Daredevil Musthafa: ಕಳೆದೆರಡು ವಾರಗಳ ಹಿಂದೆ ರಿಲೀಸ್ ಆದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಕಥೆ ಆಧರಿಸಿದ ‘ಡೇರ್ಡೆವಿಲ್ ಮುಸ್ತಫಾ’ (Daredevil Musthafa) ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆರಂಭದಲ್ಲಿ ಒಂದು ರೂಪಾಯಿ ಟಿಕೆಟ್ ನೀಡಿ ಪ್ರದರ್ಶನ ಆರಂಭಿಸಿದ ಈ ಸಿನಿಮಾ ಇದೀಗ ಜನಮನ್ನಣೆಗಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಈಗ ಮತ್ತೆ ಟಿಕೆಟ್ ಬೆಲೆ ತಗ್ಗಿಸಿರುವುದರಿಂದ ಇನ್ನಷ್ಟು ಜನರನ್ನು ತಲುಪಲು ಸಾಧ್ಯವಾಗಲಿದೆ.
ಹೌದು, ಆರಂಭದಿಂದಲೂ ಡೇರ್ ಡೆವಿಲ್ ಮುಸ್ತಾಫ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನಕಂಡಿದೆ. ಜನರ ಪ್ರತಿಕ್ರಿಯೆ ನೋಡಿ, ಯಾಶಸ್ವಿ ಪ್ರದರ್ಶನದ ಹಿನ್ನೆಲೆಯಲ್ಲಿ ಮುಂದೆ ಚಿತ್ರಮಂದಿರಗಳ ಸಂಖ್ಯೆಯನ್ನೂ ಕೂಡ ಹೆಚ್ಚಿಸಲಾಯಿತು. ಈಗ ಪ್ರೇಕ್ಷಕರಿಗೆ ಈ ಸಿನಿಮಾ ತಂಡದ ಕಡೆಯಿಂದ ಒಂದು ಬಂಪರ್ ಆಫರ್ ನೀಡಲಾಗಿದ್ದು, ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರದ ಟಿಕೆಟ್ ಬೆಲೆಯನ್ನು (Daredevil Musthafa Ticket Price) ತಗ್ಗಿಸಲಾಗಿದೆ.
ಕೇವಲ ಚಿತ್ರಮಂದಿರಗಳು(Theaters)ಮಾತ್ರವಲ್ಲದೇ ಮಲ್ಟಿಪ್ಲೆಕ್ಸ್ಗಳಲ್ಲೂ ಟಿಕೆಟ್ ದರ ಕಡಿತ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಸೆಕೆಂಡ್ ಕ್ಲಾಸ್ಗೆ 50 ರೂಪಾಯಿ ಹಾಗೂ ಬಾಲ್ಕನಿಗೆ 75 ರೂಪಾಯಿ ನಿಗದಿ ಮಾಡಲಾಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ (Multiplex) 99 ರೂಪಾಯಿಗೆ ಟಿಕೆಟ್ ಲಭ್ಯವಾಗುತ್ತಿವೆ.
ಅಂದಹಾಗೆ ಒಬ್ಬ ಸಿನಿಮಾ ನಟನಿಗೆ ಇರುವಷ್ಟು ಅಭಿಮಾನಿಗಳು ಕಥೆಗಾರ, ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರಿಗಿದ್ದಾರೆ(Poornachandra tejaswi). ಅವರು ಇಂದಿಲ್ಲವಾದರೂ ಅವರು ಬರೆದ ಕಥೆಗಳನ್ನು ಓದಿ ಇಷ್ಟಪಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಅವರ ಒಂದಷ್ಟು ಕಥೆಗಳನ್ನು ಸಿನಿಮಾ ಮಾಡಬೇಕು ಎಂದು ಹಲವರು ಪ್ಲಾನ್ ಮಾಡಿಕೊಂಡಿದ್ದರು. ಈಗ ಮೈಸೂರು ಮೂಲದ ಟೆಕ್ಕಿ ಶಶಾಂಕ್ ಸೋಗಾಲ(Shashank sogala) ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಫಾ’ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಸಿನಿಮಾ ತೆರೆಕಂಡಾಗಿನಿಂದಲೂ ಜನರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನು ರಾಹುಲ್ ರಾಯ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.
ಇದನ್ನು ಓದಿ: Government Job: ಭಾರತದಲ್ಲಿ ಈ ಸರ್ಕಾರಿ ಹುದ್ದೆಗಳಿಗೆ ಅತೀ ಹೆಚ್ಚು ಸಂಬಳ ಸಿಗುತ್ತದೆ! ಫುಲ್ ಡಿಟೇಲ್ಸ್ ಇಲ್ಲಿದೆ
