಉದ್ಯಮ ನಡೆಸುತ್ತಿದ್ದರು.
ಪರ್ಲಡ್ಕ ಕಲ್ಲಿಮಾರ್‌ನಲ್ಲಿ ಈ ಹಿಂದೆ ವಾಸ್ತವ್ಯ ಇದ್ದ ಅವರು ತಂದೆ ಐತ್ತಪ್ಪ ಭಂಡಾರಿ ಮತ್ತು ತಾಯಿ ಭಾರತಿ ನಿಧನದ ಬಳಿಕ ಬೇಕರಿ ಉದ್ಯಮವನ್ನು ಬಿಟ್ಟು ಮೂಡಬಿದ್ರೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಮೇ 31ರಂದು ರಾತ್ರಿ ದಿನೇಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ತೆರಳಿ ಅಲ್ಲಿಂದ ಚೇತರಿಕೆಗೊಂಡು ಮನೆಗೆ ಬಂದಿದ್ದ ಅವರು ರಾತ್ರಿ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಪುತ್ರ ಮತ್ತು ವಿದೇಶದಲ್ಲಿ ಉದ್ಯಮದಲ್ಲಿರುವ ಸಹೋದರರಾದ ಮಹೇಶ್, ಗಣೇಶ್, ಯತೀಶ್ ಅವರನ್ನು ಅಗಲಿದ್ದಾರೆ.
ಇದನ್ನು ಓದಿ: Daily horoscope: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಮುಖ ನಿರ್ಧಾರ ಕಾರ್ಯರೂಪಕ್ಕೆ ಬರುತ್ತದೆ
