Home » Puttur: ಪುತ್ತೂರು :ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

Puttur: ಪುತ್ತೂರು :ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು

by Praveen Chennavara
0 comments
Puttur

Puttur: ಪುತ್ತೂರು:ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಬಲ್ನಾಡು ಬಂಗಾರಡ್ಕ ನಿವಾಸಿ ವಿದ್ಯಾರ್ಥಿನಿಯೊಬ್ಬರು ಜೂ.2ರಂದು ಮಂಗಳೂರು ಆಸ್ಪತ್ರೆಯಲ್ಲಿ (Puttur)ಮೃತಪಟ್ಟಿದ್ದಾರೆ. ಬಲ್ನಾಡು ಬಂಗಾರಡ್ಕ ದಿ.ಕಮಲಾಕ್ಷ ಅವರ ಪ್ರತಿ ವಂಶಿ
ಬಿ.ಕೆ (17ವ.) ಮೃತಪಟ್ಟವರು.

ಅವರು ಎಸ್.ಎಸ್.ಎಲ್.ಸಿ ಮುಗಿಸಿ ಮುಂದೆ ಪಿಯುಸಿ ಓದಲು ಕಾಲೇಜು ಸೇರುವ ಸಿದ್ಧತೆಯಲ್ಲಿದ್ದರು.ಈ ನಡುವೆ ಅವರು ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿಂದ ಚೇತರಿಸಿಕೊಂಡು ಮನೆಗೆ ಹೋಗಿದ್ದರು.ಈ ನಡುವೆ ಮತ್ತೆ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತರು ತಾಯಿ ಬಿ.ಎಸ್ ಜಯಲತಾ ಮತ್ತು ಸಹೋದರನನ್ನು ಅಗಲಿದ್ದಾರೆ.

 

ಇದನ್ನು ಓದಿ : ನನ್ನ ಟೀ ಶರ್ಟ್ ಎಳೆದು, ಮೆಲ್ಲನೆ ಎದೆಯ ಮೇಲೆ ಕೈ ಸವರಿ…….! ಕೇಂದ್ರ ಸಚಿವ ಬ್ರಿಜ್ ಭೂಷಣ್ ಮೇಲಿನ ಆರೋಪಗಳು ಬಹಿರಂಗ!

You may also like

Leave a Comment