Home » Anna bhagya Scheme: ‘ಅಕ್ಕಿ’ಗಾಗಿ ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್ ; ಅನ್ನಭಾಗ್ಯ ಘೋಷಣೆಗೂ ಮುನ್ನ ಕೇಂದ್ರವನ್ನು ಸಂಪರ್ಕಿಸಿಲ್ಲ – ಸುಭೋದ್ ಕುಮಾರ್ ಸಿಂಗ್ !

Anna bhagya Scheme: ‘ಅಕ್ಕಿ’ಗಾಗಿ ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್ ; ಅನ್ನಭಾಗ್ಯ ಘೋಷಣೆಗೂ ಮುನ್ನ ಕೇಂದ್ರವನ್ನು ಸಂಪರ್ಕಿಸಿಲ್ಲ – ಸುಭೋದ್ ಕುಮಾರ್ ಸಿಂಗ್ !

0 comments
Anna Bhagya scheme

Anna bhagya Scheme: ಕಾಂಗ್ರೆಸ್ ಸರ್ಕಾರ (Congress Government) 5 ಗ್ಯಾರಂಟಿಗಳ ಪೈಕಿ ’10 ಕೆ. ಜಿ ಅಕ್ಕಿ ಉಚಿತ’ (Anna bhagya Scheme) ಯೋಜನೆಯನ್ನು ಜುಲೈ‌ ತಿಂಗಳಲ್ಲಿ ಜಾರಿಗೆ ತರಲು ಯೋಜನೆ ರೂಪಿಸಿದೆ. ಆದರೆ, ಈ ಮಧ್ಯೆ ‘ಅಕ್ಕಿ’ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಭೋದ್ ಕುಮಾರ್ ಸಿಂಗ್ (Subodh kumar singh) ಅವರು, ಅನ್ನಭಾಗ್ಯ ಯೋಜನೆಯ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿಲ್ಲ, ಸಮಾಲೋಚನೆ ನಡೆಸಿಲ್ಲ. ಇದು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಆಹಾರ ಧಾನ್ಯವನ್ನು ಸಂಗ್ರಹಿಸಿ ವಿತರಿಸುವ ಜವಾಬ್ದಾರಿಯನ್ನು ಅವರದ್ದು. ಈ ಯೋಜನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ಹೆಚ್ಚುವರಿ ಅಕ್ಕಿ ನೀಡುವಂತೆ ತಮಿಳುನಾಡು ಸರ್ಕಾರ ಕೂಡ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಮನವಿ ಮಾಡಿದೆ‌. ಆದರೆ, ಕೇಂದ್ರದಲ್ಲಿ ದಾಸ್ತಾನು ಇಲ್ಲ ಎಂದು ತಿಳಿಸಿದ್ದೇವೆ. ಹಲವು ರಾಜ್ಯಗಳು ಅನೇಕ ಆಹಾರ ಧಾನ್ಯ ಯೋಜನೆಗಳನ್ನು ಹೊಂದಿವೆ. ಸ್ವತಃ ಅಕ್ಕಿಯನ್ನು ಸಂಗ್ರಹಿಸಿ, ವಿತರಿಸುತ್ತಿವೆ. ಇವುಗಳಂತೆ ಕರ್ನಾಟಕ ಕೂಡ ಮಾಡಬಹುದು ಎಂದು ಸಲಹೆ ನೀಡಿದರು.

ಸದ್ಯ ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಜೂ.20 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯ-ಕೇಂದ್ರ ಫೈಟ್ ಮುಂದುವರೆದಿದೆ. ಜನರಿಗೆ ಜುಲೈ ವೇಳೆಗೆ ಘೋಷಿಸಿದಂತೆ ಉಚಿತ ಅಕ್ಕಿ ಸಿಗುತ್ತಾ ಕಾದುನೋಡಬೇಕಿದೆ.

ಇದನ್ನೂ ಓದಿ: SBI RBO Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶ ; 194 ಹುದ್ದೆಗಳಿಗೆ ಅರ್ಜಿ ಆಹ್ವಾನ , ತಕ್ಷಣ ಅರ್ಜಿ ಸಲ್ಲಿಸಿ !

You may also like

Leave a Comment