Home » Nalin Kumar kateel: ನಳಿನ್ ಕುಮಾರ್ ಕಟೀಲರ ಸವಣೂರು ಮನೆಯಲ್ಲಿ 9 ದಿನ ಗೌಪ್ಯ ಹೋಮ!! ಮನೆ, ಜಮೀನಿನ ದ್ವಾರಗಳು ಬಂದ್ !! ಕುತೂಹಲ ಸೃಷ್ಟಿಸಿದ ರಾಜ್ಯಾಧ್ಯಕ್ಷರ ರಹಸ್ಯ ನಡೆ!!

Nalin Kumar kateel: ನಳಿನ್ ಕುಮಾರ್ ಕಟೀಲರ ಸವಣೂರು ಮನೆಯಲ್ಲಿ 9 ದಿನ ಗೌಪ್ಯ ಹೋಮ!! ಮನೆ, ಜಮೀನಿನ ದ್ವಾರಗಳು ಬಂದ್ !! ಕುತೂಹಲ ಸೃಷ್ಟಿಸಿದ ರಾಜ್ಯಾಧ್ಯಕ್ಷರ ರಹಸ್ಯ ನಡೆ!!

by ಹೊಸಕನ್ನಡ
0 comments
Nalin Kumar kateel

Nalin kumar Kateel: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​(Nalin Kumar katee)ಅವರು ತಮ್ಮ ಪುತ್ತೂರು(Puttur) ಸಮೀಪದ ಸವಣೂರು(Savanur) ಗ್ರಾಮದ ಮನೆಯಲ್ಲಿ ಗೌಪ್ಯವಾಗಿ ವಿಶೇಷ ಹೋಮ ಮಾಡಿಸುತ್ತಿದ್ದು, ಮನೆಯ ಎಲ್ಲಾ ಪ್ರವೇಶ ದ್ವಾರಗಳನ್ನು ಬಂದ್ ಮಾಡಿಸಿದ್ದು, ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಆದರೀಗ ಈ ಹೋಮದ ವಿಚಾರವೀಗ ರಾಜಕೀಯ ಸ್ವರೂಪ ಪಡೆದುಕೊಂಡು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಬಿಜೆಪಿ ರಾಜ್ಯಾಧ್ಯಕ್ಷರಾದ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲ್‌ (Nalin kumar Kateel) ಅವರ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದು (Special Homa) ನಡೆಯುತ್ತಿದೆ. ಜೂ.11ರಂದು ಪ್ರಾರಂಭವಾಗಿರುವ ಈ ಹೋಮ ಸುಮಾರು 9 ದಿನಗಳ ಕಾಲ ನಡೆದು ಜೂ.18ಕ್ಕೆ ಪೂರ್ಣಾಹುತಿಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಂದಹಾಗೆ ವಿದ್ವಾನ್ ಬಾಲಕೃಷ್ಣ ಕಾರಂತ್(Vidwan balakrishna karanth) ನೇತೃತ್ವದಲ್ಲಿ ವಿಶೇಷ ಹೋಮ ಹವನ ನಡೆಯುತ್ತಿದ್ದು, ಈ ಹೋಮಾದಿ ಪೂಜೆಗಳಿಗೆ ಯಾರನ್ನೂ ಕರೆದಿಲ್ಲ. ಮನೆಯ ಪ್ರವೇಶ ದ್ವಾರಗಳನ್ನು ಬಂದ್ ಮಾಡಿಸಿರುವ ನಳಿನ್ ಕುಮಾರ್ ಕಟೀಲ್​​, ಮನೆ ಕಡೆ ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಸದ್ಯ 9 ದಿನಗಳ ಹೋಮ ಹವನದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿದೆ. ಮತ್ತೊಂದೆಡೆ ರಾಜಕೀಯ ಉದ್ದೇಶದಿಂದ ಹೋಮ ನಡೆಸಲಾಗುತ್ತಿದೆ ಎಂದು ಚರ್ಚೆ ಮಾಡಲಾಗುತ್ತಿದೆ.

ಇಷ್ಟೇ ಅಲ್ಲದೆ ಒಳಗೆ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯಕ್ರಮದ ವಿವರ ಹೊರ ಹೋಗಬಾರದೆಂಬ ಉದ್ದೇಶದಿಂದ ಜಮೀನಿನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿ ರಹಸ್ಯವನ್ನು ಕಾಪಾಡಲಾಗಿದೆ. ಇದು ಸ್ಥಳೀಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ಅಕ್ಕ ಪಕ್ಕದ ಮನೆಯವರಿಗೆ ಹಾಗೂ ನೆಂಟರಿಷ್ಟರಿಗೆ ಹೇಳಿ ಮಾಡುವುದು ವಾಡಿಕೆಯಾಗಿರುವಾಗ ಬಚ್ಚಿಟ್ಟು ಮಾಡುತ್ತಿರುವುದು ಯಾಕೆ ಎನ್ನುವುದು ಸ್ಥಳೀಯರ ಕೌತುಕಕ್ಕೆ ಕಾರಣವಾಗಿದೆ.

ಈ ಸಲದ ವಿಧಾನಸಭೆ ಚುನಾವಣೆಯಲ್ಲಿ(Assembly election) ಬಿಜೆಪಿ ಹೀನಾಯವಾಗಿ ಸೋಲುಂಡಿದ್ದು, ಇದಕ್ಕೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬುದು ಕಾರ್ಯಕರ್ತರ ನಂಬಿಕೆ. ಅಲ್ಲದೆ ಈ ನಡುವೆ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಮಂಗಳೂರು ಲೋಕಸಭಾ ಟಿಕೇಟ್ ನೀಡಬಾರದು ಎಂಬ ಚರ್ಚೆಯೂ ನಡೆಯುತ್ತಿದೆ. ಇದೆಲ್ಲದರ ನಡುವೆ ಹೋಮ ನಡೆಯುತ್ತಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಪಕ್ಷದಲ್ಲಿ ತಮ್ಮ ಸ್ಥಾನಮಾನಕ್ಕೆ ಸಂಚಕಾರ ಬಾರದಿರಲಿ, ಲೋಕಸಭಾ ಟಿಕೆಟ್‌ಗೆ ಕಂಟಕ ಬಾರದಿರಲಿ ಎಂಬ ಕಾರಣಕ್ಕಾಗಿ ಹೋಮ ನಡೆಸುತ್ತಿದ್ದಾರಾ ಎಂಬ ಚರ್ಚೆಯೂ ನಡೆಯುತ್ತಿದೆ.

ಇದನ್ನೂ ಓದಿ: Shilpa shetty: ಇಟಲಿಯಲ್ಲಿ ಬಿಕನಿ ತೊಟ್ಟು ಫೋಟೋ ಕ್ಲಿಕ್ಕಿಸಿದ ಶಿಲ್ಪಾ ಶೆಟ್ಟಿ!! ಇತ್ತ ಮುಂಬೈ ಮನೆಗೆ ನುಗ್ಗಿ ಬೆಲೆಬಾಳೋ ವಸ್ತು ದೋಚಿದ ಕಳ್ಳರು!!

You may also like

Leave a Comment