Home » Anand Mahindra: ಖ್ಯಾತ ಉದ್ಯಮಿಯಿಂದ ಉಡುಪಿಯ ವರಂಗದ ವರ್ಣನೆಯೊಂದಿಗೆ ಶ್ಲಾಘಣೆ!ಕರಾವಳಿಗರ ಮುಖದಲ್ಲಿ ಮಂದಹಾಸ

Anand Mahindra: ಖ್ಯಾತ ಉದ್ಯಮಿಯಿಂದ ಉಡುಪಿಯ ವರಂಗದ ವರ್ಣನೆಯೊಂದಿಗೆ ಶ್ಲಾಘಣೆ!ಕರಾವಳಿಗರ ಮುಖದಲ್ಲಿ ಮಂದಹಾಸ

5 comments
Anand Mahindra

Anand Mahindra: ದೇಶದ ಅತ್ಯುನ್ನತ ಉದ್ಯಮಪತಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಬಗ್ಗೆ ನಮೆಗೆಲ್ಲರಿಗೂ ತಿಳಿದಿದೆ. ಇಂತಹ ಸಾಧಕರ ಹೊಗಳಿಕೆಗೆ ಪಾತ್ರರಾಗುವುದು ಅಷ್ಟು ಸುಲಭದ ಮಾತಲ್ಲ. ಹೌದು, ಪ್ರತಿ ಬಾರಿಯೂ ಏನಾದರೂ ಒಂದು ವಿಶೇಷಗಳನ್ನ ಹುಡುಕಿ ತಿಳಿಸುವ ಆನಂದ್ ಮಹೀಂದ್ರಾ (Anand Mahindra) ಅವರು ಈ ಬಾರಿ ಕರ್ನಾಟಕದ ಅದರಲ್ಲೂ ಉಡುಪಿಯ ಈ ಪ್ರದೇಶವನ್ನು ಗುರುತಿಸಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ.

ಮುಖ್ಯವಾಗಿ ಆಗುಂಬೆಯ ತಟದಲ್ಲಿರುವ ಹೆಬ್ರಿಯಿಂದ ಕಾರ್ಕಳಕ್ಕೆ ತೆರಳುವ ಮಾರ್ಗದಲ್ಲಿ ವರಂಗ ಕ್ಷೇತ್ರ ಕಾಣ ಸಿಗುತ್ತದೆ. ಇಲ್ಲಿನ ಕೆರೆಯ ಮಧ್ಯದಲ್ಲಿರುವ ಕೆರೆ ಬಸದಿ ದೇವಸ್ಥಾನಕ್ಕೆ ದೋಣಿಯ ಮೂಲಕ ಸಾಗಿ ಅಲ್ಲಿನ ಪ್ರಕೃತಿ ವೀಕ್ಷಣೆ ಮಾಡುವುದು ಒಂದು ಅಧ್ಬುತ ಅನುಭವ. ಇದೀಗ ಈ ವರಂಗ ಆನಂದ ಮಹೀಂದ್ರಾ ಅವರ ಕಣ್ಮನೆ ಸೆಳೆದಿದೆ.

ಉಡುಪಿ ಜಿಲ್ಲೆಯಲ್ಲಿ ಕಾಣಸಿಗುವ ಜೈನ ಧರ್ಮೀಯರ ಅತ್ಯಂತ ಪವಿತ್ರವಾದ ಸ್ಥಳ ವರಂಗ. ವರಂಗ ರಾಜನ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಈ ಸ್ಥಳವನ್ನು ವರ್ಗ ಎಂದು ಕರೆಯಲಾಗುತ್ತಿತ್ತು ಎನ್ನಲಾಗುತ್ತದೆ. ಇಲ್ಲಿ ವಿಶೇಷವಾಗಿ ಮೂರು ಬಸದಿಗಳು ಇದ್ದು, ಜನಾಕರ್ಷಣೀಯ ಕೇಂದ್ರವಾಗಿದೆ ಎಂದರೆ ತಪ್ಪಾಗಲಾರದು.

ಮುಖ್ಯವಾಗಿ ವರಂಗದ ಕೆರೆ ಬಸದಿಗೆ 850 ವರ್ಷ, ನೇಮಿನಾಥ ಬಸದಿ 1200 ವರ್ಷ ಮತ್ತು ಚಂದ್ರನಾಥ ಬಸದಿ 1000 ವರ್ಷಗಳಷ್ಟು ಹಳೆಯದಾಗಿದ್ದು ಈ ಸ್ಥಳಕ್ಕೆ ಐತಿಹಾಸಿಕ ಮಹತ್ವವಿದೆ. ಸಿನಿಮಾ ಗಳಲ್ಲಿ ಈ ಕ್ಷೇತ್ರದ ಚಿತ್ರೀಕರಣ ಬಂದ ಬಳಿಕ ನೂರಾರು ಜನ ವರಂಗ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದರು.

ಸದ್ಯ ವರಂಗದ ಕುರಿತಾಗಿ ದೇಶದ ಅತ್ಯುನ್ನತ ಉದ್ಯಮಿ ಪತಿಗಳಲ್ಲಿ ಓರ್ವರಾದ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, ಪ್ರಾಕೃತಿಕವಾಗಿ ಸುಂದರವಾಗಿರುವ ಪ್ರದೇಶ ಎಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ವರಂಗ ಕ್ಷೇತ್ರದ ಕುರಿತಾಗಿ ದೇಶದಾದ್ಯಂತ ಕುತೂಹಲ ಮೂಡುವಂತೆ ಮಾಡಿದ್ದಾರೆ.

ಸದ್ಯ ವರಂಗ ಕ್ಷೇತ್ರದ ಕುರಿತಾಗಿ ಸಾಕಷ್ಟು ಕರೆಗಳು ಬರುತ್ತಿರುವುದು ಆನಂದ್ ಮಹೀಂದ್ರಾ ಅವರ ಟ್ಟೀಟ್ ನ ಪ್ರಭಾವ ಎಂದರೆ ತಪ್ಪಾಗಲಾರದು. ಸದ್ಯ ವರಂಗ ಕ್ಷೇತ್ರ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

 

 

 

 

ಇದನ್ನು ಓದಿ: Film industry Love U Shankar: ‘ಆದಿಪುರುಷ’ ನಂತರ ಶಿವನ ಭಕ್ತರಿಗಾಗಿ ಬಂದಿದೆ ಹೊಸ ಚಿತ್ರ ‘ಲವ್ ಯು ಶಂಕರ್’! ಚಿತ್ರ ಬಿಡುಗಡೆಗೆ ಸಿದ್ಧ!!! 

 

You may also like

Leave a Comment