MP Devendrappa: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly election) ಹೀನಾಯವಾಗಿ ಸೋತಿರುವ ಬಿಜೆಪಿ(BJP) ಇದೀಗ ತನ್ನ ಸೋಲಿನ ಕಾರಣ ನೀಡುತ್ತ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ವಿರೋಧಿ ಅಲೆ ತನ್ನ ಸೋಲಿಗೆ ಕಾರಣ ಎಂದು ಬಿಜೆಪಿ ಹೇಳಿದ್ದರೂ ಕೂಡ ಕಾಂಗ್ರೆಸ್(Congress) ಘೋಷಿಸಿದ 5 ಗ್ಯಾರಂಟಿಗಳು ಕೂಡ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಕಾರಣ ಎನ್ನಬಹುದು. ಈ ಕುರಿತು ಆಗಾಗ ಬಿಜೆಪಿ ನಾಯಕರೇ ಹೇಳಿಕೆ ನೀಡುತ್ತಿದ್ದು, ಇದೀಗ ಬಿಜೆಪಿ ಸಂಸದ ದೇವೇಂದ್ರಪ್ಪ(BJP MP Devendrappa) ಕೂಡ ಇದನ್ನೇ ಹೇಳಿದ್ದಾರೆ.
ಹೌದು, ಅತ್ತಿ-ಸೊಸಿ ನಡುವೆ ಜಗಳ ಹಚ್ಚಲು ಉಚಿತ ಘೋಷಣೆ ಮಾಡಿದ್ದಾರೆ. ನಮ್ಮ ಜನರನ್ನು ಇನ್ನೂ ಸೋಮಾರಿಗಳನ್ನಾಗಿ ಮಾಡೋಕೆ ಸರಿಯಾಗಿ ಈ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಸುದ್ದಿ ಮಾಡುತ್ತಿವೆ ಎಂದು ರಾಜ್ಯದಲ್ಲಿ ಬಿಜೆಪಿ ಸೋಲಲು ಕಾಂಗ್ರೆಸ್ ನ ಗ್ಯಾರಂಟಿಗಳೇ ಕಾರಣ ಎಂಬುದಾಗಿ ಪರೋಕ್ಷವಾಗಿ ಧೂಷಿಸುವಂತೆ ಕಾಂಗ್ರೆಸ್ ವಿರುದ್ಧ ಬಳ್ಳಾರಿ ಸಂಸದ(Ballary) ದೇವೇಂದ್ರಪ್ಪ (MP Devendrappa) ವಾಗ್ದಾಳಿ ನಡೆಸಿದ್ದಾರೆ.
ಅಂದಹಾಗೆ ಪ್ರಧಾನಿ ಮೋದಿಬಂದರೂ(PM Modi) ಬಂದು ಬಿಜೆಪಿ ಗೆಲ್ಲಲಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಗ್ಯಾರಂಟಿ ಹೊಡೆತಕ್ಕ ಯಾರ್ ತಡಿತಾರ್ ರೀ..? ಅತ್ತಿ ನನಗೆ ಬೇಕು ಅಂತಾಳ, ಸೊಸಿ ನನಗ ಅಂತಾಳ. ಒಟ್ನಲ್ಲಿ ಮನೆ ಹಾಳಾಗುತ್ತೆ ಎಂದು ಬಿಜೆಪಿ ಸೋಲಿಗೆ, ಕಾಂಗ್ರೆಸ್ ಗ್ಯಾರಂಟಿ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಲ್ಲದೆ ಫ್ರೀ ಸ್ಕೀಂ ಘೋಷಿಸಿ ಸರ್ಕಾರ ಅತ್ತಿ ಸೊಸಿ ನಡುವೆ ಜಗಳ ತಂದಿಟ್ಟಾರ. ನನ್ನ ಹೆಸರಿನ ಅಕೌಂಟ್‌ಗೆ ಹಾಕ್ತಾರೆ ಅಂತಾ ಅತ್ತಿ, ಇಲ್ಲಾ ನನ್ನ ಹೆಸರಿಗೇ ಹಾಕೋದು ಅಂತ ಸೊಸಿ. ನನಗೆ ಬಸ್ ಫ್ರೀ ಅಂತಾ ಅತ್ತಿ ನನಗೂ ಬಸ್ ಪ್ರೀ ಅಂತಾ ಸೊಸಿ. ಇಂಥ ಗ್ಯಾರಂಟಿ ಹೊಡತದಿಂದ ನಾವು ಪ್ರಚಾರ ಮಾಡಿನೂ ಸೋತೆವು ಎಂದರು ಅತ್ತೆ ಸೊಸಿ ಫ್ರೀ ಸಿಕ್ತದೆ ಅನ್ನೋ ಕಾರಣಕ್ಕೆ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.ಒಟ್ನಲ್ಲಿ ನಮ್ಮ ಜನರು ಸೋಮಾರಿಗಳು. ಬಿಟ್ಟಿ ಸಿಗುತ್ತಂದ್ರ ವೋಟು ಹಾಕ್ತಾರ. ಅತ್ತೆ ಸೊಸೆ ಜಗಳ ಹಚ್ಚೋದಕ್ಕೆ, ಸೋಮಾರಿತನಕ್ಕೆ, ಮನೆ ಮನೆಗೆ ಬೆಂಕಿ ಹಚ್ಚೋದಕ್ಕೆ ಈ ಎಲ್ಲಾ ಗ್ಯಾರಂಟಿ ಸ್ಕೀಂ ಮಾಡಿದ್ದಾರೆ ಎನ್ನಬಹುದು ಅಂದಿದ್ದಾರೆ.
ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್ ನ ಗ್ಯಾರಂಟಿ ನಂಬರ್ 4 ಆದ ಒಂದು ಮನೆಯ ಮಹಿಳೆಗೆ ತಿಂಗಳಿಗೆ 2000 ರೂಪಾಯಿ ನೀಡುವ ಯೋಜನೆ ಬಗ್ಗೆ ಸೃಷ್ಟೀಕರಣ ನೀಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi hebbalkar) ಅವರು ಮನೆಯಲ್ಲಿ ಅತ್ತೆಯಂದಿರಿಗೆ ಮಾತ್ರ 2,000 ಹಣ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಹೀಗಾಗಿ ಇದು ಖಂಡಿತವಾಗಿಯೂ ಸಂಸದ ದೇವೇಂದ್ರಪ್ಪ ಹೇಳಿದಂತೆ ಮನೆಯಲ್ಲಿ ಬೆಂಕಿ ಹಚ್ಚೋ ಯೋಜನೆಯೇ ಆಗಿದೆ.
