Python in toilet viral photo : ಸರೀಸೃಪಗಳಲ್ಲಿ ಅತಿದೊಡ್ಡ ಹಾವು ಹೆಬ್ಬಾವು. ಸಾಮಾನ್ಯವಾಗಿ, ದೂರದಿಂದ ಹಾವುಗಳನ್ನು ನೋಡಿ ಜನರು ಭಯಭೀತರಾಗುವುದು ಸಾಮಾನ್ಯ. ಅಂತಹ ಹೆಬ್ಬಾವು ನಮ್ಮ ಮುಂದೆ ಬಂದರೆ ಹೃದಯ ಬಡಿದುಕೊಳ್ಳುವುದು ಸಹಜ. ಇದೇ ರೀತಿಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಶೌಚಾಲಯದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಮಹಡಿಯನ್ನು ನೋಡುತ್ತಿದ್ದಂತೆ ಹೆಬ್ಬಾವು (Python in toilet viral photo) ಕಂಡಿದ್ದು ಬೆಚ್ಚಿಬಿದ್ದಿದ್ದಾನೆ. ಅಲ್ಲದೇ ಇದರ ಫೋಟೋಗಳು ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ.
ಇದು ಸರಿ ಸುಮಾರು 6 ಅಡಿ ಹೊಂದಿದ ಹೆಬ್ಬಾವು ಆಗಿತ್ತು. ಕೂಡಲೇ ಎಚ್ಚೆತ್ತುಕೊಂಡು ಹಾವು ಹಿಡಿಯುವವರಿಗೆ ತಕ್ಷಣ ಮಾಹಿತಿ ನೀಡಲಾಯಿತು. ಕಷ್ಟಪಟ್ಟು ಹೆಬ್ಬಾವನ್ನು ಸೆರೆಹಿಡಿಯಲಾಯಿತು. ಈ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಲಾಗಿದೆ. ಅಲ್ಲದೇ ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದು, ಸ್ವಲ್ಪ ತಡವಾಗಿದ್ರೆ ಸಾವು ಗ್ಯಾರಂಟಿ ಎಂದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಚಳಿಗಾಲ ಬಂದ್ರೆ ಸಾಕು. ಹೆಬ್ಬಾವುಗಳು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿರುತ್ತದೆ. ಇದೀಗ ಹೆಬ್ಬಾವೊಂದು ಶೌಚಾಲಯದಲ್ಲಿ ಪ್ರತ್ಯಕ್ಷಗೊಂಡಿದ್ದು, ಹೆಬ್ಬಾವುಗಳು 13 ಅಡಿ ಉದ್ದದವರೆಗೆ ಬೆಳೆಯುತ್ತವೆ. ಹೆಬ್ಬಾವಿಗೆ ಯಾವುದೇ ಹಾನಿ ಮಾಡದಿದ್ದರೆ. ನಮಗೆ ಏನನ್ನೂ ಮಾಡುವುದಿಲ್ಲ ಎಂದು ಹಾವು ಹಿಡಿಯುವ ಜಾಕ್ಸನ್ ಹೇಳಿದರು. ಇವು ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾ ರಾಜ್ಯವನ್ನು ಹೊರತುಪಡಿಸಿ. ಇದು ಹೆಚ್ಚಾಗಿ ಬೇರೆಡೆ ಕಂಡುಬರುತ್ತದೆ
