Home » Gruha Jyoti scheme :ರಾಜ್ಯಾದ್ಯಂತ ಬಾಡಿಗೆದಾರರಿಗೂ ಗೃಹಜ್ಯೋತಿ ಭಾಗ್ಯ ಸಿಗಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Gruha Jyoti scheme :ರಾಜ್ಯಾದ್ಯಂತ ಬಾಡಿಗೆದಾರರಿಗೂ ಗೃಹಜ್ಯೋತಿ ಭಾಗ್ಯ ಸಿಗಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

6 comments
Gruha Jyoti scheme

Gruha Jyoti scheme: ಬೆಂಗಳೂರು: ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕಾಗಿ ಬಳಸೋ ಬಳಕೆದಾರರನ್ನು ಬಿಟ್ಟು, ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್​ನೀಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಭಾರೀ ಬಹುಮತದೊಂದಿಗೆ ಗೆದ್ದು ಬೀಗಿದ ಕಾಂಗ್ರೆಸ್‌ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು ಜಾರಿಯಾಗುತ್ತಿದ್ದಂತೆ, ಮಾನದಂಡಗಳಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯಸಂಪುಟ ಸಭೆಯಲ್ಲೂ ‘ಎಲ್ಲರಿಗೂ ಉಚಿತ ವಿದ್ಯುತ್​ ನೀಡ್ತೇವೆ’ ಮರುಉಚ್ಚರಿಸಿದ್ದಾರೆ.

ಇದೀಗ ಜನ ಸಾಮಾನ್ಯರಲ್ಲಿ ಬಹುದೊಡ್ಡ ಗೊಂದಲಕ್ಕೆ ಕಾರಣವಾಗಿದ್ದು. ಈ ಬಗ್ಗೆ ಮಾಧ್ಯಮಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯಾದ್ಯಂತ ಬಾಡಿಗೆದಾರರಿಗೆ ಸೇರಿದಂತೆ ಎಲ್ಲರಿಗೂ 200 ಯೂನಿಟ್​ ಒಳಗೆ ವಿದ್ಯುತ್​​ ಉಪಯೋಗಿಸುವವರಿಗೆ ಗೃಹಜ್ಯೋತಿ ಭಾಗ್ಯ ಉಚಿತವಾಗಲಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸುವವರಿಗೆ ಮಾತ್ರ ಅನ್ವಯವಾಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ . ಈ ಬೆನ್ನಲ್ಲೆ ಒಂದೇ ಮಾಲೀಕರ ಹೆಸರಿನಲ್ಲಿ ನಾಲ್ಕಾರು ವಿದ್ಯುತ್ ಮೀಟರುಗಳಿದ್ದರೆ ಯಾರಿಗೆ ಉಚಿತವಾಗುತ್ತೆ ಅನ್ನೋದು ಮತ್ತೊಂದು ಹೊಸ ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!

You may also like

Leave a Comment