Home » ಮಡಿಕೇರಿ: ವಿದ್ಯಾರ್ಥಿನಿಯರ ಸ್ಕೂಟಿಗೆ ಬುಲೆಟ್ ಡಿಕ್ಕಿ, ಒಂದು ಸಾವು, ಮತ್ತೊಬ್ಬಳು ಗಂಭೀರ

ಮಡಿಕೇರಿ: ವಿದ್ಯಾರ್ಥಿನಿಯರ ಸ್ಕೂಟಿಗೆ ಬುಲೆಟ್ ಡಿಕ್ಕಿ, ಒಂದು ಸಾವು, ಮತ್ತೊಬ್ಬಳು ಗಂಭೀರ

by ಹೊಸಕನ್ನಡ
0 comments

Accident in Madikeri :ಕೊಡಗು ಬೈಕ್​ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಕಾಲೇಜು ವಿದ್ಯಾರ್ಥಿನಿ ಓರ್ವಳು ಸಾವಿಗೀಡಾಗಿದ್ದು, ಮತ್ತೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ (Accident in Madikeri) ಕುಶಾಲನಗರದ ಬಳಿ ನಡೆದಿದೆ.

ಕುಶಾಲನಗರದ ನಿವಾಸಿ, 21 ವರ್ಷದ ಭಾವನ ಮೃತ ವಿದ್ಯಾರ್ಥಿನಿ. ಬುಲೆಟ್ ಬೈಕ್ ಮತ್ತು ಸ್ಕೂಟಿ ಮಧ್ಯ ನಡೆದ ಮುಖಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಬುಲೆಟ್ ಬೈಕ್​ ಮಡಿಕೇರಿ ಕಡೆಗೆ ಹೋಗುತ್ತಿದ್ದ, ಮಡಿಕೇರಿಯಿಂದ ಕುಶಾಲನಗರ ಕಡೆಗೆ ಹೊರಟಿದ್ದ ಇಬ್ಬರು ವಿದ್ಯಾರ್ಥಿನಿಯರಿದ್ದ ಸ್ಕೂಟಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಕುಶಾಲನಗರದ ಇಂದಿರಾ ಬಡಾವಣೆಯ ಪೂಣಚ್ಚ ಎಂಬುವರ ಪುತ್ರಿ ಭಾವನಾ ಮೃತಪಟ್ಟ ಹುಡುಗಿ. ಬೈಕ್ ಸ್ಕೂಟಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಚಿಕಿತ್ಸೆಗೆಂದು ಮೈಸೂರಿಗೆ ಸಾಗಿಸುವಾಗ ಮಾರ್ಗಮಧ್ಯೆ ಆಕೆ ಅಸುನೀಗಿದ್ದಾಳೆ. ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿನಿಯನ್ನು ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಮೃತ ಭಾವನಾ ಮತ್ತು ಗಾಯಗೊಂಡ ವಿದ್ಯಾರ್ಥಿನಿಯರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ‌.ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು. ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: MobilePhone: ಯಾರಿಗುಂಟು ಯಾರಿಗಿಲ್ಲ ಬಿಗ್ ಆಫರ್, ಸರ್ಕಾರದಿಂದ ಮಹಿಳೆಯರಿಗೆ ಸ್ಮಾರ್ಟ್ಫೋನ್ ಕೊಳ್ಳಲು ಖಾತೆಗೆ ಹಣ ಜಮೆ

You may also like

Leave a Comment