Home » Sanju Basayya wedding: ಈ ಚೆಂದುಳ್ಳಿ ಚೆಲುವೆಯನ್ನು ಮದುವೆಯಾದ ‘ ಕುಳ್ ಮಿಂಡ್ರೀ ‘ಖ್ಯಾತಿಯ ಕಾಮಿಡಿ ಕಿಲಾಡಿ ಸಂಜು ಬಸಯ್ಯ !

Sanju Basayya wedding: ಈ ಚೆಂದುಳ್ಳಿ ಚೆಲುವೆಯನ್ನು ಮದುವೆಯಾದ ‘ ಕುಳ್ ಮಿಂಡ್ರೀ ‘ಖ್ಯಾತಿಯ ಕಾಮಿಡಿ ಕಿಲಾಡಿ ಸಂಜು ಬಸಯ್ಯ !

by ಹೊಸಕನ್ನಡ
0 comments
Sanju Basayya wedding

Sanju Basayya wedding: ಜೀ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡ ನಾಡಿನ ಮನೆಮಾತಾದ ಕಾಮಿಡಿ ನಟ ಸಂಜು ಬಸಯ್ಯ, ತಮ್ಮ ಹಾಸ್ಯದಿಂದಲೇ ಎಲ್ಲರ ಮನಸೆಳೆದವರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಹಲವು ಅವಕಾಶ ಗಿಟ್ಟಿಸಿಕೊಂಡು ಸಿನಿಮಾ, ನಾಟಕ ಹೀಗೆ ಅವರ ಸಿನಿ ಜರ್ನಿ ಮುಂದುವರಿಯುತ್ತಿದೆ. ಈ ಮಧ್ಯೆ ಇದೀಗ ಸದ್ದಿಲ್ಲದೆ, ತಮ್ಮ ಬಹುಕಾಲದ ಪ್ರೇಯಸಿಯನ್ನು ಮದುವೆಯಾಗಿದ್ದಾರೆ. ಆತನ ಪ್ರೇಯಸಿಯನ್ನು ನೋಡಿ ‘ ಭಲೇ ಕಿಲಾಡಿಯಪ್ಪಾ ಇವ್ನು’ ಎಂದು ಹೇಳೆ ಹೇಳ್ತೀರಾ. ಕಾರಣ, ಹಾಗಿದ್ದಾರೆ ಪಲ್ಲವಿ. ಬಳ್ಳಾರಿ.!!

ಎಲ್ಲರಿಗಿಂತ ಅತ್ಯಂತ ಕುಳ್ಳರಾಗಿರುವ ಈ ನಟ ಕಾಮಿಡಿ ಕಿಲಾಡಿಗಳು ಟಿವಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯರಾದವರು. ಆತನ ಒಳ್ಳೆಯ ಮಾತು ಅಂಗೀಕ ಭಾವ, ನಗು, ಸುಂದರ ಮುಖ ಇದೆಲ್ಲಾ ಜನರಿಗೆ ಇಷ್ಟವಾಗಿತ್ತು. ಆಟೋ ರಾತ್ರಿ ಆತ ಜನಪ್ರಿಯವಾದರು. ಕಾಮಿಡಿ ಕಿಲಾಡಿಗಳು ತೀರ್ಪುಗಾರರಾದ ನಟ ಜಗ್ಗೇಶ್ ಅವರ ಕೈಲಿ ‘ ಕುಳ್ ಮಿಂಡ್ರೀ’ ಎಂದು ಪ್ರೀತಿಯಿಂದ ಕರೆಸಿಕೊಂಡ ಸಂಜು ಬಸಯ್ಯ ಇವತ್ತಿಗೆ ಸ್ಟಾರ್. ಮೆಣಸಿನಕಾಯಿ ಬಸ್ಯಾ, ಸಂಜು ಬಸಯ್ಯ ಹೀಗೆ ಹಲವು ಹೆಸರುಗಳಿಂದಲೇ ಈತ ಫೇಮಸ್.

