Bengaluru: ಜೊತೆಯಾಗಿ ಸ್ನಾನ (Bath) ಮಾಡಲು ಬಾತ್ರೂಮ್ (Bathroom) ಸೇರಿದ್ದ ಜೋಡಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ (Tarabanahalli, Bengaluru) ನಡೆದಿದೆ.
ಬೆಂಗಳೂರಿನ ತಬೇರನಹಳ್ಳಿಯಲ್ಲಿ ಜೂನ್ 10 ರಂದು ಈ ಘಟನೆ ನಡೆದಿದ್ದು, ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳಿಂದ ಮನೆಯಿಂದ ಯಾರೂ ಹೊರಗೆ ಬಾರದಿದ್ದಾಗ ಮನೆಯ ಮಾಲೀಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ಇಬ್ಬರ ಶವ ಸ್ನಾನದ ಕೋಣೆಯಲ್ಲಿ ಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್ ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕೊಂಕ್ ಸುಧಾರಾಣಿ ಮೃತ ದುರ್ದೈವಿಗಳು. ಚಂದ್ರಶೇಖರ್ ಮತ್ತು ಸುಧಾರಾಣಿ ಜೋಡಿ ಬೆಂಗಳೂರಿನ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ನಲ್ಲಿ ಉದ್ಯೋಗದಲ್ಲಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಮೊನ್ನೆ ಜೂನ್ 10 ರಂದು ರಾತ್ರಿ ಸುಮಾರು 9 ಗಂಟೆಗೆ ತರಬನಹಳ್ಳಿಯ ಚಂದ್ರಶೇಖರ್ ನಿವಾಸಕ್ಕೆ ಸುಧಾರಾಣಿಯನ್ನು ಚಂದ್ರಶೇಖರ್ ಕರೆಸಿಕೊಂಡಿದ್ದಾರೆ. ಈ ಯುವ ಜೋಡಿ ಈ ವೇಳೆ ಜೊತೆಯಾಗಿ ಸ್ನಾನ ಮಾಡಲು ನಿರ್ಧರಿಸಿ ಬಾತ್ ರೂಂ ಗೆ ಇಳಿದಿದ್ದಾರೆ. ಸ್ನಾನದ ರೂಮಿನ ಕಿಟಕಿ, ಬಾಗಿಲು ಮುಚ್ಚಿ ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಸ್ನಾನಕ್ಕೆ ಇಳಿದಿದ್ದಾರೆ.
ಈ ವೇಳೆ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆ ಆಗಿ ಅವರಿಬ್ಬರೂ ಸ್ನಾನ ಗೃಹದಲ್ಲಿಯೇ ಸ್ಥಾನ ಮಾಡುವ ಸ್ಥಿತಿಯಲ್ಲಿಯೇ ಮೃತರಾಗಿದ್ದಾರೆ.
ಗ್ಯಾಸ್ ಗೀಸರ್’ನ ಅನಿಲವು ಅಪೂರ್ಣವಾಗಿ ದಹನವಾದಾಗ ಕಾರ್ಬನ್ ಮೋನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವು ಸಿಗದಿದ್ದಾಗ ಕಾರ್ಬನ್ ಡೈ ಆಕ್ಸೈಡ್ ಆಗುವ ಬದಲು ಕಾರ್ಬನ್ ಮೋನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಕಾರ್ಬನ್ ಮಾನಾಕ್ಸೈಡ್ ಅತ್ಯಂತ ವಿಷಕಾರಿಯಾಗಿದ್ದು, ಬಣ್ಣ ಮತ್ತು ವಾಸನಾ ರಹಿತ ಅನಿಲವಾಗಿದೆ. ಆದುದರಿಂದ ತಕ್ಷಣದಲ್ಲಿ ಅನಿಲ ಸೋರಿಕೆಯನ್ನು ಪತ್ತೆ ಮಾಡೋದು ಕಷ್ಟ. ಅವತ್ತು ಗ್ಯಾಸಿನಿಂದ ಅನಿಲ ಸೋರಿಕೆಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂಥದ್ದೇ ಘಟನೆ ಈ ಹಿಂದೆ ಕೂಡಾ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿನ ಆರ್ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಈಗ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: MYTH: ತನ್ನ ಕಣ್ಣೀರು ಕುಡಿದು ನವಿಲು ಗರ್ಭಿಣಿಯಾಗುತ್ತದೆಯೇ? ಇದರಲ್ಲಿ ಎಷ್ಟು ಸತ್ಯವಿದೆ?
