Mosquito: ಮಳೆಗಾಲದಲ್ಲಿ ಮನೆಗಳಲ್ಲಿ ಮತ್ತು ಪರಿಸರದಲ್ಲಿ ನೀರು ತುಂಬುವುದರಿಂದ ಸೊಳ್ಳೆ (Mosquito) ಉತ್ಪತ್ತಿ ಆಗಿ ಅವುಗಳಿಂದ ಅನೇಕ ರೋಗಗಳು ಹರಡುತ್ತವೆ. ಈ ಸೊಳ್ಳೆಗಳಿಗೆ ಮುಕ್ತಿ ಬೇಕು ಎಂದರೆ ಇಲ್ಲಿದೆ ಪರಿಹಾರ.
ಮೊದಲು ಅಲ್ಲಲ್ಲಿ ಇರುವ ನೀರನ್ನು ಕ್ಲೀನ್ ಮಾಡಿ. ಮನೆಯ ಸುತ್ತಮುತ್ತ ನೀರು ನಿಂತರೆ ಅದು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಕೇವಲ ಸೊಳ್ಳೆಗಳು ಎಂದು ಇತರ ಕೀಟಗಳು ಚಿಟ್ಟೆಗಳು ಎಲ್ಲವೂ ಸಹ ಅದೇ ನಿಂತಿರುವ ನೀರಿನಿಂದ ಜನ್ಮ ತಳೆಯುತ್ತವೆ. ಕತ್ತಲಿನ ವಾತಾವರಣ ಮತ್ತು ತೇವಾಂಶ ಇರುವ ಜಾಗ ಎಂದರೆ ಇವುಗಳ ಸಂತತಿ ಹೆಚ್ಚಾಗಲು ಪ್ರಮುಖ ಕಾರಣವಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ಮನೆಯ ಅಕ್ಕ-ಪಕ್ಕ ನಿಮ್ಮ ಮನೆಯೊಳಗೆ ಬಾತ್ ರೂಮ್ , ಬಾಲ್ಕನಿ ಇತ್ಯಾದಿ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಿ.
ಮನೆಯಲ್ಲೂ ಸಹ ನೀರು ತುಂಬಿ ಮುಚ್ಚಳ ತೆಗೆದು ಯಾವುದರಲ್ಲೂ ಇಡಬೇಡಿ. ಏಕೆಂದರೆ ಇಲ್ಲಿಂದಲೂ ಸಹ ಇವುಗಳ ಸಂತತಿ ಹೆಚ್ಚಾಗಬಹುದು. ನಿಮ್ಮ ಅಡುಗೆ ಮನೆಯಲ್ಲೂ ಸಹ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಿ
ಇನ್ನು ನಿಮ್ಮ ಮನೆಯ ಮುಂದಿನ ಚರಂಡಿ, ಅಲ್ಲಿಗೆ ಕೊಟ್ಟಿರುವ ಪೈಪ್, ಕ್ಯಾಬಿನೆಟ್, ಸೀಲಿಂಗ್ ಇತ್ಯಾದಿಗಳನ್ನು ಸರಿಯಾಗಿ ಇಟ್ಟು ಕೊಳ್ಳುವುದು ನಿಮ್ಮ ಜವಾಬ್ದಾರಿ. ಇದರಿಂದ ಕೀಟಗಳು ಮತ್ತು ಜಿರಳೆಗಳು ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುವುದನ್ನು ತಪ್ಪಿಸಬಹುದು.
ನೈಸರ್ಗಿಕ ಪದ್ಧತಿಗಳನ್ನು ಅನುಸರಿಸಿ ಅಂದರೆ, ನಿಮ್ಮ ಮನೆಯ ಸೋಫಾ, ಕುರ್ಚಿ, ಡೈನಿಂಗ್ ಟೇಬಲ್ ಇತ್ಯಾದಿಗಳ ಕಡೆ ಸ್ಪ್ರೇ ಮಾಡಿ. ಸೊಳ್ಳೆಗಳು ನಿಮ್ಮ ಮನೆಗೆ ಬರುವುದು ತಪ್ಪುತ್ತದೆ.
ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಪರದೆಯನ್ನು ಬಳಸುವುದು ಅವಶ್ಯಕ.
ಇದರ ಹೊರತು ಪ್ರತಿದಿನ ಸೂರ್ಯ ಮುಳುಗುತ್ತಿದ್ದಂತೆ ಬಾಗಿಲು ಹಾಕಿ. ಅಷ್ಟೇ ಅಲ್ಲದೆ ನಿಮ್ಮ ಸಿಂಕ್ ಹಾಗೂ ಡ್ರೈನ್ ಗಳಿಗೆ ಸ್ಟೈನರ್ ಅಳವಡಿಸಿ. ಇದರಿಂದ ವರ್ಷ ಪೂರ್ತಿ ನೀವು ನೆಮ್ಮದಿಯಾಗಿ ಕೀಟಗಳಿಂದ ನಿಮ್ಮ ಮನೆ ಮತ್ತು ಮನೆಯವರೆಲ್ಲರ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: Actress Geetha Bhat: ಗುಂಡಮ್ಮ ಈಗ ಹೇಗಿದ್ದಾಳೆ ಅಂತೀರಾ! ಮತ್ತೆ ತೂಕದಲ್ಲಿ ಬದಲಾವಣೆ!
