Uttar pradesh: ಬಿಸಿಲ ದಗೆ, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಹಲವಾರು ಜನ ದಣಿವಾರಿಸಿಕೊಳ್ಳಲು ತಂಪು ಪಾನೀಯಗಳನ್ನು ಕುಡಿಯಲು ಬಯಸುತ್ತಾರೆ. ಅದರಲ್ಲೂ ನೈಸರ್ಗಿಕವಾಗಿ ಲಭ್ಯವಿರುವ ಎಳನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಎಳನೀರನ್ನು ಕುಡಿಯುವಂತೆ ವೈದ್ಯರು ಕೂಡ ಹೆಚ್ಚಾಗಿ ಸಲಹೆ ನೀಡುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು (Uttar pradesh) ರಸ್ತೆ ಬದಿ ಮಾರಾಟವಾಗುವ ಎಳನೀರು(Coconut) ಕುಡಿಯುವ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡಿದೆ.
ಹೌದು, ನೈಸರ್ಗಿಕವಾಗಿ(Natural)ಸಿಗುವ ತಂಪುಪಾನಿಯ ಎಂದು ನಾಲಿಗೆ ಚಪ್ಪರಿಸಿ ಕುಡಿಯುವ ನಾವು ಇನ್ಮುಂದೆ ಸ್ವಲ್ಪ ಯೋಚನೆ ಮಾಡುವಂತೆ ಮಾಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ(Social media) ವೈರಲ್ ಆಗಿದೆ. ಉತ್ತರ ಪ್ರದೇಶದ ನೊಯ್ಡಾದಲ್ಲಿ ಎಳೆನೀರು ವ್ಯಾಪಾರಿಯೊಬ್ಬ ಎಳನೀರುಗಳನ್ನು ತಾಜವಾಗಿಡಲು, ಚರಂಡಿಯ ನೀರು ಚುಮುಕಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಪ್ಯಾಪಾರಿ ವಿರುದ್ಧವಾಗಿ ಆಕ್ರೋಶ ಹೊರಹಾಕಿದ್ದಾರೆ.
ವೈರಲ್ ಆಗಿರುವ 25 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಬಿಸ್ರಾಖ್(Bisrak) ಪೊಲೀಸ್ ಠಾಣೆ ವ್ಯಾಪ್ತಿಯ ರಾಧಾ ಸ್ಕೈ ಗಾರ್ಡನ್ ಸೊಸೈಟಿಯ ಹೊರಗೆ, ಸಮೀರ್(Sameer) ಎಂಬ ವ್ಯಾಪಾರಿ ಎಳನೀರನ್ನು ಮಾರಾಟ ಮಾಡುತ್ತಿದ್ದನು. ತಾನು ಮಾರುವ ಎಳನೀರನ್ನು ತಾಜಾವಾಗಿಡಲು ಚರಂಡಿ ನೀರನ್ನು ಎರಚುವುದು ಕಂಡು ಬಂದಿದೆ. ತನ್ನ ಎಳನೀರು ಬಂಡಿಯ ಪಕ್ಕದಲ್ಲೇ ಇದ್ದ ಚರಂಡಿ ನೀರನ್ನು ತುಂಬಿಕೊಂಡು ಬಂದು ಎಳನೀರಿಗೆ ಚುಮುಕಿಸುತ್ತಾನೆ.
ಅಂದಹಾಗೆ ವಿಡಿಯೋ ನೋಡಿ ಜಾಗೃತಗೊಂಡ ಪೋಲೀಸರು, ಎಳನೀರು ವ್ಯಾಪಾರಿ ಸಮೀರ್(28) ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಮೀರ್, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವನು ಎಂದು ಅಧಿಕಾರಿಯೊಬ್ಬರು ಹೇಳಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಅಂದಹಾಗೆ ಪ್ರತಿದಿನ ಎಳನೀರು ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೆ ದೇಹದ ತೂಕ ಕಡಿಮೆ ಮಾಡುತ್ತದೆ. ಹೀಗೆ ಎಳನೀರು ಕುಡಿಯುವುದರಲ್ಲಿ ಹಲವಾರು ಪ್ರಯೋಜನಗಳು ಇವೆ. ಕೆಲ ಪ್ರಯೋಜನಗಳ ನಡುವೆ ಎಳನೀರಿನ ಈ ರೀತಿಯ ಬಳಕೆ ಅಪಾಯವನ್ನು ತಂದೊಡ್ಡಬಹುದು.
ग्रेटर नोएडा वेस्ट का एक वीडियो वायरल है जिसमे समीर नाम का युवक नाले का पानी नारियल पानी पर डालता हुआ दिखाई दे रहा है। वीडियो का संज्ञान लेते हुए बिसराख थाना पुलिस ने आरोपी को गिरफ्तार कर लिया है @noidapolice#VideoViral pic.twitter.com/t22OhBM3WT
— Amit Choudhary (@amitchoudhar_y) June 6, 2023
ಇದನ್ನು ಓದಿ: Belthangady: ಬೆಳ್ತಂಗಡಿ : ಬೆಳಾಲಿನ ವೃದ್ದೆಯ ಕೊಂದ ಆರೋಪಿ ಅನಾರೋಗ್ಯದಿಂದ ಸಾವು
