Home » Shakti scheme: ನಾಳೆ ರಾಜ್ಯಾದ್ಯಂತ “ಶಕ್ತಿ ಯೋಜನೆ”ಗೆ ಚಾಲನೆ : ಮಹಿಳೆಯರ ಉಚಿತ ಬಸ್​ ರೂಲ್ಸ್‌ ಹೀಗಿದೆ

Shakti scheme: ನಾಳೆ ರಾಜ್ಯಾದ್ಯಂತ “ಶಕ್ತಿ ಯೋಜನೆ”ಗೆ ಚಾಲನೆ : ಮಹಿಳೆಯರ ಉಚಿತ ಬಸ್​ ರೂಲ್ಸ್‌ ಹೀಗಿದೆ

0 comments
Shakti scheme

Shakti scheme: ಬಹು ನಿರೀಕ್ಷೆಯ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳ ಯೋಜನೆಗಳ ಪೈಕಿ ನಾಳೆ ರಾಜ್ಯಾದ್ಯಂತ “ಶಕ್ತಿ ಯೋಜನೆ”ಗೆ ಸಿಎಂ ಸಿದ್ದರಾಮಯ್ಯ ವಿಧಾನ ಸೌಧದ ಎದುರು ಚಾಲನೆ ನೀಡಿದ್ದಾರೆ.

ಮಹಿಳೆಯರ ಉಚಿತ ಬಸ್ ಯೋಜನೆ(Shakti scheme)ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉಪಸ್ಥಿತಿ ಇರಲಿದ್ದಾರೆ. ಕರ್ನಾಟಕದ ಎಲ್ಲಾ ಮಹಿಳಾ ಮಣಿಗಳು ನಾಳೆ ಮಧ್ಯಾಹ್ನದಿಂದ ಉಚಿತವಾಗಿ ಬಸ್​​ನಲ್ಲಿ ಪ್ರಯಾಣ ಮಾಡಬಹುದಾಗಿದೆ.

ಉಚಿತ ಸಾರಿಗೆ ಬಸ್​ ಚಾಲನೆ ವೇಳೆ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC ಹಾಗೂ KKRTCಯ ನಾಲ್ಕು ನಾರ್ಮಲ್ ಬಸ್ಸುಗಳನ್ನು ನಿಲ್ಲಿಸಿ ಉಚಿತವಾಗಿ ಮಹಿಳೆಯರು ಪ್ರಯಾಣಿಸಲಿ ಎಂದು ಸಾರಿಗೆ ಇಲಾಖೆ ಸೂಚನೆ ನೀಡಲಿದೆ. ಅಲ್ಲದೇ ಕೆಲ ಮಹಿಳೆಯರಿಗೆ ನಾಳೆ ಸಾಂಕೇತಿಕವಾಗಿ ‘O’ ದರದ ಪಿಂಕ್ ಟಿಕೆಟ್ ಸ್ಮಾರ್ಟ್ ಕಾರ್ಡ್​ ನೀಡಲಿದ್ದಾರೆ. ಇನ್ನೂ ಈ ಉಚಿತ ಸಾರಿಗೆ ಬಸ್‌ಗಳಲ್ಲಿ ಹೊರ ರಾಜ್ಯಗಳಿಗೆ ಸಂಚಾರ ಮಾಡುವ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.

ಸ್ಮಾರ್ಟ್ ಕಾರ್ಡ್ ಮಾಡೋದು ಹೇಗೆ?

*ಬೆಂಗಳೂರು ಒನ್, ಸೈಬರ್ ಸೆಂಟರ್​​​ಗೆ ಭೇಟಿ ನೀಡಿ

*ಸೇವಾ ಸಿಂಧೂ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ

*ಆಧಾರ್ ಕಾರ್ಡ್ ಅಥವಾ ಅಡ್ರೆಸ್ ಫ್ರೂಪ್ ನೀಡಿದ್ರೆ ಸ್ಮಾರ್ಟ್ ಕಾರ್ಡ್ ಮಾಡಿಕೊಡಲಾಗುವುದು

*ಸ್ಮಾರ್ಟ್ ಕಾರ್ಡಿಗೆ ಆಗುವ ಖರ್ಚನ್ನು ಸರ್ಕಾರವೇ ಭರಿಸಲಿದೆ

ಸ್ಮಾರ್ಟ್ ಕಾರ್ಡ್ ಪಡೆಯಲು 3 ತಿಂಗಳು ಸಮಯಾವಕಾಶ :

“ಶಕ್ತಿ ಯೋಜನೆ”ಯಡಿ ಮಹಿಳೆಯರು ಉಚಿತ ಬಸ್‌ ಪ್ರಯಾಣ ಮಾಡಬೇಕಾದ್ರೆ ಸ್ಮಾರ್ಟ್ ಕಾರ್ಡ್ ಪಡೆಯಲು ಅತ್ಯಗತ್ಯ. ಇದಕ್ಕಾಗಿ ನಾಳೆಯಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ. ಸ್ಮಾರ್ಟ್ ಕಾರ್ಡ್ ಪಡೆಯಲು 3 ತಿಂಗಳು ಸಮಯಾವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ‌ಲೈಸನ್ಸ್, ಕೇಂದ್ರ ಸರ್ಕಾರ ಅಥವಾ ‌ರಾಜ್ಯ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ. ಇವುಗಳಲ್ಲಿ ಯಾವುದಾದರೂ ಒಂದು ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ: ಗಂಡಿಲ್ಲದೆ ಗರ್ಭ ಧರಿಸಿದ ಹೆಣ್ಣು!

You may also like

Leave a Comment