Home » Bihar DCM Tejaswi yadav: ನಾವು ಉದ್ದೇಶಪೂರ್ವಕವಾಗಿಯೇ ಸೇತುವೆಯನ್ನು ಕೆಡವಿದ್ದೇವೆ- ಅಚ್ಚರಿ ಹೇಳಿಕೆ ನೀಡಿದ ಬಿಹಾರ ಡಿಸಿಎಂ!!

Bihar DCM Tejaswi yadav: ನಾವು ಉದ್ದೇಶಪೂರ್ವಕವಾಗಿಯೇ ಸೇತುವೆಯನ್ನು ಕೆಡವಿದ್ದೇವೆ- ಅಚ್ಚರಿ ಹೇಳಿಕೆ ನೀಡಿದ ಬಿಹಾರ ಡಿಸಿಎಂ!!

by ಹೊಸಕನ್ನಡ
0 comments
Bihar DCM Tejaswi yadav

Bihar DCM Tejashwi Yadav : ಬಿಹಾರದ( Bihar) ಭಾಗಲ್‌ಪುರದಲ್ಲಿ(Bhagalpur) ಬರೋಬ್ಬರಿ 1,700ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದ ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದ್ದು, ಈ ಅಪಘಾತದ ಭಯಾನಕ ವಿಡಿಯೋವೊಂದು ವೈರಲ್ ಆಗಿ ಸಾಕಷ್ಟು ಸುದ್ಧಿಯಾಗಿತ್ತು. ಆದರೀಗ ಅಚ್ಚರಿ ಎಂಬಂತೆ ಗಂಗಾ ನದಿಗೆ (Ganga River) ನಿರ್ಮಿಸಲಾಗುತ್ತಿದ್ದ ಸೇತುವೆಯನ್ನು ಉದ್ದೇಶಪೂರ್ವಕವಾಗಿಯೇ ಕೆಡವಲಾಗಿದೆ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ (Bihar DCM Tejashwi Yadav) ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nithish kumar) ಅವರ ಕನಸಿನ ಯೋಜನೆ ಇದಾಗಿರುವ ಗಂಗಾನದಿ ಸೇತುವೆ ನಿರ್ಮಾಣಕ್ಕೆ 2014ರ ಫೆಬ್ರವರಿ 23 ರಂದು ಖಗಾರಿಯಾ ಜಿಲ್ಲೆಯ ಪರ್ಬಟ್ಟಾದಲ್ಲಿ ಶಂಕುಸ್ಥಾಪನೆ ನಡೆದು, ನಿರ್ಮಾಣದ ಹಂತದಲ್ಲಿದ್ದ ಸೇತುವೆ ಇದೀಗ ಕುಸಿದು ಬಿದ್ದಿದೆ. ಆದರೆ 1,700ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರೋ ಈ ಸೇತುವೆಯನ್ನು ಉದ್ದೇಶಪೂರ್ವಕವಾಗಿಯೇ ಕೆಡವಲಾಗಿದೆ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ (Bihar DCM Tejashwi Yadav) ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಮಾತನಾಡಿದ ಅವರು “ಕಳೆದ ವರ್ಷದ ಏಪ್ರಿಲ್ 30ರಂದು ಈ ಸೇತುವೆಯ ಒಂದು ಭಾಗ ಕುಸಿದ ಬಳಿಕ ನಾವು ಐಐಟಿ-ರೂರ್ಕಿಯನ್ನು ಸಂಪರ್ಕಿಸಿದೆವು. ಇವರು ನಡೆಸಿದ ಅಂತಿಮ ವರದಿ ಇನ್ನೂ ಕೈಸೇರಬೇಕಿದೆ. ಆದರೆ ಸೇತುವೆಯ ರಚನೆಯನ್ನು ಅಧ್ಯಯನ ಮಾಡಿದ ತಜ್ಞರು ಗಂಭೀರ ದೋಷಗಳಿವೆ ಎಂದು ನಮಗೆ ತಿಳಿಸಿದ್ದರು” ಎಂದು ಹೇಳಿಕೆ ನೀಡಿದ್ದಾರೆ.

ಅಂದಹಾಗೆ ಬೆಳಿಗ್ಗೆ ತಾನೆ ಬಿಹಾರ ಸಿಎಂ ನಿತೀಶ್ ಕುಮಾರ್(Bihar CM Nithish kumar) ಸೇತುವೆ ಕುರಿತ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಕುಸಿತಕ್ಕೆ ಕಾರಣರಾದವರನ್ನು ಗುರುತಿಸುವಂತೆ ಕೇಳಿದ್ದಾರೆ. ಘಟನೆ ಸಂಬಂಧ ‘ಪುಲ್ ನಿರ್ಮಾಣ್ ನಿಗಮ’ದಿಂದ ವರದಿ ಕೇಳಿದ್ದಾರೆ. ಆದರೆ ಈ ಬೆನ್ನಲ್ಲೇ ಡಿಸಿಎಂ ಈ ರೀತಿ ಹೇಳಿಕೆ ನೀಡಿರುವುದು ಅಚ್ಚರಿ ಎನಿಸಿದೆ. ಸಿಎಂ ಹಾಗೂ ಡಿಸಿಎಂ ನಡುವೆಯೇ ಒಮ್ಮತದ ನಿರ್ಧಾರ ಇಲ್ಲದಿರುವುದು ಅನುಮಾನಕ್ಕೂ ಎಡೆಮಾಡಿದೆ.

ಅಂದಹಾಗೆ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಈ ಸೇತುವೆಯನ್ನು ಉದ್ದೇಶಪೂರ್ವಕವಾಗಿಯೇ ಉರುಳಿಸಿದ್ದೇವೆ ಎಂಬ ಡಿಸಿಎಂ ಹೇಳಿಕೆ ವಿಪಕ್ಷಗಳಿಗೆ ಆಹಾರವಾಗಿದ್ದು ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ನಿರ್ಮಾಣದ ಹೊಣೆ ಹೊತ್ತಿರುವ ಎಸ್‍ಪಿ ಸಿಂಗ್ಲಾ ಕಂಪನಿ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸಿಎಂ ನಿತೀಶ್ ಕುಮಾರ್ ಆದೇಶ ನೀಡಿದ್ದಾರೆ.

ಇದನ್ನೂ ಓದಿ: Bollywood actor Rekha: ಆ ನಟ ನನ್ನನ್ನು ಗಟ್ಟಿಯಾಗಿ ತಬ್ಬಿ 5 ನಿಮಿಷ ಎಡೆಬಿಡದೆ ಕಿಸ್ ಮಾಡಿದ್ದ!! ಕರಾಳ ಸತ್ಯ ಬಿಚ್ಚಿಟ್ಟ ಬಾಲಿವುಡ್ ಬ್ಯೂಟಿ ರೇಖಾ

You may also like

Leave a Comment