Nalin Kumar kateel: ಕಾಂಗ್ರೆಸ್(congress) ಸುಳ್ಳುಗಾರರು ಮೋಸಗಾರರ ಪಾರ್ಟಿ. ಪ್ರಧಾನಿ ಮೋದಿ(PM Modi) ಎಲ್ಲೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ(BJP state President) ನಳೀನ್ ಕುಮಾರ್ ಕಟೀಲ್(Nalin Kumar kateel) ಟಾಂಗ್ ನೀಡಿದರು.
ಹೌದು, ಕಾಂಗ್ರೆಸ್(Congress) ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಬಿಜೆಪಿ ನಾಯಕರು(BJP Leaders)ಸಾಕಷ್ಟು ಹೇಳಿಕೆ ನೀಡುತ್ತಿದ್ದಾರೆ. ಶೀಘ್ರ ಜಾರಿಗೊಳಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕೂಡ ಬಿಜೆಪಿಗೆ ಪ್ರಶ್ನೆಯ ಸುರಿಮಳೆಗೈದಿದ್ದು, ನಿಮ್ಮ ಮೋದಿ ಲೋಕಸಭಾ ಚುನಾವಣೆ(Parliament election)ವೇಳೆ ಒಬ್ಬೊಬ್ಬರ ಖಾತೆಗೂ 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಅದೆಲ್ಲಿದೆ? ಎಂದು ಬಿಜೆಪಿಗೆ ಚಾಟಿಬೀಸುತ್ತಿವೆ. ಇದೀಗ ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಸುಳ್ಳುಗಾರರು, ಮೋಸಗಾರರ ಪಾರ್ಟಿ. ಪ್ರಧಾನಿ ಮೋದಿ(PM Modi) ಎಲ್ಲೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿ ನಡೆಸಿ, ಗ್ಯಾರಂಟಿ ಕಾರ್ಡ್ ನೀಡಿ ಅಡ್ಡದಾರಿ ಹಿಡಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ನಾವು 15 ಲಕ್ಷ ರೂ ಕೊಡ್ತೇವೆ ಎಂದು ಹೇಳಿದ್ದೇವೆ ಎಂದು ಹೇಳುತ್ತಾರೆ. ನಾವು ಹಾಗೆ ಹೇಳಲೇ ಇಲ್ಲ. ಗ್ಯಾರಂಟಿ ಎಂದು ಹೇಳಿ ಕಾರ್ಡ್ ಗಳನ್ನು ಮನೆಮನೆಗೆ ಕೊಟ್ಟು ಜನರನ್ನು ನಂಬಿಸಿ, ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತನ್ನು ಮರೆತಿದೆ. ಈಗ ನರೇಂದ್ರ ಮೋದಿ ಹೇಳಿದ್ದರು, ಅವರು ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಮೋದಿ ಅವರು ಹೇಳಿದ್ದು, ವಿದೇಶದಲ್ಲಿರುವ ಕಪ್ಪು ಹಣ ಬಂದರೆ ಅಕೌಂಟಿಗೆ ಬರುತ್ತದೆ ಎಂದಿದ್ದರೇ ವಿನಃ ಗ್ಯಾರಂಟಿ ಕಾರ್ಡ್ ನೀಡಿಲ್ಲ. ಇವತ್ತು ದಾರಿ ತಪ್ಪಿಸುವ ಹೇಳಿಕೆ ನೀಡುವ ಮೂಲಕ ಗ್ಯಾರಂಟಿ ಕಾರ್ಡ್ ನೀಡಲು ಹಿಂದೇಟು ಹಾಕುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಈ ಹಿಂದೆ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವವರು. ರಾಜ್ಯದ ಆರ್ಥಿಕ ಸ್ಥಿತಿ ಗೊತ್ತಿದ್ದೂ, ಜನರಿಗೆ ಸುಳ್ಳು ಹೇಳಿರುವ ಕಾಂಗ್ರೆಸ್, ಸುಳ್ಳುಗಾರ ಪಕ್ಷವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಷರತ್ತುರಹಿತವಾಗಿ ಅನುಷ್ಠಾನಗೊಳಿಸದಿದ್ದರೆ, ಬಿಜೆಪಿ ಜನರ ಪರವಾಗಿ ರಾಜ್ಯವ್ಯಾಪಿ ಹೋರಾಟ ಮಾಡಲಿದೆ. ಮೂರು ಸುತ್ತಿನ ಸಭೆ ನಡೆಸಿದರೂ ‘ಗ್ಯಾರಂಟಿ’ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಣಯಕ್ಕೆ ಬರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಜನರಿಗೆ ಮೋಸ ಮಾಡಿರುವ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಇದನ್ನು ಓದಿ: Subrahmanya: ಸುಬ್ರಹ್ಮಣ್ಯ: ಕೆಎಸ್ಆರ್ಟಿಸಿ ಬಸ್ ಗೆ ದಂತದಿಂದ ತಿವಿದ ಕಾಡಾನೆ