ಸಂಜು ಬಸಯ್ಯ ಅವರು ಮದುವೆ(Sanju Basayya wedding) ಆಗಿದ್ದು ನಟಿ ಪಲ್ಲವಿ ಬಳ್ಳಾರಿ ಎಂಬುವರನ್ನು. ನಾಟಕ ಕಲಾವಿದೆ ಪಲ್ಲವಿ, ಮಲ್ಲು ಜಮಖಂಡಿ, ಶಿವಪುತ್ರ ಯಶಾರದಾ ಸೇರಿ ಹಲವು ಯೂ ಟ್ಯೂಬರ್‌ಗಳ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಸಂಜು ಬಸಯ್ಯ ಕುಳ್ಳ ವ್ಯಕ್ತಿ. ಆದ್ರೆ ಪಲ್ಲವಿ ಬಳ್ಳಾರಿ ಎಲ್ಲರಂತೆ ಸಹಜ ಎತ್ತರ ಹೊಂದಿದ್ದಾಳೆ. ಸಂಜುಗಿಂತ ಪಲ್ಲವಿ 1.5 ಅಡಿ ಉದ್ದಕ್ಕಿದ್ದಾಳೆ. ಅವತ್ತು ಜೀ ಕನ್ನಡ ಕಾಮಿಡಿ ಕಿಲಾಡಿ ಪ್ರೋಗ್ರಾಮ್ ಒಂದರಲ್ಲಿ ಈ ಜೋಡಿಯ ಪರಿಚಯ ಆಗಿತ್ತು. ನವರಸ ನಾಯಕ ಜಗ್ಗೇಶ್ ಅವರು ಅಂದು ತಮ್ಮ ಇಂದಿನ ಕಾಮಿಡಿ ಶೈಲಿಯಲ್ಲಿ ಮಾತನಾಡಿ ಬಲೆ ಕಿಲಾಡಿಯಪ್ಪ ನೀನು, ‘ ಕುಳ್ ಮಿಂಡ್ರೀ’ ಅಂದಿದ್ರು. ಹೌದು ಎಲ್ಲರಂತೆ ಸಹಜವಾಗಿರುವ ಮತ್ತು ಅತ್ಯಂತ ರೂಪಸಿ ಹಾಕಿರುವ ಹುಡುಗಿಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾನೆ ಸಂಜು ಬಸಯ್ಯ !! ಈತನಿಗೆ ಆತನ ಆಪ್ತ ವಲಯ ಮತ್ತು ಅಭಿಮಾನಿಗಳು ಇದೀಗ ಗುಡ್ ಲಕ್ ಹೇಳುತ್ತಿದ್ದಾರೆ.

ಅವರಿಬ್ಬರೂ ಏಳೆಂಟು ವರ್ಷಗಳ ಹಿಂದೆಯೇ ಅವರ ಪರಿಚಯ. ಜೊತೆಗೆ ನಾಟಕ ಮಾಡುತ್ತಾ ಸ್ಕಿಟ್ ನಲ್ಲಿ ಭಾಗವಹಿಸುತ್ತಾ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಸದ್ಯ ರಿಜಿಸ್ಟರ್‌ ಮದುವೆ ಆಗಿರುವ ಈ ಜೋಡಿ ಮುಂದಿನ ದಿನಗಳಲ್ಲಿ ಸಪ್ತಪದಿ ತುಳಿಯಲಿದೆ.

ಈ ವಿಚಾರವನ್ನು ಇತ್ತೀಚೆಗಷ್ಟೇ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿಯೂ ಪೋಸ್ಟ್‌ ಮಾಡಿ ಎಲ್ಲರಿಂದಲೂ ಆಶೀರ್ವಾದ ಪಡೆದುಕೊಂಡಿದ್ದಾರೆ.
ಅವರ ಪೋಸ್ಟ್ ಹೀಗಿದೆ: ” ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಅನಂತ ಕೋಟಿ ನಮಸ್ಕಾರ. ಇಂದು ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೇವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿ, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ” ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ ನಮ್ಮ ಪ್ರೀತಿಯ ಸಂಜು ಬಸಯ್ಯ. ಸಂಜು ವೆಡ್ಸ್ ಪಲ್ಲವಿ ಲವ್ ಸ್ಟೋರಿ ಸಕ್ಸಸ್ ಆಗಲಿ ಅನ್ನೋದು ಕನ್ನಡದ ಸಿನಿ ಪ್ರೇಕ್ಷಕರ ಹಾರೈಕೆ.

ಇದನ್ನೂ ಓದಿ: ಖರ್ಚಿಗೆ ಹಣ ಬೇಕೆಂದು ಮನೆಮೂಲೆಯಲ್ಲಿದ್ದ ಪೇಪರ್‌ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆಯೇ FIR!!!

You may also like

Leave a Comment