Home » Aviation fuel: ವಿಮಾನದಲ್ಲಿ ಇಂಧನವನ್ನು ಎಲ್ಲಿ ಇಡಲಾಗುತ್ತದೆ ? ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ !

Aviation fuel: ವಿಮಾನದಲ್ಲಿ ಇಂಧನವನ್ನು ಎಲ್ಲಿ ಇಡಲಾಗುತ್ತದೆ ? ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ !

0 comments
Aviation fuel

Aviation fuel: ವಿಮಾನದಲ್ಲಿ ಪ್ರಯಾಣ ಮಾಡುವುದು ಅನೇಕರ ಕನಸು. ಹಲವರು ಜನರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ ಅಂತಹ ಶಕ್ತಿಶಾಲಿ ವಿಮಾನವನ್ನು ಹಾರಿಸಲು ಎಷ್ಟು ಇಂಧನವನ್ನು ಬಳಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ವಿಮಾನದ ಎಂಜಿನ್ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ, ಬೋಯಿಂಗ್ 747 ಪ್ರತಿ ಸೆಕೆಂಡಿಗೆ ಸುಮಾರು 4 ಲೀಟರ್ ಇಂಧನವನ್ನು ಬಳಸುತ್ತದೆ. ಅದರಂತೆ ಒಂದು ನಿಮಿಷದಲ್ಲಿ ಸುಮಾರು 240 ಲೀಟರ್ ಪೆಟ್ರೋಲ್ ಖರ್ಚಾಗುತ್ತದೆ. ಆದರೆ ವಿಮಾನಗಳಲ್ಲಿ ಬಳಸುವ ಎಲ್ಲಾ ಪೆಟ್ರೋಲ್ ಎಲ್ಲಿ ಸಂಗ್ರಹವಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ವಿಮಾನದಲ್ಲಿ ಬಳಸುವ (Aviation fuel) ಇಂಧನವನ್ನು ಅದರ ಮುಖ್ಯ ಭಾಗದಲ್ಲಿ ಎಲ್ಲಿಯೂ ಸಂಗ್ರಹಿಸಲಾಗುವುದಿಲ್ಲ. ಅಂದರೆ ವಿಮಾನದ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಕೆಳಗೆ, ವಿಮಾನದ ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ವಿಮಾನದ ಇಂಧನವನ್ನು ಸ್ಟೋರ್ ಮಾಡೋದಿಲ್ಲ. ಬದಲಿಗೆ ವಿಮಾನದ ರೆಕ್ಕೆಗಳು ಇಂಧನ ಟ್ಯಾಂಕ್ ಇರಿಸಲು ಪ್ರಶಸ್ತ ಜಾಗಗಳು. ವಿಮಾನದ ರೆಕ್ಕೆಗಳಲ್ಲಿ ಇಂಧನವನ್ನು ಸಂಗ್ರಹಿಸಲಾಗುತ್ತದೆ. ಹೌದು, ಹಾರಾಟಕ್ಕೆ ಬಳಸುವ ಭಾರೀ ತೂಕದ ಇಂಧನವನ್ನು ಅದರ ಎರಡೂ ರೆಕ್ಕೆಗಳಲ್ಲಿ ಸಂಗ್ರಹಿಸಲಾಗುತ್ತದೆ.

ಇಂಧನವನ್ನು ರೆಕ್ಕೆಗಳಲ್ಲಿ ಏಕೆ ಸಂಗ್ರಹಿಸಲಾಗುತ್ತದೆ ಗೊತ್ತೇ?

ವಿಮಾನದ ರೆಕ್ಕೆಗಳಲ್ಲಿ ಇಂಧನವನ್ನು ಸಂಗ್ರಹಿಸಲು ಮುಖ್ಯ ಕಾರಣವೆಂದರೆ, ಇಂಧನದ ತೂಕದ ಸಮತೋಲನವನ್ನು ಕಾಪಾಡಿಕೊಳ್ಳುವುದು. ವಿಮಾನವನ್ನು ಮೇಲಕ್ಕೆ ಹಾರಿಸಲು, ಲಿಫ್ಟ್ ಬಲವನ್ನು ಸಮತೋಲನಗೊಳಿಸಬೇಕು. ಅಂದ್ರೆ ಒಟ್ಟಾರೆ ವಿಮಾನ ಬ್ಯಾಲೆನ್ಸ್ ಆಗಿ ಮೇಲಕ್ಕೆ ಹಾರಬೇಕು. ಒಂದು ಭಾಗ ತೂಕ ಹೆಚ್ಚಾಗಿ, ಇನ್ನೊಂದು ಭಾಗ ತೂಕ ಕಡಿಮೆಯಾದರೆ ಇಂಬ್ಯಾಳೆನ್ಸ್ ಆಗುತ್ತದೆ. ಅತ್ಯಂತ ವೇಗವಾಗಿ ಹಾರುವ ವಿಮಾನ ತೂಕ ಅಸ್ತಿರವಾದರೆ ಊಹಿಸಲಿಕ್ಕೂ ಆಗದ ಥರ ಓಲಾಡುತ್ತದೆ.

