Bidar: ವ್ಯಕ್ತಿಯೊಬ್ಬ ತನ್ನ ಊರಿಗೆ ಹೋಗಲು. ಬಸ್ ಗೆ ಕಾದು ಕಾದು ಸುಸ್ತಾಗಿ ಕೊನೆಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ ನ್ನು ತೆಗೆದುಕೊಂಡು ತನ್ನೂರಿಗೆ ಹೊರಟ ವಿಚಿತ್ರ ಯಡವಟ್ಟು ಘಟನೆ ನಡೆದಿದೆ.
ಬೀದರ್ ನ ಔರಾದ (Bidar) ಎಂಬಲ್ಲಿ ಈ ಘಟನೆ ಜೂ.5 ರಂದು ನಡೆದಿದೆ. ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಬೆಳಿಗ್ಗೆಯಿಂದ ನಿಲ್ದಾಣದಲ್ಲಿ ಕುಳಿತರೂ ತನ್ನೂರಿಗೆ ಹೋಗಲು ಬಸ್ ಇರಲಿಲ್ಲದ ಕಾರಣ, ಹೀಗಾಗಿ ಬಸ್ ತೆಗೆದುಕೊಂಡು ಹೋಗಿದ್ದಾನೆ.
ಇವತ್ತು ಚಾಲಕ ಹಾಗೂ ನಿರ್ವಾಹಕರು ಔರಾದ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ನಿಲ್ದಾಣದಲ್ಲಿ ಎಂಟ್ರಿ ಮಾಡಿಕೊಂಡು ಟೀ ಕುಡಿದು ಬರಲು ಹೊರಟಿದ್ದರು. ಹಾಗೆ ಹೋಗಿ ಬರುವ ಸಮಯದಲ್ಲಿ ವ್ಯಕ್ತಿಯೊಬ್ಬ ಬಸ್ ಏರಿ ಡ್ರೈವಿಂಗ್ ಸೀಟಿನಲ್ಲಿ ಹತ್ತಿ ಕೂತಿದ್ದ. ನಂತರ ಬಸ್ ಸ್ಟಾರ್ಟ್ ಮಾಡಿ ಚಲಾಯಿಸಿಯೇ ಬಿಟ್ಟಿದ್ದಾನೆ. ಕುಡಿದ ಮತ್ತಿನಲ್ಲಿ ಯಶಪ್ಪ ಈ ರೀತಿಯಾಗಿ ಮಾಡಿದ್ದು, ಬಸ್‌ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈತ ಬಸ್ ನ್ನು ಚಲಾಯಿಸಿ ಕ್ರೂಸರ್ ವಾಹನಕ್ಕೆ ಢಿಕ್ಕಿ ಹೊಡೆಸಿದ್ದಾನೆ. ನಂತರ ಬಸ್ ಅನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ.
ಅಷ್ಟರಲ್ಲಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಓಡಿ ಬಂದು. ಬಸ್ ಅನ್ನು ಕಂಟ್ರೋಲ್ ತೆಗೆದುಕೊಂಡಿದ್ದಾರೆ. ಆಗ ಯಶಪ್ಪ ಸೂರ್ಯವಂಶಿ ಓಡಿ ಹೋಗಿದ್ದಾನೆ. ಆಗ ಸಾರ್ವಜನಿಕರ ಸಹಾಯದಿಂದ ಆತನನ್ನು ಹಿಡಿಯಲಾಗಿದೆ. ನಂತರ ಎಎಸ್‌ಐ ಸುನೀಲಕುಮಾರ್ ಆತನನ್ನು ತನ್ನ ಕಾರಿನಲ್ಲಿ ಔರಾದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಯಶಪ್ಪ ಇಟಂಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಗ್ರಾಮಕ್ಕೆ ತೆರಳಲು ಔರಾಗೆ ಬಂದಿದ್ದ ಸಂದರ್ಭ ಕುಡಿದ ಮತ್ತಿನಲ್ಲಿ ಈ ರೀತಿ ಬಸ್ ಚಲಾಯಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಮಡಿವಾಳಪ್ಪ ಭೇಟಿ ನೀಡಿ ಸಂಚಾರ ದಟ್ಟಣೆ ನಿವಾರಿಸಿ ಉಳಿದ ವಾಹನಗಳಿಗೆ ಜಾಗ ಮಾಡಿಕೊಟ್ಟಿದ್ದಾರೆ.
