Gram one centers: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿ ಉಳಿದಿರುವ 52 ಹಾಗೂ ಉಡುಪಿ ಜಿಲ್ಲೆಯಲ್ಲಿ 25 ಗ್ರಾಮ ಒನ್ ಕೇಂದ್ರ (Gram one centers) ತೆರೆಯಲು ಗ್ರಾಮ ಪಂಚಾಯತ್‍ಗಳಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು: ಪ್ರಾಂಚೈಸಿ ಅರ್ಜಿದಾರರು ಡಿಪ್ಲೋಮಾ, ಐ,ಟಿ,ಐ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಥವಾ ತಾಂತ್ರಿಕ ವಿಭಾಗದಲ್ಲಿ ಪರಿಣಿತಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ. ಅರ್ಜಿದಾರರು ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರಬೇಕು ಅಥವಾ ಟೈಲ್ಸ್, ಗ್ರಾನೈಟ್ ಫ್ಲೋರಿಂಗ್, ಆರ್‌ಸಿಸಿ ಛಾವಣಿ ಇತ್ಯಾದಿ ಯಾವುದೇ ನೀರು ಸೋರಿಕೆಯಾಗದ ಕಟ್ಟಡಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲು ತಯಾರಾಗಿರಬೇಕು. ಆಧಾರ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೆ ಉತ್ತಮ, ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ, ಮಹಿಳೆಯರಿಗೆ ವಿಕಲಚೇತನರಿಗೆ ಹಾಗೂ ತೃತೀಯ ಲಿಂಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಅರ್ಜಿಯನ್ನು ವೆಬ್‍ಸೈಟ್ ವಿಳಾಸ: https://www.karnatakaone.gov.in/ ಮೂಲಕ ಇದೇ ಜೂ.15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-69008800, 49203888ಗೆ ಸಂಪರ್ಕಿಸಬಹುದು.
ಉಡುಪಿ ಜಿಲ್ಲೆಯ ಪಂಚಾಯತ್‌ಗಳು: ಹಾರಾಡಿ, ಚಾಂತಾರು, ವರಂಗ, ಬಡಾ, ಕಟಪಾಡಿ, ಪಡುಬಿದ್ರಿ, ಶಿರ್ವ, ಬೆಳ್ಮಣ್, ಬಸ್ರೂರು, ನಿಟ್ಟೆ, ಕುಕ್ಕುಂದೂರು, ಕಾಳಾವರ, ಅಮಾಸೆಬೈಲು, ಕೋಟೇಶ್ವರ, ಗಂಗೊಳ್ಳಿ, ತೆಂಕನಿಡಿಯೂರು, ಪೆರ್ಡೂರು, ಅಲೆವೂರು, ಉದ್ಯಾವರ, ಆರೂರು, ಕಾಂತಾವರ, ನಂದಳಿಕೆ, ಶಿರ್ಲಾಲು, ಯಡಮೊಗೆ, ಬಳ್ಕೂರು
ಇದನ್ನೂ ಓದಿ: ನೀಟ್ ಯುಜಿ-2023 ಪರೀಕ್ಷೆ ಫಲಿತಾಂಶ ಪ್ರಕಟ : ಆನ್ಲೈನ್ ಹೀಗೆ ಪರಿಶೀಲಿಸಿ
