Milk Price Hike: ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರವೇರಿದ ಬೆನ್ನಲ್ಲೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿತಟ್ಟಿದ್ದು, ಇದೀಗ ವಿದ್ಯುತ್ ದರ ಹೆಚ್ಚಳವಾಗುತ್ತಿದ್ದಂತೆ ಹಾಲಿನ ದರವೂ ಏರಿಕೆಯಾಗುವ ಸಾಧ್ಯತೆಯಿದೆ.
ರೈತರ ಏಳಿಗೆಗಾಗಿ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲು ಮುಂದಾಗಿದ್ದ ಹಾಲು ಒಕ್ಕೂಟಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದ ಮೇರೆಗೆ ಹಾಲು ಒಕ್ಕೂಟ ತನ್ನ ನಿರ್ಧಾರ ಬದಲಾಯಿಸಿ ಹಾಲಿನ ಪ್ರೋತ್ಸಾಹ ಧನ ಮುಂದುವರೆಸಲು ಮುಂದಾಗಿದೆ.
ಈ ಬೆನ್ನಲ್ಲೇ ಹಾಲಿನ ದರ ಪರಿಷ್ಕರಿಸುವಂತೆ ಬಮೂಲ್ ಪಟ್ಟು ಹಿಡಿದಿದ್ದು, ಲೀಟರ್ ಹಾಲಿನ ಮಾರಾಟದ ದರದ ಮೇಲೆ 5 ರೂ. ಏರಿಕೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದೆ ಎಂದು ತಿಳಿಯಲಾಗಿದೆ. ಅಲ್ಲದೇ ನಂದಿನ ಹಾಲಿನ ದರವನ್ನು ಮತ್ತೆ ಹೆಚ್ಚಳ( Milk Price Hike) ಮಾಡುವಂತೆ ಹಾಲು ಒಕ್ಕೂಟಕ್ಕೆ ಒತ್ತಾಯಿಸುತ್ತಿದ್ದು, 5 ರೂಪಾಯಿ ಏರಿಕೆ ಮಾಡಲು ಪಟ್ಟು ಹಿಡಿಯಲಾಗಿದೆ.
ರಾಜ್ಯದಲ್ಲಿ ಪ್ರತಿನಿತ್ಯ ಹಾಲು ಮಾರಾಟದಲ್ಲಿ ನಷ್ಟದ ಹಾದಿಯನ್ನು ಹಿಡಿಯುತ್ತಿದೆ. ಪ್ರತಿ ಲೀಟರ್ ಹಾಲಿಗೆ ಮಾರಾಟ ದರದ ಮೇಲೆ 5 ರೂ. ಹೆಚ್ಚಳ ಮಾಡಲು ಅವಕಾಶ ಕೊಡಬೇಕು ಮನವಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನ ಸಮಾನ್ಯರಿಗೆ ಹಾಲಿ ದರ ಏರಿಕೆಯ ಬಿಸಿ ತಟ್ಟುತ್ತ ಅನ್ನೋದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಮದುವೆ ಬಸ್ ಪಲ್ಟಿ ; ಅದೃಷ್ಟವಶಾತ್ ಪ್ರಯಾಣಿಕರು ಪಾರು
