Home » Kadaba: ಕಡಬ : ವಿದ್ಯುತ್ ಕಂಬದಲ್ಲಿ ಶಾಕ್ ,ಲೈನ್ ಮ್ಯಾನ್ ಸಾವು

Kadaba: ಕಡಬ : ವಿದ್ಯುತ್ ಕಂಬದಲ್ಲಿ ಶಾಕ್ ,ಲೈನ್ ಮ್ಯಾನ್ ಸಾವು

by Praveen Chennavara
0 comments
Kadaba

Kadaba: ಕಡಬ:ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಒಬ್ಬರು ಗಂಭೀರ ಗಾಯಗೊಂಡು, ಮೃತಪಟ್ಟ ಘಟನೆ ಕಡಬ (Kadaba) ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ.

ಮೃತಪಟ್ಟ ಲೈನ್ ಮ್ಯಾನ್ ಅನ್ನು ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಎಂದು ಗುರುತಿಸಲಾಗಿದೆ.

ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯರು ಮರದ ಕೋಲಿನ ಸಹಾಯದಿಂದ ಮೇಲಿನಿಂದ ಅವರನ್ನು ಕೆಳಗಿಳಿಸಿದ್ದು ಬಳಿಕ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಾಂತ್ರಿಕ ಸಮಸ್ಯೆ ಉಂಟಾದಾಗ ವಿದ್ಯುತ್ ಆಫ್ ಮಾಡಿಯೇ ದುರಸ್ತಿ ಮಾಡುತ್ತಿದ್ದರೂ ಇಂತಹ ಘಟನೆ ನಡೆಯುತ್ತಲೇ ಇರುತ್ತದೆ.
ಅದೆಷ್ಟೋ ಲೈನ್‌ಮ್ಯಾನ್‌ಗಳು ದುರಸ್ತಿ ವೇಳೆ ಮೃತಪಟ್ಟು ,ಕುಟುಂಬ ಅನಾಥವಾಗುವಂತಾಗಿದೆ.
ಇಂತಹ ಘಟನೆಗಳ ಕೂಲಂಕುಷ ತನಿಖೆ ನಡೆಯಬೇಕಿದೆ.

 

ಇದನ್ನು ಓದಿ: The Kerala Story OTT Release: ‘ದಿ ಕೇರಳ ಸ್ಟೋರಿ’ ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆ ; ಎಲ್ಲಿ ವೀಕ್ಷಿಸಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ 

You may also like

Leave a Comment