Home » ಕಾಂಗ್ರೆಸ್‌ಗೆ ಸಮಾಜದಲ್ಲಿ ಶಾಂತಿ ಬೇಕಿಲ್ಲ: ಮಾಜಿ ಸಚಿವ ಡಾ ಅಶ್ವಥ್​ ನಾರಾಯಣ

ಕಾಂಗ್ರೆಸ್‌ಗೆ ಸಮಾಜದಲ್ಲಿ ಶಾಂತಿ ಬೇಕಿಲ್ಲ: ಮಾಜಿ ಸಚಿವ ಡಾ ಅಶ್ವಥ್​ ನಾರಾಯಣ

0 comments

Congress : ಕಾಂಗ್ರೆಸ್‌ ಸರ್ಕಾರಕ್ಕೆ(Congress )ಸಮಾಜದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ, ಗಲಭೆ ಗೊಂದಲದಲ್ಲೇ ಇರೋದಕ್ಕೆ ಮುಂದಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಬೆನ್ನಲ್ಲೆ ಬಿಜೆಪಿಯ ಮಾಜಿ ಸಚಿವ ಡಾ.ಅಶ್ವತ್ಥ್‌ ಮಾತನಾಡಿ, ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ಬಗ್ಗೆ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಬಿಜೆಪಿ ಖಂಡಿಸುತ್ತಿದೆ. ಸಮಾಜದಲ್ಲಿ ಶಾಂತಿ ನೆಲೆಸುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಅಶಾಂತಿ, ಗಲಭೆ, ಗೊಂದಲ ಇರಬೇಕೆಂದು ಕಾಂಗ್ರೆಸ್ ಬಯಸಿದೆ ಎಂದು ಕಿಡಿ ಕಾರಿದ್ದಾರೆ.

ಕಾನೂನು ಪ್ರಕಾರವೇ ಮತಾಂತರ ನಿಷೇಧ ಕಾಯ್ದೆಯಲ್ಲಿ ಲೋಪ ಇರಲಿಲ್ಲ. ಈಗ ಮತಾಂತರ ತಡೆ ಕಾಯ್ದೆ ವಾಪಸ್ ತಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಹಳೇ ಚಾಳಿಯನ್ನು ಮುಂದುವರೆಸುತ್ತಿದ್ದಾರೆ. ಗ್ಯಾರಂಟಿ ಆಧಾರಿತವಾಗಿ ಅಧಿಕಾರಕ್ಕೆ ಬಂದಿರುವುದನ್ನು ಕಾಂಗ್ರೆಸ್‌ ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಜನನ ನಿಯಂತ್ರಣ ಮಾತ್ರೆಗಳಿಂದ ಅಡ್ಡಪರಿಣಾಮಗಳಿವೆಯೇ?ಆಘಾತಕಾರಿ ಮಾಹಿತಿ ತಿಳ್ಕೊಳ್ಳಿ

You may also like

Leave a Comment