ಅದಕ್ಕಾಗಿಯೇ ವಿಮಾನದ ತೂಕಕ್ಕೆ ಸಮಾನವಾದ ಲಿಫ್ಟ್ ಫೋರ್ಸ್ ಅನ್ನು ಹೊಂದಿರುವುದು ಬಹಳ ಮುಖ್ಯ. ಹಾಗಾಗಿ ವಿಮಾನದ ರೆಕ್ಕೆಗಳಲ್ಲಿ ಇಂಧನ ಸಂಗ್ರಹವಾಗುತ್ತದೆ. ವಿಮಾನದ ಹಿಂಭಾಗದಲ್ಲಿ ಇಂಧನವನ್ನು ಸಂಗ್ರಹಿಸಲಾಗಿದೆ ಎಂದು ಭಾವಿಸೋಣ, ಹಿಂದಿನ ಭಾಗವು ಹೆಚ್ಚು ತೂಕವನ್ನು ಹೊಂದಿರುವುದರಿಂದ, ಹಾರಾಟದ ಸಮಯದಲ್ಲಿ ಮುಂಭಾಗದ ಭಾಗವು ಏರುತ್ತದೆ. ಇಲ್ಲಿ ಇನ್ನೊಂದು ಸಮಸ್ಯೆ ಏನೆಂದರೆ, ಹಾರಾಟದ ಸಮಯದಲ್ಲಿ ಇಂಧನ ಖಾಲಿಯಾಗುವುದರಿಂದ ಲ್ಯಾಂಡಿಂಗ್ ಸಮಯದಲ್ಲಿ ಮುಂಭಾಗದ ಭಾಗವು ಮುಂದಕ್ಕೆ ವಾಲುತ್ತದೆ. ಆಗ ಲ್ಯಾಂಡಿಂಗ್ ಸಮಸ್ಯೆ ಉದ್ಭವವಾಗುತ್ತದೆ. ಅದಕ್ಕಾಗಿ ವಿಮಾನದ ಎರಡೂ ರೆಕ್ಕೆಗಳಲ್ಲಿ ಇಂಧನ ಸಂಗ್ರಹವಾಗುತ್ತದೆ.

ವಿಮಾನದ ರೆಕ್ಕೆಗಳು ಹೆಚ್ಚು ಕಮ್ಮಿ ಟೊಳ್ಳಾಗಿದೆ. ವಿಮಾನದ ರೆಕ್ಕೆಗಳು ನೋಟದಲ್ಲಿ ದೊಡ್ಡದಾಗಿದ್ದರೂ, ಅವು ಒಳಗೆ ಟೊಳ್ಳಾಗಿರುತ್ತವೆ. ಜೆಟ್ ಇಂಧನವನ್ನು ಈ ರೆಕ್ಕೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಇಂಧನವನ್ನು ಬೇರೆಡೆ ಶೇಖರಿಸಿಟ್ಟರೆ ವಿಮಾನದ ತೂಕವೂ ಹೆಚ್ಚುತ್ತದೆಯಂತೆ.

ಎಂಜಿನ್ ರೆಕ್ಕೆಗಳಲ್ಲಿದೆ:
ಹೆಚ್ಚಿನ ವಿಮಾನಗಳಲ್ಲಿ, ಇಂಜಿನ್‌ಗಳು ರೆಕ್ಕೆಗಳಲ್ಲಿಯೂ ಇರುತ್ತವೆ. ಹೀಗಿರುವಾಗ ಇಂಜಿನ್ ನಲ್ಲಿ ಇಂಧನ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡುವ ಅಗತ್ಯವಿಲ್ಲ ಮತ್ತು ಅದು ಚಿಕ್ಕ ಪೈಪ್ ಮೂಲಕ ಇಂಜಿನ್ ತಲುಪುತ್ತದೆ. ಇದು ಹಣ ಮತ್ತು ತೂಕ ಎರಡನ್ನೂ ಉಳಿಸುತ್ತದೆ. ರೆಕ್ಕೆಗಳ ಅಡಿಯಲ್ಲಿ ಇಂಧನ ಶೇಖರಿಸಿಡುವ ಕಾರಣ ವಿಮಾನದ ತೂಕ ಈ ಮೂಲಕ ಸಮವಾಗಿ ಹಂಚಲ್ಪಟ್ಟು ವಿಮಾನ ಬ್ಯಾಲೆನ್ಸ್ ಆಗಿ ಪ್ರಯಾಣ ಸೇಫ್ ಆಗುತ್ತದೆ. ಹಾಗಾಗಿ ರೆಕ್ಕೆಯಡಿಯಲ್ಲಿ ಇಂಜಿನ್ ಮತ್ತು ಅದಕ್ಕೆ ಬೇಕಾಗುವ ಇಂಧನ ಟ್ಯಾಂಕ್ ಅನ್ನು ಅಳವಡಿಸಲಾಗುತ್ತದೆ.

 

ಇದನ್ನು ಓದಿ: ಜೂನ್ 1ರಿಂದಲೇ ʻಬೆಂ-ಮೈ ದಶಪಥ ರಸ್ತೆʼಯ ಟೋಲ್‌ ದರ ಏರಿಕೆ..!

You may also like

Leave a Comment