Gruha Jyoti scheme : ಅಧಿಕಾರಕ್ಕೆ ಬಂದ ಬೆನ್ನಿಗೇ ಬಹು ನಿರೀಕ್ಷೆಯಿಂದ ಮತ್ತು ಉತ್ಸಾಹದಿಂದ ಎಲ್ಲಾ ಉಚಿತ ಯೋಜನೆಗಳನ್ನು ಜಾರಿಗೊಳಿಸಲು ಕ್ರಮ ಕೈಗೊಂಡ ಕಾಂಗ್ರೆಸ್ ಇದೀಗ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಆರ್ಥಿಕ ಸಂಪನ್ಮೂಲದ ಕೊರತೆಯ ಹೆಸರು ಹೇಳಿಕೊಂಡು ಮಾರಾ ಮೋಸಕ್ಕೆ ಇಳಿದಿದೆ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ. ಇದಕ್ಕೆ ಒಂದು ಫ್ರೆಶ್ ಉದಾಹರಣೆ, ನಿನ್ನೆ ಕಾಂಗ್ರೆಸ್ ಸರಕಾರ ಘೋಷಿಸಿದ ಗೃಹ ಜ್ಯೋತಿ ಮಾರ್ಗ ಸೂಚಿ. ಈ ಗೃಹಜೋತಿ ಮಾರ್ಗಸೂಚಿಯ ಪ್ರಕಾರ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ಇಲ್ಲ ಎನ್ನುವ ಆತಂಕಕಾರಿ ವಿಷಯ ಬಹಿರಂಗವಾಗಿದೆ.
ಗೃಹ ಜ್ಯೋತಿ ಯೋಜನೆಯನ್ನು(Gruha Jyoti scheme ) ಜುಲೈ 2023ರ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ 2023ರ ತಿಂಗಳಿನಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಕೆಲ ಷರತ್ತುಗಳನ್ನು ಶಕ್ತಿ ಯೋಜನೆಗೆ ವಿಧಿಸಿದ್ದಾರೆ. ಆ ಷರತ್ತುಗಳಲ್ಲಿ ಪ್ರಮುಖವಾದುದು ಒಂದು ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ (ಒಂದು RR ನಂಬರ್), ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುವವರು ಎಂದು ಹೇಳಲಾಗಿದೆ.
ನಿನ್ನೆ ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ ಅವರು, ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಒಂದು ಆರ್ ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂದು ತಿಳಿಸಿದ್ದಾರೆ. ಅಲ್ಲದೇ ಇಲ್ಲಿ ಬಾಡಿಗೆದಾರರು ಮತ್ತು ಮಾಲೀಕರು ಎಂದು ವ್ಯತ್ಯಾಸ ಮಾಡುತ್ತಿಲ್ಲ. ಸ್ಥಾವರ ಎಂಬುದರ ಅರ್ಥ ಒಂದು ಆರ್ ಆರ್ ನಂಬರ್ ಆಗಿದೆ. ಯಾರು ಎಷ್ಟೇ ಸಂಖ್ಯೆಯ ಆರ್ ಆರ್ ನಂಬರ್ ಹೊಂದಿರಲಿ, ಒಂದು ಆರ್ ಆರ್ ನಂಬರ್ ಗೆ ಮಾತ್ರ ಈ ಉಚಿತ ಯೋಜನೆ ಅಡಿಯಲ್ಲಿ ಪ್ರಯೋಜನ ದೊರೆಯಲಿದೆ ಎಂಬುದಾಗಿ ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ.
ಮನೆ ಮಾಲೀಕರ ಹೆಸರಿನಲ್ಲಿ ಹಲವು ಮನೆಗಳಿರುತ್ತವೆ. ಆಯಾ ಮನೆಗಳಿಗೆ ಪ್ರತ್ಯೇಕ ಆರ್ ಆರ್ ನಂಬರ್ ಗಳಿರುತ್ತವೆ. ಆದರೆ ಎಲ್ಲ RR ನಂಬರ್ ಗಳು ಮನೆಯ ಓನರ್ ಹೆಸರಲ್ಲಿ ಇರುತ್ತದೆ. ಅವುಗಳಲ್ಲಿ ಬಾಡಿಗೆದಾರರು ವಾಸಿಸುತ್ತಿರುತ್ತಾರೆ. ಈ ಬಾಡಿಗೆದಾರರಿಗೆ ರಾಜ್ಯ ಸರ್ಕಾರ ವಿಧಿಸಿರುವಂತ ಗೃಹ ವಿದ್ಯುತ್ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರು ನಿಯಮದ ಅಡಿ ಮನೆಯ ಓನರ್ ಗೆ ಮಾತ್ರ ಉಚಿತ ವಿದ್ಯುತ್ ಪ್ರಯೋಜನ ದೊರೆಯವುದು. ಹಾಗಾಗಿ ಬಡ ಬಾಡಿಗೆದಾರರಿಗೆ ಇಲ್ಲ ಉಚಿತ ವಿದ್ಯುತ್ ಎಂಬುದಾಗಿ ಹೇಳಲಾಗುತ್ತಿದೆ.
ನಿನ್ನೆ ಬಿಡುಗಡೆ ಮಾಡಿದ ಮಾರ್ಗಸೂಚಿ ಪರಿಪೂರ್ಣವಾಗಿಲ್ಲ. ಹೀಗಾಗಿ ಉಚಿತ ವಿದ್ಯುತ್ ಯೋಜನೆ ಪಡೆಯಲು ಅರ್ಜಿ ಕರೆಯಲಾಗುತ್ತಿದೆ. ರಾಜ್ಯದಲ್ಲಿ 2 ಕೋಟಿ 15 ಲಕ್ಷ ಆರ್ ಆರ್ ನಂಬರ್ ಇದ್ದಾವೆ. ಉಚಿತ ವಿದ್ಯುತ್ ಯೋಜನೆ ಜಾರಿಗೆ 13 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಎಲ್ಲಾ ಮಾಹಿತಿಯಿಂದ ಮನೆ ಮಾಲೀಕರಿಗೆ ಮಾತ್ರವೇ ಉಚಿತ ವಿದ್ಯುತ್ ಸೌಲಭ್ಯ ದೊರೆತು, ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ ಎಂಬುದಾಗಿ ತಿಳಿದಂತೆ ಆಗಿದೆ. ಹಾಗಾಗಿ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಾರೆ. ಕಾಂಗ್ರೆಸ್ ಜನರಿಗೆ ಆಸೆ ತೋರಿಸಿ ಓಟು ಪಡೆದು ವಂಚಿಸುವ ಕಾರ್ಯ ನಡೆಸುತ್ತಿದೆ ಎನ್ನುವ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ. ಈಗ ರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಯಾರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಗೊತ್ತಾಗಬೇಕು ಎನ್ನುವ ಕೂಗು ಬಲವಾಗಿ ಎದ್ದಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರತಿಭಟಿಸುವುದು ಅನಿವಾರ್ಯ.
ಇದನ್ನೂ ಓದಿ: 275 ಬಲಿ ತೆಗೆದುಕೊಂಡ ಒಡಿಶಾ ಬಾಲಾಸೋರ್ ರೈಲು ದುರಂತ: ‘ ಅಪರಿಚಿತನ ‘ ನಿರ್ಲಕ್ಷ್ಯವೇ ಸಾವಿಗೆ ಕಾರಣ, ರೈಲ್ವೆ ಪೊಲೀಸರಿಂದ ಪ್ರಕರಣ
