DHFWS Recruitment 2023: ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು (DHFWS) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (DHFWS Recruitment 2023). ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಯ ವಿವರ:-
ಸೈಕಿಯಾಟ್ರಿಸ್ಟ್ -1
ಸೈಕಿಯಾಟ್ರಿಕ್ ನರ್ಸ್-1
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 02/06/2023
ಸಂದರ್ಶನ ನಡೆಯುವ ದಿನಾಂಕ: ಜೂನ್ 16, 2023
ವಿದ್ಯಾರ್ಹತೆ:
ಸೈಕಿಯಾಟ್ರಿಕ್ ನರ್ಸ್- ಬಿಎಸ್ಸಿ ನರ್ಸಿಂಗ್, ಸೈಕಿಯಾಟ್ರಿಕ್ ನರ್ಸಿಂಗ್ನಲ್ಲಿ ಪಿಜಿ ಡಿಪ್ಲೊಮಾ
ಸೈಕಿಯಾಟ್ರಿಸ್ಟ್ – ಎಂ.ಡಿ, ಸೈಕಿಯಾಟ್ರಿಯಲ್ಲಿ ಡಿಎನ್ಬಿ, ಡಿಪಿಎಂ
ಕಾರ್ಯಾನುಭವ:
• ಸೈಕಿಯಾಟ್ರಿಕ್ ನರ್ಸ್ ಹುದ್ದೆಗೆ ಅಭ್ಯರ್ಥಿಗಳು ಸೈಕಿಯಾಟ್ರಿ/ ಮೆಂಟಲ್ ಹೆಲ್ತ್ ಸಂಸ್ಥೆ/ ಸೈಕಿಯಾಟ್ರಿ ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು.
• ಸೈಕಿಯಾಟ್ರಿಸ್ಟ್ ಹುದ್ಧೆಗೆ ಅಭ್ಯರ್ಥಿಗಳು ಆಸ್ಪತ್ರೆಗಳಲ್ಲಿ ಸೈಕಿಯಾಟ್ರಿಸ್ಟ್ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿಬೇಕು.
ಮಾಸಿಕ ವೇತನ:
ಸೈಕಿಯಾಟ್ರಿಸ್ಟ್ – ಮಾಸಿಕ ₹ 1,10,000
ಸೈಕಿಯಾಟ್ರಿಕ್ ನರ್ಸ್- ಮಾಸಿಕ ₹ 14,000
ವಯೋಮಿತಿ: ಸೈಕಿಯಾಟ್ರಿಸ್ಟ್ – ಗರಿಷ್ಟ 65 ವರ್ಷ.
ಉದ್ಯೋಗದ ಸ್ಥಳ : ಬೆಳಗಾವಿ
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ
ಲಸಿಕಾ ಸಂಸ್ಥೆ ಟಿಳಕವಾಡಿ
ಬೆಳಗಾವಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0831-2951131
