Home » Dakshina Kannada: ಕರಾವಳಿಯಲ್ಲಿ ಸದ್ದಿಲ್ಲದೇ ನೈತಿಕ ಪೊಲೀಸ್‍ಗಿರಿ: ಅನ್ಯಕೋಮಿನ 3 ಯುವಕರ ಮೇಲೆ ಹಲ್ಲೆ, ಪೊಲೀಸರ ವಶಕ್ಕೆ

Dakshina Kannada: ಕರಾವಳಿಯಲ್ಲಿ ಸದ್ದಿಲ್ಲದೇ ನೈತಿಕ ಪೊಲೀಸ್‍ಗಿರಿ: ಅನ್ಯಕೋಮಿನ 3 ಯುವಕರ ಮೇಲೆ ಹಲ್ಲೆ, ಪೊಲೀಸರ ವಶಕ್ಕೆ

0 comments
Dakshina Kannada

Dakshina Kannada: ದಕ್ಷಿಣಕನ್ನಡ :ಕಡಲತಡಿಯ ಮಂಗಳೂರು ಭಾಗದಲ್ಲಿ ಸದ್ದಿಲ್ಲದೇ ಮತ್ತೆ ನೈತಿಕ ಪೊಲೀಸ್‍ಗಿರಿ ಪ್ರಕರಣಗಳು ಹೆಚ್ಚಾಗಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಕೇರಳ ಮೂಲದ ಮೂರು ಹಿಂದೂ ವಿದ್ಯಾರ್ಥಿನಿಯರು ಹಾಗೂ ಮೂವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ಸೋಮೇಶ್ವರ ಬೀಚ್‍ನಲ್ಲಿ ವಾಯುವಿಹಾರ ನಡೆಸುತ್ತಿದ್ದರು. ಅನ್ಯಕೋಮಿನ ಯುವತಿ ಜೊತೆ ಬಂದಿದ್ದಕ್ಕೆ ಯುವಕರ ನಡವಳಿಕೆಯನ್ನು ಗಮನಿಸಿ ಹಿಂಬಾಲಿಸಲಾಗಿತ್ತು. ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆ ತೀವ್ರಗೊಂಡಿದ್ದು, ವಿದ್ಯಾರ್ಥಿಗಳಾದ ಜಾಫರ್ ಶರೀಫ್, ಮುಜೀಬ್, ಆಶಿಕ್‍ ಮೇಲೆ ಹಲ್ಲೆ ನಡೆಸಲಾಗಿತ್ತು. ದೇರಳಕಟ್ಟೆ (Dakshina Kannada) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದೂ ವಿದ್ಯಾರ್ಥಿನಿಯರ ಜತೆ ಬಂದಿದ್ದ ಕಾರಣಕ್ಕೆ ನೈತಿಕ ಪೊಲೀಸ್‍ಗಿರಿ ನಡೆದಿರುವುದಾಗಿ ಬಹಿರಂಗವಾಗಿದೆ ಈ ಘಟನೆ ಸಂಬಂಧಿಸಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ:  Bellary: ಬಳ್ಳಾರಿ ಶಾಲಾ ಆಡಳಿತ ಮಂಡಳಿ ಯಡವಟ್ಟು : ಆರಂಭವಾದ 2ನೇ ದಿನವೇ ಮಕ್ಕಳಿಗೆ ಮರದ ಕೆಳಗೆ ಪಾಠ..! 

You may also like

Leave a Comment