Home » New Born Baby: ಏನ್ ಸ್ಪೀಡ್ ಗುರೂ ? ಮೂರೇ ದಿನದಲ್ಲಿ ಮಾತು, ಮೂರೇ ತಿಂಗಳಲ್ಲಿ ಎದ್ದು ನಿಂತ ಮಗು !

New Born Baby: ಏನ್ ಸ್ಪೀಡ್ ಗುರೂ ? ಮೂರೇ ದಿನದಲ್ಲಿ ಮಾತು, ಮೂರೇ ತಿಂಗಳಲ್ಲಿ ಎದ್ದು ನಿಂತ ಮಗು !

0 comments
New Born Baby

 

New Born Baby: ಮಗು ಜನನವಾದ ನಂತರ ಹಂತ ಹಂತವಾಗಿ ಬೆಳವಣಿಗೆ ಆಗುತ್ತದೆ. ಹಲವು ಸಮಯದ ನಂತರ ಇತರರ ಮಾತು ಕೇಳಿಸಿಕೊಂಡು ಮಾತನಾಡಲು ಪ್ರಾರಂಭಿಸುತ್ತದೆ. ಆದರೆ, ಇಲ್ಲೊಂದು ಮಗು ಹುಟ್ಟಿದ (New Born Baby) ಮೂರೇ ದಿನಕ್ಕೆ ಮಾತನಾಡಿದೆ. ಆಶ್ಚರ್ಯವಾದರೂ ಇದು ಸತ್ಯ.‌

ಹೌದು, ಇದು ಅಮೇರಿಕಾದಲ್ಲಿ (America) ಬೆಳಕಿಗೆ ಬಂದ ಘಟನೆಯಾಗಿದ್ದು, ಸಮಂತಾ ಮಿಚೆಲ್ ತಮ್ಮ ಮಗುವಿನ ಬಗ್ಗೆ ಹೇಳಿಕೊಂಡಿದ್ದಾರೆ. ನವಜಾತ ಶಿಶು ಹುಟ್ಟಿದ ಮೂರೇ ದಿನಕ್ಕೆ ಕವುಚಿ ಬಿದ್ದು ತೆವಳಲು ಶುರು ಮಾಡಿದೆ ಎಂದು ಮಿಚೆಲ್ ಹೇಳುತ್ತಾರೆ.

ಮಗುವಿನ ಹೆಸರು ನೈಲಾ ಡೈಸ್ ಎಂದಾಗಿದ್ದು, ಫೆಬ್ರವರಿ 27, 2023 ರಂದು ಮಗು ಜನಿಸಿತು. ಈ ವೇಳೆ ಮಗುವಿನ ತೂಕ 7 ಪೌಂಡ್ 6 ಔನ್ಸ್ ಇತ್ತು ಎಂದು ಮಿಚೆಲ್ ಹೇಳುತ್ತಾರೆ. ಶಿಶು ಹುಟ್ಟಿದ ಮೂರೇ ದಿನಕ್ಕೆ ಕವುಚಿ ಬಿದ್ದು ತೆವಳುವುದನ್ನು, ತಲೆ ಎತ್ತಿ ನೋಡುವುದನ್ನು ಮಿಚೆಲ್ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದಾರೆ.

ಸದ್ಯ ಪೋಷಕರು ಮಗುವಿನ ಮುದ್ದಾದ ಮಾತಿಗೆ ಆಶ್ಚರ್ಯ ಚಕಿತರಾಗಿದ್ದಾರೆ. ಕೇವಲ ಮೂರು ದಿನಕ್ಕೆ ಮಗು ಎಲ್ಲರನ್ನು ತಲೆ ಎತ್ತಿ ನೋಡುತ್ತದೆ ಎಂದರೆ ಆಶ್ಚರ್ಯವೇ ಸರಿ. ಅಷ್ಟೇ ಅಲ್ಲ, ಮಗುವಿನ ಇತರ ಎಲ್ಲಾ ಕೆಲಸ ಕಾರ್ಯಗಳೂ ಫಾಸ್ಟ್ ಫಾಸ್ಟ್ ಆಗಿ ನಡೆಯುತ್ತಿದೆ. ತೆವಳುವುದು, ಎದ್ದು ಕೂರುವುದು ಎಲ್ಲದರಲ್ಲೂ ಈ ಮಗು ಸಕತ್ ಫಾಸ್ಟ್. ಮೂರೇ ತಿಂಗಳಲ್ಲಿ ಮಗು ಎದ್ದು ನಿಲ್ಲಲು ಆರಂಭಿಸಿದೆ.

ಜಗತ್ತಿನಲ್ಲಿ ಹಲವು ವಿಸ್ಮಯಗಳು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಇದೂ ಒಂದು ಎಂದರೆ ತಪ್ಪಾಗಲಾರದು. ವೇಗವಾಗಿ ಓಡುತ್ತಿರುವ ಈ ಜೀವನದಲ್ಲಿ ಯಶಸ್ವಿಯಾಗಿ ಸ್ಪರ್ಧಿಸಲು ಮಗು ಇ0ದಿನಿಂದಲೇ ತಯಾರಿ ನಡೆಸುತ್ತಿದೆ ಎಂದು ಓದುಗರು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನು ಓದಿ: Free bus: SSLC ವಿದ್ಯಾರ್ಥಿಗಳಿಗೆ ಸಖತ್ ಖುಷಿಯ ಸುದ್ದಿ: ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ! 

You may also like

Leave a Comment