Home » Women Menstrual Health: ಮುಟ್ಟು ನಿಂತ ತಕ್ಷಣ ಮಹಿಳೆಯರು ಈ ಕೆಲ್ಸ ಮಾಡಿ: ಇಲ್ಲದಿದ್ರೆ ಬರ್ಬೋದು ಅದೊಂದು ಕ್ಯಾನ್ಸರ್!

Women Menstrual Health: ಮುಟ್ಟು ನಿಂತ ತಕ್ಷಣ ಮಹಿಳೆಯರು ಈ ಕೆಲ್ಸ ಮಾಡಿ: ಇಲ್ಲದಿದ್ರೆ ಬರ್ಬೋದು ಅದೊಂದು ಕ್ಯಾನ್ಸರ್!

by Mallika
0 comments
Women Menstrual Health

Women Menstrual Health: ಮುಟ್ಟು ಮಹಿಳೆಯರಲ್ಲಾಗುವ ಸಹಜ ಪ್ರಕ್ರಿಯೆ (Women Menstrual Health) . ಸಾಮಾನ್ಯವಾಗಿ ಮಹಿಳೆಯರಿಗೆ 50 ವರ್ಷವಾಗುವಾಗ ಮುಟ್ಟು ನಿಂತು ಹೋಗುತ್ತದೆ. ಮುಟ್ಟು ನಿಂತಾಗ ದೇಹದಲ್ಲಿ ಹಾರ್ಮೋನಿನ ಏರಿಳಿತಗಳು ಉಂಟಾಗುತ್ತವೆ. ಈ ವೇಳೆ ದೇಹದ ಬಗ್ಗೆ ಕಾಳಜಿ ಅವಶ್ಯಕ. ಆದರೆ, ಮಹಿಳೆಯರೇ ಇಲ್ಲಿ ಕೇಳಿ ಮುಟ್ಟು ನಿಂತ ಮೇಲೆ ನೀವು ಈ ಕೆಲಸ ಮಾಡಬೇಕು. ಇಲ್ಲವಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

 

ಮುಟ್ಟು ನಿಂತ ನಂತರ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಗಮನ ಕೊಡಿ. ಹಾಗೂ ಸಮಸ್ಯೆ ಉಂಟಾದರೆ ವೈದ್ಯರ ಸಲಹೆ ಪಡೆಯಿರಿ. ಅಲ್ಲದೆ, ಋತುಬಂಧದ ನಂತರ ಮಹಿಳೆಯರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಫೈಬರ್, ಕ್ಯಾಲ್ಸಿಯಂ ಹೆಚ್ಚಿರುವ ಪದಾರ್ಥಗಳನ್ನು ತಿನ್ನಬೇಕು.

 

ಮಹಿಳೆಯರಿಗೆ ಋತುಬಂಧದ ಬಳಿಕ ಅಂಡಾಶಯದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಈ ಕ್ಯಾನ್ಸರ್ ಅಂಡಾಶಯದಲ್ಲಿ ಪ್ರಾರಂಭವಾಗಿ ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ.

ಅಂಡಾಶಯದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಬರಬಹುದು. ಈ ರೋಗವು 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿದೆ.

 

ಮಹಿಳೆಯರಿಗೆ 50ರ ಆಸುಪಾಸಿನಲ್ಲಿ ಗಂಟುನೋವು, ಬೆನ್ನುನೋವು ಇಂತಹ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸೊಪ್ಪು, ತರಕಾರಿಗಳು, ಹಣ್ಣುಗಳನ್ನು ತಿನ್ನಬೇಕು. ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸಬೇಕು. ಹಾಲು, ಮೊಸರು, ಮೊಟ್ಟೆ ಮತ್ತು ಮೀನುಗಳನ್ನು ಸೇವಿಸಿ. ಮುಟ್ಟು ನಿಂತ ನಂತರ ಸಮಸ್ಯೆಗಳನ್ನು ದೂರ ಮಾಡಲು ಕಡಿಮೆ ಉಪ್ಪು ಮತ್ತು ಸೋಡಿಯಂ ಸೇವನೆ ಮಾಡಿ.

 

ಆರೋಗ್ಯ ಚೆನ್ನಾಗಿರಲು ವ್ಯಾಯಾಮ ಕೂಡ ತುಂಬಾ ಮುಖ್ಯ.

ಮಹಿಳೆಯರು ಋತುಬಂಧದ ನಂತರ ವ್ಯಾಯಾಮ ಮಾಡಬೇಕು.

ಇದರಿಂದ ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ. ಧ್ಯಾನ ಮತ್ತು ಯೋಗ ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡಿ, ಮೆದುಳಿನ ಶಕ್ತಿ ಹೆಚ್ಚಿಸುತ್ತದೆ.

ಇದನ್ನೂ ಓದಿ :ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಗೊತ್ತೇ?ಇಲ್ಲಿದೆ ಲೇಟೆಸ್ಟ್ ಸಂಪೂರ್ಣ ಪಟ್ಟಿ

You may also like

Leave a Comment