Viral Video: ಆಸ್ಪತ್ರೆಗಳಲ್ಲಿ ಸರಿಯಾದ ಆಂಬುಲೆನ್ಸ್ (ambulance) ವ್ಯವಸ್ಥೆ ಇಲ್ಲದೆ ಜನರು ಮೃತ ದೇಹವನ್ನು ತಮ್ಮ ಸ್ವಂತ ವಾಹನದಲ್ಲಿ ಕೊಂಡೊಯ್ಯುವ ಘಟನೆ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಇದೀಗ ಅಂತಹದೇ ಅಮಾನವೀಯ ಘಟನೆ ಒಡಿಶಾದ (odisha) ಸುವರ್ಣಪುರ ಜಿಲ್ಲೆಯಲ್ಲಿ ನಡೆದಿದೆ (Viral Video). ಅಂಬುಲೆನ್ಸ್ ಸಿಗದೆ ವೃದ್ಧೆಯ ಶವವನ್ನು ಸೈಕಲ್ ನಲ್ಲಿ ಸಾಗಿಸಿದ ಘಟನೆ ಬೆಳಕಿಗೆ ಬಂದಿದೆ.
ರುಕ್ಕಿಣಿ ಸಾಹು ಎಂಬ ವೃದ್ಧೆಯನ್ನು ಅನಾರೋಗ್ಯದ ಹಿನ್ನೆಲೆ ಬಿವಿಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಆದರೆ, ವೃದ್ದೆ
ನಿರ್ಜಲೀಕರಣದಿಂದಾಗಿ ಕೇಂದ್ರದಲ್ಲಿ ಸಾವನ್ನಪ್ಪಿದ್ದಾರೆ (death). ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಬಳಿಕ ಡೆತ್ ರಿಪೋರ್ಟ್ ನೀಡಲು ಸಾಕಷ್ಟು ವಿಳಂಬ ಮಾಡಿದ್ದಲ್ಲದೆ ಶವ ಸಾಗಿಸಲು ಆಂಬುಲೆನ್ಸ್ ಒದಗಿಸಲಿಲ್ಲ.
ವೃದ್ಧೆಯ ಕುಟುಂಬಸ್ಥರು ಶವವನ್ನು ಸಾಗಿಸಲು ಆಂಬುಲೆನ್ಸ್ ನೀಡುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿದ ಅವರು ಗಂಟೆಗಟ್ಟಲೆ ಕಾದರೂ ಆಂಬುಲೆನ್ಸ್ ಕಳಿಸಿ ಕೊಡಲೇ ಇಲ್ಲ. ಕಾದು ಕಾದು ಸುಸ್ತಾದ ಕುಟುಂಬಸ್ಥರು ವೃದ್ಧೆಯ ಶವವನ್ನು ಸೈಕಲ್ ಮೇಲೆ ಸಾಗಿಸಿದ್ದಾರೆ. ಸದ್ಯ ಘಟನೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಬೆಂಗಳೂರಿನ ಪಬ್ಗಳ ಮೇಲೆ ಪೊಲೀಸರ ಅಟ್ಯಾಕ್..! ಆಫ್ರಿಕನ್ ಪ್ರಜೆಗಳು ವಶಕ್ಕೆ
