Home » WhatsApp : ಇನ್ಮುಂದೆ ಕಂಪ್ಲೇಂಟ್ ಕೊಡೋದು ಇನ್ನಷ್ಟು ಸುಲಭ ; ವಾಟ್ಸಪ್ ಮೂಲಕ ಪೊಲೀಸರಿಗೆ ದೂರು ನೀಡಿ !

WhatsApp : ಇನ್ಮುಂದೆ ಕಂಪ್ಲೇಂಟ್ ಕೊಡೋದು ಇನ್ನಷ್ಟು ಸುಲಭ ; ವಾಟ್ಸಪ್ ಮೂಲಕ ಪೊಲೀಸರಿಗೆ ದೂರು ನೀಡಿ !

0 comments
WhatsApp service

WhatsApp Service: ವಾಟ್ಸಪ್ ಮೂಲಕ ಹಲವು ಜನರು ಪರಿಚಯವಾಗುತ್ತದೆ. ವಾಟ್ಸಪ್ ಒಳ್ಳೆದು ಕೆಟ್ಟದು ಎರಡೂ ಅಂಶಗಳನ್ನು ಒಳಗೊಂಡಿದೆ. ವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ WhatsApp ನಲ್ಲಿ ಹೊಸ ಸೇವೆ(WhatsApp service) ಆರಂಭವಾಗಿದೆ. ಬೆಂಗಳೂರು ಜನರಿಗೆ ಇದು ಅನುಕೂಲಕರವಾಗಿದೆ.

ಮೊದಲು ವಾಟ್ಸ್​ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡುವ ಸೇವೆ ಇತ್ತು. ಆದರೆ ಇದೀಗ ಅದೇ ಸೇವೆಯನ್ನು ಅಪ್ಡೇಟ್ ಮಾಡಲಾಗಿದ್ದು, WhatsApp ಮೂಲಕ ನೀಡಿದ ಮಾಹಿತಿಗೆ ಸ್ಪಂದಿಸುವ ಸೇವೆ ಆರಂಭಿಸಲಾಗಿದೆ. ಹೌದು, ಬೆಂಗಳೂರು ನಗರದ ಪೊಲೀಸರು ಈ ಸೇವೆಯನ್ನು ಆರಂಭಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ವಾಟ್ಸ್ಆ್ಯಪ್​ನಲ್ಲಿ ಸಹಾಯಕ್ಕೆ ಸ್ಪಂದಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಈ ಮೊದಲು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ತಿಳಿಸಬಹುದಿತ್ತು. ಆದರೆ, ಇನ್ನು ಮುಂದೆ ಆ ಸಂಖ್ಯೆಯ ಜೊತೆಗೆ ವಾಟ್ಸ್ಆ್ಯಪ್ ಮೂಲಕವೂ ಸಾರ್ವಜನಿಕರು ದೂರು ನೀಡಬಹುದು.

9480801000 ಈ ವಾಟ್ಸ್ಆ್ಯಪ್ ನಂಬರ್ ಅನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಮಾಡಿರಿ. ಏನಾದರೂ ದೂರು ಇದ್ದಲ್ಲಿ ನೀಡಬಹುದು. ಜೊತೆಗೆ ಸಹಾಯವಾಣಿ ಸಂಖ್ಯೆ 112 ಕ್ಕೆ ಕೂಡ ಕರೆ ಮಾಡಿ ದೂರು ನೀಡಬಹುದು.

ಇದನ್ನೂ ಓದಿ: Sandalwood : ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಲಕ್ಷ ಲಕ್ಷ ಹಣ ಪಡೆದ ನಿರ್ಮಾಪಕ ; ಕೊನೆಗೆ ಹಣ ವಾಪಸ್ ಕೊಡುವ ನೆಪದಲ್ಲಿ ನಟಿಯ ಮೇಲೆ ಅತ್ಯಾಚಾರ !

You may also like

Leave a Comment