Hyderabad: ಸಿನಿಮಾದಲ್ಲಿ ಅವಕಾಶ(Film chance) ಗಿಟ್ಟಿಸಿಕೊಳ್ಳಲು ಹಲವರು ನಾನಾ ರೀತಿಯ ಕೆಲಸಗಳನ್ನು, ಸಾಹಸಗಳನ್ನು ಮಾಡುತ್ತಾರೆ. ಕೆಲವರು ತಮ್ಮ ಪರಿಶ್ರಮಗಳಿಂದ ಅವಕಾಶ ಪಡೆದರೆ, ಇನ್ನು ಕೆಲವರು ಅನ್ಯ ಮಾರ್ಗವನ್ನು ಹಿಡಿದು ಪಡೆಯುತ್ತಾರೆ. ಅಂತೆಯೇ ಇಲ್ಲೊಬ್ಬಳು ಮಹಾ ತಾಯಿ ಸಿನಿಮಾಗೋಸ್ಕರ ತನ್ನ 16ರ ಮಗಳಿಗೆ ಹಾರ್ಮೋನ್(Hormone Tablets) ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಆಂಧ್ರಪ್ರದೇಶ (Andhrapradesh) ದ ಪೊಲೀಸರ ಅತಿಥಿಯಾಗಿದ್ದಾಳೆ.
ಹೌದು, ಹೈದರಾಬಾದ್(Hyderabad) ಮೂಲದ ಮಹಿಳೆಯೊಬ್ಬಳು ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ದೈಹಿಕ ಬೆಳವಣಿಗೆಯನ್ನು(physical improvement) ಹೆಚ್ಚಿಸುವ ಪ್ರಯತ್ನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ತನ್ನ ಮಗಳಿಗೆ ಒತ್ತಾಯ ಮಾಡುತ್ತಿದ್ದು, ಅದರ ಹಿಂಸೆಯನ್ನು ತಾಳಲಾರದೆ ಆ ಹುಡುಗಿಯು ಈ ವಿಚಾರವನ್ನು ಬಹಿರಂಗಪಡಿಸಿದ್ದಾಳೆ.
ನೋವು ಮತ್ತು ಅಡ್ಡ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಆಕೆ ಚೈಲ್ಡ್‍ಲೈನ್‍ನ(Child line) ಸಹಾಯ ಪಡೆದು ದೂರು ದಾಖಲಿಸಿದ್ದಾಳೆ. ಈ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕೊನೆಗೂ ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 16 ವರ್ಷದ ಹುಡುಗಿ (Girl) ಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಅಂದಹಾಗೆ ಕಳೆದ ನಾಲ್ಕು ವರ್ಷಗಳಿಂದ ಈ ಹಾರ್ಮೋನ್ ಮಾತ್ರೆ (Hormone Pills) ಗಳನ್ನು ಆಕೆ ಸೇವಿಸುತ್ತಿದ್ದಳು. ಇದರಿಂದಾಗಿ ಪ್ರಜ್ಞಾಹೀನತೆ ಮತ್ತು ದೇಹದಲ್ಲಿ ತೀವ್ರವಾದ ಊತವನ್ನು ಅನುಭವಿಸಿದ್ದಾಳೆ. ಬಲವಂತದ ಔಷಧ ತನ್ನ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಗೊತ್ತಾದಾಗ ಯುವತಿ ಆಘಾತಕ್ಕೊಳಗಾಗಿದ್ದಾಳೆ.
ಇಷ್ಟೇ ಅಲ್ಲದೆ ಮಗಳನ್ನು ಹೇಗಾದ್ರೂ ಮಾಡಿ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಬೇಕು ಎಮದು ಪಣ ತೊಟ್ಟಿರುವ ತಾಯಿ ಕೆಲವೊಂದು ಸಿನಿಮಾ ನಿರ್ಮಾಪಕರ ಜೊತೆ ತಾನೂ ಸಂಪರ್ಕದಲ್ಲಿದ್ದರು. ಆದರೆ ಇದನ್ನೆಲ್ಲಾ ವಿರೋಧಿಸಿದಾಗ ತಾಯಿ ತನಗೆ ನೀಡಿರುವ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ಕೂಡ ಆಕೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
